Bigg Boss Kannada Season 12 Updates: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕಬಡ್ಡಿ ಆಟ ಆಡಿಸಲಾಗಿತ್ತು. ರಕ್ಷಿತಾ ಮೇಲೆ ಸ್ಪಂದನಾ ಸೋಮಣ್ಣ, ರಾಶಿಕಾ ಶೆಟ್ಟಿ ಬಿದ್ದು ಹೊರಳಾಡಿದ್ದರು. ಆ ವೇಳೆ ರಕ್ಷಿತಾ ಅವರ ಬಟ್ಟೆ ಆ ಕಡೆ ಈ ಕಡೆ ಆಯ್ತು. ಇದರಿಂದ ಮತ್ತೆ ಗೇಮ್ ಆಡಿಸಿದರು. ಆಮೇಲೆ ಏನಾಯಿತು?
ಕ್ಯಾಪ್ಟನ್ ಹೇಳಿದಾಗ ರಾಶಿಕಾ, ಸ್ಪಂದನಾ ಅವರು ಆಟ ನಿಲ್ಲಿಸಲಿಲ್ಲ, ರಕ್ಷಿತಾ ಮೈಮೇಲೆ ಬಿದ್ದುಕೊಂಡಿದ್ದರು. ಇವರಿಬ್ಬರದ್ದು ತಪ್ಪು ಎಂದು ಚಂದ್ರಪ್ರಭ, ಅಭಿಷೇಕ್ ಹೇಳಿದ್ದರು. ನನ್ನ ಬಾಯಿಗೆ ಮಣ್ಣು ಹಾಕಿದರು ಎಂದು ರಾಶಿಕಾ ಸುಮ್ಮನೆ ಆಗಲಿಲ್ಲ, ಆಟ ನಿಲ್ಲಿಸಲೇ ಇಲ್ಲ ಎಂದು ಅಭಿಷೇಕ್ ಹೇಳಿದ್ದರು. ವೈಯಕ್ತಿಕವಾಗಿ ರಕ್ಷಿತಾರನ್ನು ಟಾರ್ಗೆಟ್ ಮಾಡಿದರು ಎಂದು ಕೆಲ ಸ್ಪರ್ಧಿಗಳೇ ಹೇಳಿದ್ದಾರೆ.
25
ರಾಶಿಕಾ, ಸ್ಪಂದನಾ ಪರ ಮಾತಾಡಿದ್ರು
“ಆಟ ಆಡುವಾಗ ಎರಡು ಬಟ್ಟೆ ಹಾಕಿದ್ದೆ. ಬಟ್ಟೆ ಆಚೀಚೆ ಆದಾಗ ನಾನು ಕೆಳಗಡೆ ಬೀಳ್ತೀನಿ. ಬಟ್ಟೆ ಸರಿ ಇಲ್ಲ ಬಿಡಿ ಅಂತ ಹೇಳಿದರೂ ಕೂಡ ರಾಶಿಕಾ ಬಿಡಲಿಲ್ಲ. ಪಾಯಿಂಟ್ಸ್ ಕೊಡಲ್ಲ ಅಂದ್ರೂ ನಾನು ಬಿಡಲ್ಲ ಅಂತ ರಾಶಿಕಾ ಹೇಳಿದರು. ನಾನು ಆ ಸಿಟ್ಟಿನಲ್ಲಿ ಮಣ್ಣು ಹಾಕಿದೆ. ಎಲ್ಲರಿಗೂ ಗೇಮ್ ಆಡುವ ಮನಸ್ಥಿತಿ ಇತ್ತು. ಎರಡು ನಿಮಿಷ ಇತ್ತು, ಆದರೆ ಮನಸ್ಸಿನಲ್ಲಿ ಅನ್‌ಕಂಫರ್ಟೇಬಲ್ ಫೀಲ್ ಇತ್ತು” ಎಂದು ರಕ್ಷಿತಾ ಹೇಳಿದ್ದಾರೆ.
35
ಇಡೀ ಮನೆಯವ್ರು ಅಂದುಕೊಂಡಿದ್ದೇನು?
“ರಕ್ಷಿತಾ ಹಾಕಿದ್ದ ಬಟ್ಟೆ ಆ ಕಡೆ ಈ ಕಡೆ ಆಯ್ತು, ಆದರೂ ಇವರು ಸುಮ್ಮನಾಗಲಿಲ್ಲ. ರಕ್ಷಿತಾ ಅವರು ಹೆಣ್ಣು ಮಗುವಿಗೆ ಅವಮಾನ ಮಾಡಿದರು, ಮಾನವೀಯತೆ ಬಿಟ್ಟರು” ಎಂದು ಇಡೀ ಮನೆಯವರು ಅಂದುಕೊಂಡಿದ್ದರು.
“ನನಗೆ ಮೋಸ ಆಗಲಿಲ್ಲ, ಫ್ಲೋನಲ್ಲಿ ಆಗಿಹೋಯ್ತು. ರಾಶಿಕಾ, ಸ್ಪಂದನಾ ಬೇಕು ಅಂತ, ವೈಯಕ್ತಿಕವಾಗಿ ಟಾರ್ಗೆಟ್ ಮಾಡಿದರು ಅಂತ ನನಗೆ ಅನಿಸಲಿಲ್ಲ. ನಿಮ್ಮ ಪರವಾಗಿ ಗಿಲ್ಲಿ ನಟ ಮಾತನಾಡ್ತಾರೆ, ರಾಶಿಕಾಗೆ ಸ್ಟುಡೆಂಟ್ ಆಫ್ ದಿ ವೀಕ್ ಸಿಗದಿರೋ ಹಾಗೆ ಮಾಡಿದ್ರು. ಆದರೆ ನೀವು ಮಾತನಾಡಲಿಲ್ಲ” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
55
ಈ ವಾರದ ಕಿಚ್ಚನ ಚಪ್ಪಾಳೆ ಮಿಸ್ ಆಯ್ತು
“ಈಗ ಮೂವರು ಈ ಕೆಲಸಕ್ಕೆ ಜವಾಬ್ದಾರಿಯುತವಾಗಿದ್ದಾರೆ. ಇಡೀ ವಾರ ಮಾತನಾಡೋದು ತಪ್ಪು, ಸರಿ ಅಂತ ಬರೋದಿಲ್ಲ. ಇಡೀ ಮನೆ ಇಬ್ಬರನ್ನು ವಿಲನ್ ಆಗಿ ನೋಡುತ್ತಿರುತ್ತದೆ, ಆದರೆ ನೀವು ಮಾತನಾಡಬೇಕಿತ್ತು. ನೀವು ಏನಾದರೂ ರಾಶಿಕಾ, ಸ್ಪಂದನಾ ಬೇಕು ಅಂತ ಮಾಡಲಿಲ್ಲ, ಆಟದಲ್ಲಿ ನಡೆದು ಹೋಯ್ತು ಅಂತ ಹೇಳಿದ್ದರೆ ಈ ವಾರದ ಕಿಚ್ಚನ ಚಪ್ಪಾಳೆ ಕೊಡುತ್ತಿದ್ದೆ” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.