ದೊಡ್ಮನೆಯಲ್ಲಿ ತ್ರಿವಿಕ್ರಮ್- ಮೋಕ್ಷಿತಾ ಫೈಟ್ ಜೋರಾಗಿದ್ರೆ... ಜನ ಜೋಡಿ ಮಾಡೋದ್ರಲ್ಲಿ ಬ್ಯುಸಿ ಆಗ್ಬಿಟ್ಟಿದ್ದಾರೆ!

First Published | Nov 8, 2024, 5:18 PM IST

ಬಿಗ್ ಬಾಸ್ ಅಂದ್ಮೇಲೆ ಅಲ್ಲಿ ಬಂದ ಸ್ಪರ್ಧಿಗಳನ್ನು ಜೋಡಿ ಮಾಡಿ, ಅವರ ಹೆಸರಲ್ಲಿ ಸೋಶಿಯಲ್ ಮೀಡಿಯಾ ಪೇಜ್ ತೆರೆಯೋದು ಸಾಮಾನ್ಯ. ಅಂತ ಫ್ಯಾನ್ಸ್ ತ್ರಿವಿಕ್ರಮ್ ಮತ್ತು ಮೋಕ್ಷಿತಾ ಪೈಗೆ ಹೆಚ್ಚಾಗಿದ್ದಾರೆ ಅನ್ನೋದೆ ಅಚ್ಚರಿ. 
 

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 11 (Bigg Boss Season 11) ಸದ್ದು ಮಾಡ್ತಿರೋದು ಜಗಳಗಳಿಂದ. ಪ್ರತಿದಿನ ಜಗಳ, ಪ್ರತಿವಾರ ಯುದ್ಧವೇ ನಡೆಯುತ್ತೆ, ಅದರಲ್ಲೂ ಮೋಕ್ಷಿತಾ ಮತ್ತು ತ್ರಿವಿಕ್ರಮ್ ನಡುವೆ ಕಳೆದ ಎರಡು ವಾರ ಕಿಚ್ಚು ಬೆಂಕಿಯಾಗಿಯೇ ಹರಡಿತ್ತು. 
 

ಮೊದಲ ವಾರದಲ್ಲಿ ಮೋಕ್ಷಿತಾ ಪೈ  (Mokshitha Pai) 10 ವಾರ ಬಿಗ್ ಬಾಸ್ ನಲ್ಲಿ ಇರುವ ಬಗ್ಗೆ ತ್ರಿವಿಕ್ರಮ್ ಗೆ ಸವಾಲು ಎಸೆದು, ನೀನು ಗೋಮುಖ ವ್ಯಾಘ್ರ ಅಂತ ಹೇಳಿದ್ರು. ಅದೇ ಜಗಳ, ಮುನಿಸು ಇಬ್ಬರ ನಡುವೆಯೂ ನಡೆಯುತ್ತಿತ್ತು, ಮತ್ತೊಂದು ವಾರದಲ್ಲಿ ಅವರ ಜಗಳಕ್ಕೆ ಬೆಂಕಿ ಹಚ್ಚೋ ಕೆಲಸ ಮಾಡಿದ್ದು ಬಿಗ್ ಬಾಸ್. 
 

Tap to resize

ಹೌದು, ಬಿಗ್ ಬಾಸ್ ಕಳೆದ ವಾರ ಯಾರು ಯಾರ ಬಗ್ಗೆ ಹಿಂದಿನಿಂದ ಏನೆಲ್ಲಾ ಹೇಳಿದ್ದಾರೆ ಎನ್ನುವ ಬಗ್ಗೆ ವಿಡಿಯೋ ಕ್ಲಿಪ್ ಪ್ಲೇ ಮಾಡಿದ್ದರು. ಅದರಲ್ಲಿ ತ್ರಿವಿಕ್ರಮ್ (Trivikram) ಉಳಿದವರ ಬಳಿ ಒಂದು ಹಕ್ಕಿ ಜೊತೆ ಇನ್ನೊಂದು ಹಕ್ಕಿ ಫ್ರೀ ಅಂದಿದ್ದಾರೆ. ಇದು ಗೌತಮಿ, ಮೋಕ್ಷಿತಾ ಮತ್ತು ಮಂಜು ಬಗ್ಗೆ ಹೇಳಿರುವ ಮಾತುಗಳಾಗಿವೆ. ಇದನ್ನ ಕೇಳಿ ಮೋಕ್ಷಿತಾ ತ್ರಿವಿಕ್ರಂ ಮೇಲೆ ಸಿಕ್ಕಾಪಟ್ಟೆ ಕಿಡಿ ಕಾರಿದ್ದರು. 
 

ಅಕ್ಕ ತಂಗಿಯರ ಜೊತೆ ಬೆಳೆದೋರು ಹಕ್ಕಿ ಅಂತ ಮಾತಾಡ್ತಾರ ಯಾರಾದ್ರೂ? ಇದು ಅವರ ತನ ಏನು ಅನ್ನೋದನ್ನು ತೋರಿಸುತ್ತೆ ಎಂದಿದ್ದಾರೆ. ಅತಿ ವಿನಯಂ ದೂರ್ತ ಲಕ್ಷಣಂ ಅಂತಾರಲ್ಲ ಇದು ಅದೇ ಆಗಿದ್ದು ಅಂತಾನೂ ಹೇಳಿದ್ದಾರೆ ಮೋಕ್ಷಿತಾ. ಅಷ್ಟೇ ಅಲ್ಲ ನಾಮಿನೇಶನ್ ಪ್ರಕ್ರಿಯೆಯಲ್ಲೂ ಸಹ ತ್ರಿವಿಕ್ರಮ್ ಹೆಸರನ್ನು ತೆಗೆದುಕೊಂಡಿದ್ದರು. 
 

ದೊಡ್ಮನೆಯಲ್ಲಿ ಇಷ್ಟೆಲ್ಲಾ ಆಗೋವಾಗ ಅದನ್ನ ನೋಡ್ತಿರೋ ವೀಕ್ಷಕರು ಮಾತ್ರ ಇವರಿಬ್ಬರನ್ನು ಜೋಡಿ ಮಾಡೋದಕ್ಕೆ ಹೊರಟಿದ್ದಾರೆ. ಅವರಿಬ್ಬರು ಯಾವಾಗ ಜೋಡಿಯಾಗ್ತಾರೆ ಅಂತ ನೋಡೋದಕ್ಕೆ ಕಾಯ್ತಿದ್ದಾರೆ. ಆದ್ರೆ ಇಬ್ಬರ ಮಧ್ಯೆ ದ್ವೇಷ ಮರೆತು ಪ್ರೀತಿ ಯಾವಾಗ ಬೆಳೆಯುತ್ತೋ ಗೊತ್ತಿಲ್ಲ. 
 

ಬಿಗ್ ಬಾಸ್ ಮನೆ ಅಂದಮೇಲೆ ಅಲ್ಲಿ ಜೋಡಿಯಾಗೋದು ಸಾಮಾನ್ಯ. ಅಲ್ಲಿದ್ದವರನ್ನು ಜೋಡಿ ಮಾಡಿ, ಫ್ಯಾನ್ಸ್ ಗಳು ಫ್ಯಾನ್ ಪೇಜ್ (fan pages) ಕ್ರಿಯೇಟ್ ಮಾಡೋದು ಸಾಮಾನ್ಯ. ಅದ್ರೆ ದೊಡ್ಮನೆಯಲ್ಲಿ ಹಾವು ಮುಂಗುಸಿಯಂತೆ ಕಿತ್ತಾಡೋ ತ್ರಿವಿಕ್ರಮ್ ಮತ್ತು ಮೋಕ್ಷಿತಾ ಪೈ ಜೋಡಿಯಾಗ್ಬೇಕು ಅಂತ ಮಾತ್ರ ಜನ ಯಾಕೆ ಬಯಸ್ತಿದ್ದಾರೆ ಗೊತ್ತಿಲ್ಲ. 
 

ವಿಕ್ಕಿ ಮೋಕ್ಷಿ ಜೋಡಿಯಾಗಬೇಕು ಅಂತ ಕನಸು ಕಾಣ್ತಾ ಇದ್ದೇವೆ, ಆ ಕನಸು ಯಾವಾಗ ನನಸಾಗುತ್ತೋ, ವಿಕ್ಕಿಗೆ ಮೋಕ್ಷಿತಾ ಮೇಲಿರುವ ಆ ಸಾಫ್ಟ್ ಕಾರ್ನರ್ ನೋಡೊದಕ್ಕೆ ಚೆಂದ, ತ್ರಿವಿಕ್ರಮ್ ಮತ್ತು ಮೋಕ್ಷಿತಾರನ್ನು ಜೋಡಿ ಟಾಸ್ಕ್ ನಲ್ಲಿ ಒಂದು ಮಾಡಿ, ಅವರಿಬ್ಬರು ಆನ್ ಸ್ಕ್ರೀನ್ ನಲ್ಲಿ ಜೊತೆಯಾಗಿದ್ರೇನೆ ನೋಡೋದಕ್ಕೆ ಚೆಂದ ಅಂತಾನೂ ಹೇಳಿದ್ದಾರೆ. 
 

Latest Videos

click me!