ಬಿಗ್ ಬಾಸ್ ಮನೆಯಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಂಗೀತಾ; ಊಸರವಳ್ಳಿ ಆಗಿದ್ದು ಇದಕ್ಕೇನಾ?

Published : Nov 25, 2023, 05:15 PM ISTUpdated : Nov 25, 2023, 05:25 PM IST

ಇಂದು ಕಲರ್ಸ್ ಕನ್ನಡದ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಸ್ವತಃ ಹೋಸ್ಟ್ ಕಿಚ್ಚ ಸುದೀಪ್ ಈ ವಾರ ಆಗಿರುವ ಭಾರೀ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. 

PREV
112
ಬಿಗ್ ಬಾಸ್ ಮನೆಯಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಂಗೀತಾ; ಊಸರವಳ್ಳಿ ಆಗಿದ್ದು ಇದಕ್ಕೇನಾ?

ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ಸಂಗೀತಾ ಶೃಂಗೇರಿ ಸಡನ್ನಾಗಿ ಎಂಬಂತೆ ಕಾರ್ತಿಕ್ ಟೀಮ್ ಬದಲು ವಿನಯ್ ಟೀಮ್‌ಗೆ ಶಿಪ್ಟ್‌ ಆಗಿದ್ದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗುತ್ತಿದೆ. ಕಾರಣ, ಸಂಗೀತಾ ಮತ್ತು ಕಾರ್ತಿಕ್ ಇದ್ದ ರೀತಿ ಮತ್ತು ಬದಲಾದ ರೀತಿ. 
 

212

ಬಿಗ್ ಬಾಸ್ ಮನೆಗೆ ಹೋದಂದಿನಿಂದಲೂ ಸ್ನೇಹಕ್ಕೂ ಮೀರಿದ ಪ್ರೀತಿ ಇತ್ತು ಎನ್ನವುದು ಬಹುತೇಕರ ಅನಿಸಿಕೆ. ಅವರಿಬ್ಬರೂ ಒಂದೇ ಟೀಮ್‌ ಎನ್ನವುದು ನೆಪಕ್ಕಷ್ಟೇ ಎಂಬಂತೆ ಇಬ್ಬರೂ ತುಂಬಾ ಕ್ಲೋಸ್ ಆಗಿದ್ದರು. ಅವರೊಟ್ಟಿಗೆ ತನಿಷಾ ಕೂಡ ತುಂಬ ಸಲುಗೆ-ಸ್ನೇಹ ಸಂಪಾದಿಸಿಕೊಂಡಿದ್ದರು. 

312

ಆದರೆ, 7 ನೇ ವಾರದ ಹೊತ್ತಿಗೆ ಅದೇನಾಯ್ತು ಅಂತ ಹಲವರಿಗೆ ಗೊತ್ತಿಲ್ಲ. ಆದರೆ, ಸಂಗೀತಾ ಮನಸ್ಸಿಗೆ ತಾನು ಇಲ್ಲಿ ಸ್ನೇಹಕ್ಕೆ ಕಟ್ಟುಬಿದ್ದೆನಾ, ಆಟಕ್ಕೆ ಮೋಸ ಮಾಡುತ್ತಿರುವೆನಾ ಎಂಬ ಸಂಶಯ ಮೂಡತೊಡಗಿತ್ತು ಎನ್ನಬಹುದು. 

412

ಆಕೆಗೆ, ತಾನು ಕಾರ್ತಿಕ್ ಸ್ನೇಹ-ಪ್ರೀತಿಗೆ ಕಟ್ಟುಬಿದ್ದು ಆಟ ಆಡುವುದರಲ್ಲಿ ಎಡವುತ್ತಿದ್ದೇನೆ ಎಂಬ ಜ್ಞಾನೋದಯ ಆಗಿದೆ. ಅದಕ್ಕೆ ಕಾರಣಕರ್ತರು ಯಾರು? ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ಆಗಿದೆ. ಹಲವರು ಈ ಬಗ್ಗೆ ಬಿಗ್ ಬಾಸ್ ಹೋಸ್ಟ್  ಕಿಚ್ಚ ಸುದೀಪ್ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. 

512

ಕಾರಣ, ಕಳೆದ ವಾರದ ವೀಕೆಂಡ್ ಕಿಚ್ಚನ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ 'ಇಲ್ಲಿ ಕೆಲವರು ಸ್ನೇಹಕ್ಕೆ, ಪ್ರೀತಿಗೆ ಹೆಚ್ಚು ಬೆಲೆ ಕೊಟ್ಟು ಅವರು ಯಾರು, ಏನು ಮಾಡುತ್ತಿದ್ದಾರೆ ಎಂಬುದನ್ನೇ ಮರೆತಿದ್ದಾರೆ. ಗೇಮ್ ಆಡುವುದಕ್ಕಾಗಿ ಸ್ವಲ್ಪ ದಿನದ ಮಟ್ಟಿಗೆ ಇಲ್ಲಿರಲು ಬಂದಿದ್ದಾರೆ ಎಂಬುದು ಅವರಿಗೆ ಮರತೇ ಹೋಗಿದ್ದಾರೆ' ಎಂದು ಸುದೀಪ್ ಛಾಟಿ ಬೀಸಿದ್ದಾರೆ. 

612

ಅದನ್ನು ಸಂಗೀತಾ ತಮಗೇ ಹೇಳಿದ್ದಾರೆ ಎಂದು ವೈಯಕ್ತಿಕವಾಗಿ ತೆಗೆದುಕೊಂಡು ಇದ್ದಕ್ಕಿದ್ದಂತೆ ಬದಲಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ, ಅದೇ ನಿಜವಾದ ಕಾರಣವೇ ಎಂಬುದನ್ನು ಸ್ವತಃ ಸಂಗೀತಾ ಅವರೇ ಹೇಳಬೇಕಷ್ಟೇ! ಆದರೆ, ಸಂಗೀತಾರಲ್ಲಿ ಬದಲಾವಣೆಯಂತೂ ಆಗಿದೆ.

712

ಇಂದು ಕಲರ್ಸ್ ಕನ್ನಡದ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಸ್ವತಃ ಹೋಸ್ಟ್ ಕಿಚ್ಚ ಸುದೀಪ್ ಈ ವಾರ ಆಗಿರುವ ಭಾರೀ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. 'ಸ್ನೇಹಿತರು ಶತ್ರುಗಳಾಗಬಹುದು, ಶತ್ರುಗಳು ಬದಲಾಗಿ ಮಿತ್ರರಾಗಬಹುದು, ಒಂದೇ ವಾರದಲ್ಲಿ ಬಹಳಷ್ಟು ಬದಲಾಗಬಹುದು.

812

ಇದಕ್ಕೆಲ್ಲಾ ಈ ವಾರವೇ ಸಾಕ್ಷಿ' ಎಂದಿದ್ದಾರೆ ನಿರೂಪಕ ಕಿಚ್ಚ ಸುದೀಪ್. ಸ್ಪರ್ಧಿಗಳಲ್ಲಿ ಮಿತ್ರರಾಗಿದ್ದವರು ಶತ್ರುಗಳಾಗಿರುವವರು ಎಂದರೆ ಅದು ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಬಗ್ಗೆಯೇ ಹೇಳಿದ್ದು ಎಂಬುದು ಹೆಚ್ಚಿನವರ ಅನಿಸಿಕೆ. ಶತ್ರುಗಳು ಮಿತ್ರರಾಗಿದ್ದು ಎಂದರೆ ಅದು ಸಂಗೀತಾ-ನಮ್ರತಾ ಹಾಗೂ ಸಂಗೀತಾ-ವಿನಯ್ ಎಂಬುದು ಸತ್ಯ.

912

ಆದರೆ, ಈ ವಾರ ಬಿಗ್ ಬಾಸ್ ಮನೆಯಲ್ಲಿ ಇನ್ನೊಂದು ಬದಲಾವಣೆ ಆಗಿದೆ. ಅದೇನೆಂದರೆ, ಈ ಮೊದಲು ಜಸ್ಟ್ ಸ್ನೇಹಿತರಾಗಿದ್ದ ತನಿಷಾ ಮತ್ತು ಕಾರ್ತಿಕ್, ಈ ವಾರ ಜಾಸ್ತಿ ಕ್ಲೋಸ್ ಆಗಿದ್ದಾರೆ ಎನ್ನಬಹುದು. ಕಾರ್ತಿಕ್ ಬಳಿಯೇ ಇರುತ್ತಿದ್ದ ಸಂಗೀತಾ ಈಗ ಹೆಚ್ಚಾಗಿ ನಮ್ರತಾ ಅಥವಾ ವಿನಯ್ ಬಳಿ ಸುತ್ತತ್ತಿರುತ್ತಾರೆ. 
 

1012

ಆದರೆ, ಕಾರ್ತಿಕ್ ಪಕ್ಕ ಇರೋದು ಈಗ ತನಿಷಾ ಮಾತ್ರ ಎನ್ನಬಹುದು. ಸದ್ಯಕ್ಕೆ ಸಂಗೀತಾ ಸ್ನೇಹ ಕಳೆದುಕೊಂಡು ಒಂಟಿ ಆಗಿರುವ ಕಾರ್ತಿಕ್‌ಗೆ ಜಂಟಿಯಾಗಿರುವ ತನಿಷಾ, ಕಾರ್ತಿಕ್ ಅವರನ್ನು ಲವ್ ಮಾಡುತ್ತಿಲ್ಲ. ಆದರೆ, ಅವರಿಬ್ಬರೂ ಒಳ್ಳೇ ಫ್ರೆಂಡ್ಸ್‌ ತರ ಇದ್ದಾರೆ ಎನ್ನಬಹುದು. 

1112

ಇಂದು ವೀಕೆಂಡ್ ಪಂಚಾಯಿತಿ ನಡೆಯಲಿದೆ. 'ಕಿಚ್ಚನ ಪಂಚಾಯಿತಿ' ಹೆಸರಿನ ಇಂದಿನ ಸಂಚಿಕೆಯಲ್ಲಿ ಯಾವೆಲ್ಲ ಅಚ್ಚರಿಗಳು ಕಾದಿವೆಯೋ ಏನೋ ಎಂದು ಬಿಗ್ ಬಾಸ್ ಪ್ರಿಯ ವೀಕ್ಷಕರು ಕಾಯುತ್ತಿದ್ದಾರೆ. ಸಂಗೀತ ಕೊಟ್ಟ ಶಿಕ್ಷೆಯಂತೆ ನಟ ಕಾರ್ತಿಕ್ ತಮ್ಮ ತಲೆಯನ್ನು ಬೋಳಿಸಲಾಗಿದೆ. 

1212

ಇತ್ತ ನಮ್ರತಾ ಮತ್ತು ಸಂಗೀತಾ ಸೇರಿಕೊಂಡು ಇನ್ನೊಂದು ಟೀಮ್‌ನಲ್ಲಿರುವ ತನಿಷಾ-ಕಾರ್ತಿಕ್ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಈ ಸಂಗತಿ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಕಂಡುಬರುತ್ತಿದೆ, ಆದರೆ , ಇಂದಿನ ಸಂಚಿಕೆಯಲ್ಲಿ ಉಳಿದ ಎಲ್ಲ ಸ್ಪರ್ಧಿಗಳ ಕತೆ ಏನು, ಕಿಚ್ಚ ಸುದೀಪ್ ಎಲ್ಲರ ಬಳಿ ಏನು ಮಾತನಾಡಬಹುದು ಎಂಬ ಕುತೂಹಲವಂತೂ ಇದ್ದೇ ಇದೆ. 

ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ಎಲ್ಲವನ್ನೂ ತಿಳಿಯಬೇಕಾದರೆ, JioCinemaದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರ ವೀಕ್ಷಿಸಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು Colors Kannadaದಲ್ಲಿ ರಾತ್ರಿ 9.30ಕ್ಕೆ, ವಾರಾಂತ್ಯದ (ಶನಿವಾರ-ಭಾನುವಾರ) ಸಂಚಿಕೆಗಳನ್ನು ರಾತ್ರಿ 9.00ಕ್ಕೆ ವೀಕ್ಷಿಸಬಹುದು. 

Read more Photos on
click me!

Recommended Stories