ಬಿಗ್‌ಬಾಸ್‌ ಕನ್ನಡ 10 : ಬ್ಲೂ ಫಿಲ್ಮ್ ಬಗ್ಗೆ ಕೇಳಿದ ಪ್ರಶ್ನೆಗೆ ಕುಪಿತಗೊಂಡಿದ್ದ ನಟಿ ತನಿಶಾ

Published : Oct 10, 2023, 11:25 AM IST

ಬಿಗ್ ಬಾಸ್ ಕನ್ನಡ ಸೀಸನ್ 10 ತುಂಬಾನೆ ಇಂಟ್ರೆಸ್ಟಿಂಗ್ ಆಗಿದೆ. ಈ ಸೀಸನ್ ಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರಲ್ಲಿ ಒಬ್ಬರು ತನಿಶಾ ಕುಪ್ಪಂದ. ಇವರ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ.   

PREV
18
ಬಿಗ್‌ಬಾಸ್‌ ಕನ್ನಡ 10 : ಬ್ಲೂ ಫಿಲ್ಮ್ ಬಗ್ಗೆ ಕೇಳಿದ ಪ್ರಶ್ನೆಗೆ ಕುಪಿತಗೊಂಡಿದ್ದ ನಟಿ ತನಿಶಾ

ಕನ್ನಡದ ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದ ನಟಿ ತನಿಶಾ ಕುಪ್ಪಂದ ಇದೀಗ ಬಿಗ್ ಬಾಸ್ ಸೀಸನ್ 10 (Bigg Boss season 10) ರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ನಟಿಯಾಗಿ ಕೆಲವು ಕಾಂಟ್ರವರ್ಸಿಗಳಿಂದ ಸುದ್ದಿಯಾಗಿದ್ದ ನಟಿ ಇವರು. 
 

28

ಮೂವತ್ತು ವರ್ಷದ ತನಿಶಾ (Tanisha Kuppanda) ಹುಟ್ಟಿದ್ದು ಕೊಡಗಿನಲ್ಲಿ. ಇವರು ಅಲ್ಲಿ ಸ್ಕೂಲಿಂಗ್ ಮಾಡಿದ್ದು, ಕಾಲೇಜು ಓದಿದ್ದು ಬೆಂಗಳೂರಿನಲ್ಲಿ. ಹಾಡೋದು, ಡ್ರೈವ್ ಮಾಡೋದು, ಶಾಪಿಂಗ್ ಮಾಡೊದು ಇವರ ಹವ್ಯಾಸಗಳು. ಜೊತೆಗೆ ಅಪ್ಪುಸ್ ಕಿಚನ್ ಎಂಬ ರೆಸ್ಟೋರೆಂಟ್ ಸಹ ಹೊಂದಿದಾರೆ. 
 

38

ಮಂಗಳಗೌರಿ ಮದುವೆ' ಧಾರಾವಾಹಿ ಮೂಲಕ ಮನೆಮಾತಾಗಿದ್ದ ಇವರು 'ಪೆಂಟಗನ್' ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿಕೊಟ್ಟಿದ್ದರು. ಈ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಇದಲ್ಲದೇ ಕೋಮಲ್ ಜೊತೆ ಉಂಡೆನಾಮ ಸಿನಿಮಾದಲ್ಲೂ ಇವರು ಬೋಲ್ಡ್ ಪಾತ್ರದಲ್ಲಿ ಮಿಂಚಿದ್ದರು. 
 

48

ಹೆಚ್ಚಾಗಿ ಬೋಲ್ಡ್ ಆಗಿ ಕಾಣಿಸುತ್ತಿದ್ದ ಇವರನ್ನು ಯೂಟ್ಯೂಬ್ ನಲ್ಲಿ ಇಂಟರ್ವ್ಯೂ ಮಾಡುವಾಗ ಒಬ್ಬರು ನೀವು ನೀಲಿ ಚಿತ್ರದಲ್ಲಿ ನಟಿಸಿದ್ದೀರಾ ಎಂದು ಪ್ರಶ್ನೆ ಕೇಳಿದ್ದು, ಇದರಿಂದ ತನಿಶಾ ಕೋಪಗೊಂಡು ಕೇಸ್ ದಾಖಲಿಸಿದ್ದರು. ಈ ಕಾಂಟ್ರವರ್ಸಿಯಿಂದ ಅವರು ಸುದ್ದಿಯಾಗಿದ್ದರು.
 

58

ಇದೀಗ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ಬಂದಿರುವ ತನಿಶಾ ನನ್ನ ದಾರಿ ನಾನೇ ಕ್ರಿಯೇಟ್ ಮಾಡಿಕೊಂಡಿದ್ದೇನೆ. ನನ್ನ ದಾರಿಯಲ್ಲಿ ಬಂದ ಯಾವ ಅವಕಾಶವನ್ನೂ ನಾನು ಬಿಡಲ್ಲ ಎಂದು ಹೇಳಿಕೊಂಡು ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ. 
 

68

ತನಿಶಾ ಅವರ ಬೆಸ್ಟ್ ಫ್ರೆಂಡ್ ಕನ್ನಡಿಯಂತೆ. ಅಲ್ಲದೇ ತಾಯಿ ಮತ್ತು ನೆಚ್ಚಿನ ನಾಯಿ ಇಬ್ಬರನ್ನೂ ಅತ್ಯಾಪ್ತವಾಗಿ ಪ್ರೀತಿಸುವ ತನಿಶಾ, ಊಟದ ವಿಷಯಕ್ಕೆ ಬಂದರೆ ಏನು ಮಾಡೋದಕ್ಕೂ ರೆಡಿ ಅಂತಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಏನ್ ಮಾಡ್ತಾರೆ ನೋಡ್ಬೇಕು. 

78

ವಿಲನ್‌ ಪಾತ್ರಗಳ ಮೂಲಕವೇ ಗುರ್ತಿಸಿಕೊಂಡಿರುವ ತನಿಶಾ, ಬಿಗ್‌ಬಾಸ್‌ ಮನೆಯೊಳಗೆ ತೆರೆಮೇಲಿನ ಮತ್ತು ಬದುಕಿನಲ್ಲಿನ ತನ್ನ ಇಮೇಜ್‌ ಬದಲಿಸಿಕೊಳ್ಳಲು ಹೋಗುವ ಆಸೆಯಲ್ಲಿದ್ದಾರೆ. ‘10’ ಸಂಖ್ಯೆಯ ಸ್ಪೆಷಲ್‌ ನಂಬಿಕೆಯೊಂದಿಗೆ ಬರುತ್ತಿರುವ ಅವರಿಗೆ ಗೆದ್ದೇ ಗೆಲ್ಲುವೆ ಎಂಬ ನಂಬಿಕೆ ಇದೆಯಂತೆ. 
 

88

ತನಿಷಾ ಬಾಡಿ ಗಾರ್ಡ್, ಪೆಂಟಗಾನ್, ಮೆದೈ, ಪಾರಿಜಾತ, ದೇವ್  S/o ಮುದ್ದೇಗೌಡ, ಗೋಗುಲ ಕೃಷ್ಣ, ರೋಮಿಯೋ, ಉಂಡೆನಾಮ ಮೊದಲಾದ ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಇವರು ಕನ್ನಡ, ತಮಿಳು, ತೆಲುಗು ಸೀರಿಯಲ್‌ಗಳಲ್ಲೂ ಗುರುತಿಸಿಕೊಂಡಿದ್ದಾರೆ. 
 

Read more Photos on
click me!

Recommended Stories