ಮೈಕಲ್ ಬಂದ್ಮೇಲೆ ಮದ್ವೆ ಬಗ್ಗೆ ಯೋಚನೆ ಮಾಡ್ತೀನಿ: ಅಪ್ಪ-ಅಮ್ಮ ವಿರುದ್ಧ ನಿಂತ ಇಶಾನಿ?

First Published | Nov 25, 2023, 1:49 PM IST

ಪ್ರೀತಿ ಇದ್ದಿದ್ದು ನಿಜ ಆದರೆ ಮೈಕಲ್ ಹೊರ ಬಂದ್ಮೇಲೆ ನಿರ್ಧಾರ ಮಾಡ್ತೀನಿ ಎಂದು ಲವ್ ಸ್ಟೋರಿ ಬಗ್ಗೆ ಇಶಾನಿ ಮಾತು....

ಬಿಗ್ ಬಾಸ್ ಸೀಸನ್ 10ರಲ್ಲಿ ಮೊದಲ ಮಹಿಳಾ Rapper ಇಶಾನಿ ಸ್ಪರ್ಧಿಸಿದ್ದರು. ಟಫ್‌ ಫೈಟ್‌ ಕೊಟ್ಟ ಮೈಕಲ್ ಪ್ರೀತಿ ಗಳಿಸಿ ಹೊರ ಬಂದಿರುವ ಇಶಾನಿ ತಮ್ಮ ಮದುವೆ ಪ್ಲ್ಯಾನ್ ಬಗ್ಗೆ ಹಂಚಿಕೊಂಡಿದ್ದಾರೆ. 

'ನನ್ನ ಮೈಕಲ್ ಪ್ರೀತಿ ಬಗ್ಗೆ ತಂದೆ ವಿರೋಧ ವ್ಯಕ್ತ ಪಡಿಸಿದ್ದರು ಹಾಗೂ ಅಮ್ಮ 70 ಸಲ ಯೋಚನೆ ಮಾಡಬೇಕು ಎಂದು ಹೇಳಿದ್ದರು. ಆದರೆ ಮೈಕಲ್ ಮತ್ತು ನನ್ನ ಕನೆಕ್ಷನ್ ಯುನಿಕ್ ಆಗಿತ್ತು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Tap to resize

ನಾವಿಬ್ಬರೂ ಒಂದೇ ಮೈಂಡ್‌ಸೆಟ್‌ ಜನ ಆಗಿದ್ವಿ. ಆದರೆ ಗೇಮ್ ಆಡುವಾಗ ನಮ್ಮಿಬ್ಬರಿಗೂ ಡಿಫರೆಂಟ್ ಗೇಮ್ ಅಪ್ರೋಚ್ ಇತ್ತು ಅದರಿಂದ ನಮ್ಮ ನಡುವೆ ಆಗಾಗ ಕ್ಲಾಶ್ ಆಗುತ್ತಿತ್ತು. 

ಕ್ಲಾಶ್ ಆದ ಮೇಲೆ ನಾವು ಒಳ್ಳೆ ಸ್ನೇಹಿತರಾಗಿದ್ದೀವಿ ಹೀಗಾಗಿ ಮೈಕಲ್ ಹೊರ ಬಂದ ಮೇಲೆ ಯೋಚನೆ ಮಾಡಬೇಕು ಏನಾಗುತ್ತದೆ ಎಂದು. ಅಪ್ಪ- ಅಮ್ಮಗೆ ಇಷ್ಟ ಇಲ್ಲ ಅಂತ ಗೊತ್ತಿದೆ. 

ಮುಂದಕ್ಕೂ ಒಳ್ಳೆ ಸ್ನೇಹಿತರಾಗಿ ಮುಂದುವರೆಸಿಕೊಂಡು ಹೋಗಲು ಇಷ್ಟ ಪಡುತ್ತೀವಿ.  ಅಷ್ಟು ದೊಡ್ಡ ವೇದಿಕೆಯಲ್ಲಿ ಮೈಕಲ್ ನನ್ನನ್ನು ಅವರ ಗರ್ಲ್‌ಫ್ರೆಂಡ್ ಆಗಿ ಅನೌನ್ಸ್ ಮಾಡಿಬಿಟ್ಟರು ಅದೆಲ್ಲಾ ನಡೆದುಕೊಂಡು ಹೋಗುತ್ತಿತ್ತು. 

ಮದುವೆ ಎಲ್ಲಾ ಮುಂದಕ್ಕೆ ನೋಡೋಣ ಈವಾಗ ನಾನು ಒಳ್ಳೆ ಸ್ನೇಹಿತರಾಗಿದ್ದೀವಿ...ಮೈಕಲ್ ಹೊರ ಬಂದ್ಮೇಲೆ ಏನಾಗುತ್ತೆ ನೋಡೋಣ. ಆಗ ಯೋಚನೆ ಮಾಡುತ್ತೀನಿ. 

ಮುಂದಿನ ದಿನಗಳಲ್ಲಿ ಸಿನಿಮಾ ಇಂಡಸ್ಟ್ರಿಗೆ ಬರುವ ಪ್ಲ್ಯಾನ್‌ಗಳು ಇದೆ. ಸಿನಿಮಾಗಳು ಓಕೆ ಇಲ್ಲವಾದರೆ ಹಾಡುಗಳ ಮೂಲಕ ಪ್ರವೇಶ ಮಾಡ್ತೀನಿ. ನಾನು ಬರೆದಿರುವ ಹಾಡುಗಳನ್ನು ರಿಲೀಸ್ ಮಾಡಬೇಕು ಅನ್ನೋದು ಸದ್ಯಕ್ಕೆ ನನ್ನ ಲಿಸ್ಟ್‌ನಲ್ಲಿದೆ.

ಈ ವಾರ ಒಂದು ಹಾಡು ರಿಲೀಸ್ ಮಾಡುತ್ತೀನಿ. ಈಗ ಬರುತ್ತಿರುವ ಸಿನಿಮಾ ಆಫರ್‌ಗಳನ್ನು ಶೀಘ್ರದಲ್ಲಿ ಒಪ್ಪಿಕೊಳ್ಳುತ್ತೀನಿ. ಸಿನಿಮಾಗಳಲ್ಲಿ ಹಾಡಬೇಕು ಅನ್ನೋದು ನನ್ನ ದೊಡ್ಡ ಆಸೆ. ಕರ್ನಾಟಕದಲ್ಲಿ ಮಹಿಳಾ Rapper ಆಗಿ ಉಳಿಯಬೇಕು ಅನ್ನೋದು ನನ್ನ ದೊಡ್ಡ ಕನಸು.

Latest Videos

click me!