ಅನೇಕರ ಆಸೆ, ಹಾರೈಕೆ ಈಡೇರಿತು; Anchor Anushree-Roshan ಜೋಡಿಗೆ ಯಾರೂ ದೃಷ್ಟಿ ಹಾಕ್ಬೇಡಿ..ಪ್ಲೀಸ್

Published : Dec 08, 2025, 12:18 PM IST

Anchor Anushree News: ಕಳೆದ ಆಗಸ್ಟ್‌ ತಿಂಗಳಿನಲ್ಲಿ ನಿರೂಪಕಿ ಅನುಶ್ರೀ, ರೋಶನ್‌ ಮದುವೆ ಆಗಿದ್ದಾರೆ. ಕನ್ನಡದಲ್ಲಿ ನಿರೂಪಣೆ ಮೂಲಕ ಗಮನಸೆಳೆದಿರುವ ಅನುಶ್ರೀ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಗಿದೆ. ಇತ್ತೀಚೆಗೆ ಪತಿಯ ಜೊತೆಗಿನ ಫೋಟೋ ಹಂಚಿಕೊಂಡಿದ್ದು, ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

PREV
16
ರೆಸಾರ್ಟ್‌ನಲ್ಲಿ ಮದುವೆ

ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್‌ವೊಂದರಲ್ಲಿ ಕುಟುಂಬಸ್ಥರು, ಆತ್ಮೀಯರು, ಚಿತ್ರರಂಗದ ಗಣ್ಯರ ಸಾಕ್ಷಿಯಾಗಿ ಅವರು ಮದುವೆಯಾಗಿದ್ದರು. ಮಂತ್ರ ಮಾಂಗಲ್ಯದ ಮೂಲಕ ಮದುವೆ ಆಗುವ ಆಸೆ ಇತ್ತಾದರೂ ಕೂಡ, ಒಂದಿಷ್ಟು ನಿಯಮಗಳು ಇರೋದಿಕ್ಕೆ ಅವರು ಸಿಂಪಲ್‌ ಆಗಿ ಮದುವೆಯಾಗಿದ್ದರಂತೆ. ಆದರೆ ಅವರು ಅಂದುಕೊಂಡಿದ್ದಕ್ಕಿಂತ ಸ್ವಲ್ಪ ಗ್ರ್ಯಾಂಡ್‌ ಆಗಿ ನಡೆದಿದೆ ಎಂದು ಅವರೇ ಹೇಳಿದ್ದರು.

26
ಐಟಿ ಉದ್ಯೋಗಿ ರೋಶನ್‌

ಅಂದಹಾಗೆ ರೋಶನ್‌ ಅವರು ಐಟಿ ಉದ್ಯೋಗಿ. ಪುನೀತ ಪರ್ವ ಕಾರ್ಯಕ್ರಮದಲ್ಲಿ ರೋಶನ್‌ ಹಾಗೂ ಅನುಶ್ರೀ ಭೇಟಿಯಾಗಿತ್ತು. ಅಲ್ಲಿಂದ ಬೆಳೆದ ಸ್ನೇಹ ಪ್ರೀತಿಗೆ ತಿರುಗಿದೆ. ರೋಶನ್‌ ಅವರು ಕೊಡಗಿನವರು. ಅನುಶ್ರೀ ಮಂಗಳೂರಿನ ಬೆಡಗಿ. ಈ ಪ್ರೀತಿಗೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದು, ಮದುವೆಯಾಗಿದೆ.

36
ನಿರ್ದೇಶಕ ಆರತಕ್ಷತೆಯಲ್ಲಿ ಭಾಗಿ

ರೋಶನ್‌ ಹಾಗೂ ಅನುಶ್ರೀ ಅವರು ‘777 ಚಾರ್ಲಿ’ ಸಿನಿಮಾ ನಿರ್ದೇಶಕ ಕಿರಣ್‌ ರಾಜ್‌ ಮದುವೆ ಆರತಕ್ಷತೆಯಲ್ಲಿ ಭಾಗಿಯಾಗಿದ್ದರು. ಕಿರಣ್ ಹಾಗೂ ಅನುಶ್ರೀ ಅವರು ಒಂದೇ ಊರಿನವರು, ಚಿತ್ರರಂಗದಲ್ಲಿ ಆಕ್ಟಿವ್‌ ಆಗಿರೋದಿಕ್ಕೆ ಸ್ನೇಹ ಬೆಳೆದಿತ್ತು.

46
ಫೋಟೋ ತೆಗೆಸಿಕೊಂಡ್ರು

ರೋಶನ್‌ ಹಾಗೂ ಅನುಶ್ರೀ ಜೋಡಿಯು ಈ ಆರತಕ್ಷತೆಯಲ್ಲಿ ಭಾಗಿಯಾಗಿದ್ದು, ಖುಷಿಯಿಂದ ಒಂದಿಷ್ಟು ಸಮಯವನ್ನು ಕಳೆದಿದೆ. ಅಷ್ಟೇ ಅಲ್ಲದೆ ಫೋಟೋ ತೆಗೆಸಿಕೊಂಡಿದೆ. ಈಗ ಅನುಶ್ರೀ ಅವರು ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

56
ಅನೇಕರ ಆಸೆ ಈಡೇರಿತು

ರೋಶನ್‌ ಹಾಗೂ ಅನುಶ್ರೀ ಅವರು ಮದುವೆ ಆಗಿರೋದು ತಡವಾಗಿದೆ. ಈ ಜೋಡಿ ಬದುಕಿಗೆ ಆದಷ್ಟು ಬೇಗ ಹೊಸ ಸದಸ್ಯರ ಆಗಮನವಾಗಲಿ ಎಂದು ನಟಿ ತಾರಾ, ಜ್ಯೋತಿ ಪ್ರೇಮ್ ಹಾರೈಸಿದ್ದರು. ಅಂದಹಾಗೆ ಅನುಶ್ರೀ ಅವರು ಮಾಂಗಲ್ಯ ಧರಿಸಿ, ಹಣೆಗೆ ಬೊಟ್ಟು ಇಟ್ಟು, ಸೀರೆಯಲ್ಲಿ ಶ್ರೀಮತಿಯಾಗಿ ಕಂಗೊಳಿಸಬೇಕು, ಅದನ್ನು ನೋಡಬೇಕು ಎಂದು ಅನೇಕರು ಕನಸು ಕಂಡಿದ್ದರು. ಈ ಫೋಟೋ ನೋಡಿ ಅನೇಕರು ಖುಷಿಪಟ್ಟಿದ್ದು, ಯಾರ ದೃಷ್ಟಿಯೂ ಬೀಳದಿರಲಿ ಎಂದು ಕೂಡ ಕೆಲವರು ಹೇಳುತ್ತಿದ್ದಾರೆ.

66
ನಿರೂಪಣೆಯಲ್ಲಿ ಭಾಗಿ

ಅನುಶ್ರೀ ಅವರು ಎಂದಿನಂತೆ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಶೋ ಸೇರಿದಂತೆ ಸಿನಿಮಾ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುತ್ತಿದ್ದಾರೆ. 

ಅಂದಹಾಗೆ ರೋಶನ್‌ ಅವರು ಸಖತ್‌ ಆಗಿ ಅಡುಗೆ ಮಾಡುತ್ತಾರಂತೆ. ಅವರ ಅಡುಗೆಯನ್ನು ತಿನ್ನೋದು ಅನುಶ್ರೀಗೆ ಇಷ್ಟವಂತೆ. 

Read more Photos on
click me!

Recommended Stories