Bigg Boss ಗೆ ಯಾರೇ ಬಂದ್ರೂ ಈ ಇಬ್ರು ಬ್ಯೂಟಿನಾ ಬೀಟ್ ಮಾಡೋಕೆ ಸಾಧ್ಯ ಇಲ್ಲ ಅಂತೆ..!

Published : Nov 02, 2025, 02:47 PM IST

ಬಿಗ್ ಬಾಸ್ ಮನೆಗೆ ಅದೆಷ್ಟೇ ಜನ ಮಹಿಳಾ ಸ್ಪರ್ಧಿಗಳು ಬಂದ್ರೂ ಕೂಡ ಈ ಇಬ್ಬರು ಸ್ಪರ್ಧಿಗಳನ್ನು ಬೀಟ್ ಮಾಡೋದಕ್ಕೆ ಸಾಧ್ಯಾನೆ ಇಲ್ಲ ಎನ್ನುತ್ತಿದ್ದಾರೆ ವೀಕ್ಷಕರು. ಆ ಸ್ಪರ್ಧಿಗಳು ಯಾರು ಅನ್ನೋದನ್ನು ನೀವೂ ಗೆಸ್ ಮಾಡಿರಬಹುದು ಅಲ್ವ? ಅದು ದೀಪಿಕಾ ದಾಸ್ ಮತ್ತು ಸಂಗೀತಾ ಶೃಂಗೇರಿ.

PREV
16
ಬಿಗ್ ಬಾಸ್ ಕನ್ನಡ

ಕನ್ನದ ಬಿಗ್ ಬಾಸ್ ಪ್ರತಿ ಸೀಸನ್ ಬಂದಾಗಲೂ ಜನರಿಗೆ ಒಬ್ಬೊಬ್ಬ ಸ್ಪರ್ಧಿಗಳು ಇಷ್ಟವಾಗುತ್ತಾರೆ. ಆದರೆ ಇಲ್ಲಿವರೆಗೆ ಅಂದ್ರೆ 12 ಸೀಸನ್ ಆದ್ರೂ ಕೂಡ ಈ ಇಬ್ಬರು ಮಹಿಳಾ ಸ್ಪರ್ಧಿಗಳನ್ನು ಬೀಟ್ ಮಾಡುವ ಯಾವುದೇ ಮಹಿಳಾ ಸ್ಪರ್ಧಿ ಬಂದಿಲ್ಲವಂತೆ ಎನ್ನುತ್ತಿದ್ದಾರೆ ವೀಕ್ಷಕರು.

26
ದೀಪಿಕಾ ದಾಸ್ - ಸಂಗೀತ ಶೃಂಗೇರಿ

ಆ ಸ್ಪರ್ಧಿಗಳು ಬೇರಾರು ಅಲ್ಲ, ತಮ್ಮ ಸೌಂದರ್ಯ, ಸ್ಟೈಲ್ ಜೊತೆಗೆ ಟಾಸ್ಕ್ ಅಂತ ಬಂದಾಗ ಎಂದಿಗೂ ಬಿಟ್ಟು ಕೊಡದೆ ಟಾಪ್ 3 ಕಂಟೆಸ್ಟಂಟ್ ಆಗಿ ಮಿಂಚಿದ ನಟಿಯರಾದ ದೀಪಿಕಾ ದಾಸ್ ಮತ್ತು ಸಂಗೀತಾ ಶೃಂಗೇರಿ.

36
ಬಿಗ್ ಬಾಸ್ ಸೀಸನ್ 7

ದೀಪಿಕಾ ದಾಸ್ ಅವರು ಬಿಗ್ ಬಾಸ್ ಸೀಸನ್ 7 ಮತ್ತು 9 ರಲ್ಲಿ ಕಾಣಿಸಿಕೊಂಡಿದ್ದರು. ಸೀಸನ್ 7ರಲ್ಲಿ ಅವರು ಮನರಂಜನೆ ನೀಡೋದಕ್ಕೂ ಸೈ ಇದ್ರು, ಅಲ್ಲದೇ ಟಾಸ್ಕ್ ಅಂತ ಬಂದ್ರೆ ಎದುರಿದ್ದವರನ್ನು ಸೋಪಿಸೋದಕ್ಕೂ ರೆಡಿಯಿದ್ರು, ಫಿಸಿಕಲ್ ಟಾಸ್ಕ್ ಅಲ್ಲಿ ಯಾವಾಗ್ಲೂ ನಂ1 ಸ್ಥಾನದಲ್ಲಿದ್ರು ದೀಪಿಕಾ ದಾಸ್.

46
ಬಿಗ್ ಬಾಸ್ ಸೀಸನ್ 10

ಇನ್ನು ಬಿಗ್ ಬಾಸ್ ಸೀಸನ್ 10 ಹೆಚ್ಚು ಸದ್ದು ಮಾಡಲು ಕಾರಣ ಸಂಗೀತ ಶೃಂಗೇರಿ. ಆಕೆಯ ಆಟದ ವೈಖರಿ ಇರಬಹುದು. ತನ್ನದಲ್ಲದ ತಪ್ಪಿನಿಂದ ಜನರಿಂದ ಹೇಟ್ ಪಡೆದುಕೊಂಡು, ಕೊನೆಗೆ ಅದೇ ಜನರಿಂದ ಪ್ರೀತಿಯನ್ನು ಪಡೆದು ಭರ್ಜರಿಯಾಗಿ ಟಾಸ್ಕ್ ಆಡಿದ ನಟಿ ಸಂಗೀತ ಶೃಂಗೇರಿ.

56
ದೀಪಿಕಾ ದಾಸ್

ನಾಗಿಣಿ ಸೀರಿಯಲ್ ಅಮೃತಾ ಆಗಿ ಪರಿಚಿತರಾಗಿದ್ದ ದೀಪಿಕಾ ದಾಸ್ ರನ್ನು ಜನರು ರಿಯಲ್ ಆಗಿ ಇಷ್ಟಪಡೋಕೆ ಸಾಧ್ಯ ಮಾಡಿಸಿದ್ದು ಬಿಗ್ ಬಾಸ್. ದೀಪಿಕಾ ತಮ್ಮ ಬ್ಯೂಟಿ, ಹೈಟ್ ಪರ್ಸನಾಲಿಟಿ, ಆಟಿಟ್ಯೂಡ್, ಆಟ, ಮನರಂಜನೆ ಎಲ್ಲವನ್ನೂ ಅದ್ಭುತವಾಗಿ ನೀಡಿ, ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

66
ಸಂಗೀತಾ ಶೃಂಗೇರಿ

ಇನ್ನು ಸಂಗೀತ ಶೃಂಗೇರಿ ಕೂಡ ಅಷ್ಟೇ, ಎದುರಿನವರು ತಪ್ಪು ಮಾಡುತ್ತಿದ್ದಾರೆ ಅಂದ್ರೆ, ಅದಕ್ಕೆ ಸರಿಯಾಗಿ ಉತ್ತರ ಕೊಡೋದಕ್ಕೂ ಹೆದರೋದಿಲ್ಲ, ಸವಾಲು ಅಂತ ಬಂದ್ರೆ ಎಂತಹುದೇ ಸವಾಲನ್ನು ಎದುರಿಸಿ ನಿಲ್ಲೋದಕ್ಕೆ ಸಂಗೀತಾ ಮುಂದಿರುತ್ತಾರೆ. ಹಾಗಾಗಿಯೇ ಜನರು ಇಂದಿಗೂ ಈ ಇಬ್ಬರು ಸ್ಪರ್ಧಿಗಳನ್ನು ನೆನಪಿಸಿಕೊಳ್ಳುತ್ತಾರೆ. ಇವರಂತೆ ಯಾರೂ ಇಲ್ಲ ಎಂದು ಹಾಡಿ ಹೊಗಳುತ್ತಿದ್ದಾರೆ.

Read more Photos on
click me!

Recommended Stories