Bigg Boss Mallamma : ಮಾತಿನ ಮಲ್ಲಿ ಮಲ್ಲಮ್ಮ ಬಿಗ್ ಬಾಸ್ ಮನೆಗೆ ಮತ್ತೆ ಬಂದಿದ್ದರು. ತಮ್ಮ ಹರಕೆ ತೀರಿಸಿದ ಮಲ್ಲಮ್ಮ ಅವರನ್ನು ಬಿಗ್ ಬಾಸ್ ಖುಷಿಪಡಿಸಿದ್ದಾರೆ. ಮಲ್ಲಮ್ಮ ಮೊಮ್ಮಗನ ಫೋಟೋ ರಿವೀಲ್ ಆಗಿದೆ.
ಬಿಗ್ ಬಾಸ್ 12ರ ಮಾಜಿ ಸ್ಪರ್ಧಿ ಮಲ್ಲಮ್ಮ, ಬಿಗ್ ಬಾಸ್ ಮನೆಗೆ ಮತ್ತೆ ಬಂದಿದ್ದರು. ಫಿನಾಲೆ ವೀಕ್ಷ್ ನಲ್ಲಿ ಮಾಜಿ ಸ್ಪರ್ಧಿಗಳು ಬರೋದು ವಾಡಿಕೆ. ಅದರಂತೆ ಮಲ್ಲಮ್ಮ ಹಾಗೂ ಸೂರಜ್ ಬಿಗ್ ಬಾಸ್ ಮನೆಗೆ ಬಂದು ಹೋಗಿದ್ದಾರೆ. ಮೊದಲಿಗಿಂತಲೂ ಸೂಪರ್ ಆಕ್ಟಿವ್ ಆಗಿರುವ ಮಲ್ಲಮ್ಮ ಬಿಗ್ ಬಾಸ್ ಮನೆಯಲ್ಲಿ ಹರಕೆ ತೀರಿಸಿದ್ದಾರೆ.
27
ಹೇಗಿದ್ದಾನೆ ಗೊತ್ತಾ ಮಲ್ಲಮ್ಮ ಮೊಮ್ಮಗನ ?
ಮಲ್ಲಮ್ಮ ಬಿಗ್ ಬಾಸ್ ಮನೆಯಲ್ಲಿದ್ದಾಗ್ಲೇ ಅವರ ಸೊಸೆ ತುಂಬು ಗರ್ಭಿಣಿ. ಸೊಸೆ ಆರೋಗ್ಯದ ಬಗ್ಗೆ ಮಲ್ಲಮ್ಮ ಅವರಿಗೆ ಆತಂಕವಿತ್ತು. ಬಿಗ್ ಬಾಸ್ ಮನೆಯಿಂದ ಮಲ್ಲಮ್ಮ ಹೊರಗೆ ಬರ್ತಿದ್ದಂತೆ ಸೊಸೆಗೆ ಹೆರಿಗೆ ಆಗಿದ್ದು, ಗಂಡು ಮಗು ಜನಿಸಿದೆ. ಮಲ್ಲಮ್ಮ ಖುಷಿಯನ್ನು ಇದು ಡಬಲ್ ಮಾಡಿದೆ. ಈಗ ಮಲ್ಲಮ, ಮೊಮ್ಮಗನ ಜೊತೆ ಫೋಟೋ ಶೂಟ್ ಮಾಡಿಸಿದ್ದಾರೆ.
37
ಮೊಮ್ಮಗನಿಗೆ ಮುತ್ತಿಟ್ಟ ಮಲ್ಲಮ್ಮ
ಮಲ್ಲಮ್ಮ, ಮೊಮ್ಮಗನ ಜೊತೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಮಲಗಿರುವ ಮಗುವಿಗೆ ಮಲ್ಲಮ್ಮ ಮುತ್ತಿಡುತ್ತಿದ್ದಾರೆ. ಇನ್ನೊಂದು ಫೋಟೋದಲ್ಲಿ ಮಲ್ಲಮ್ಮ, ಮೊಮ್ಮಗನನ್ನು ಎತ್ತಿಕೊಂಡು ಖುಷಿಯಾಗಿದ್ದಾರೆ.
ಮಲ್ಲಮ್ಮ ಬಿಗ್ ಬಾಸ್ ಮನೆಗೆ ಬಂದು ಹರಕೆ ತೀರಿಸಿದ ಮೇಲೆ ಸ್ಪರ್ಧಿಗಳಿಗೆ ಮೊಮ್ಮಗನ ಮುಖ ತೋರಿಸಲಾಗಿದೆ. ಎಲ್ಲ ಸ್ಪರ್ಧಿಗಳು, ಮಗುವನ್ನು ನೋಡಿ ಖುಷಿಯಾಗಿದ್ದಾರೆ. ಮಲ್ಲಮ್ಮನ ಮೊಮ್ಮಗು ತುಂಬಾ ಸುಂದರವಾಗಿದೆ ಎನ್ನುವ ಕಮೆಂಟ್ ಬಂದಿದೆ.
57
ನಡೆಯಲಿಲ್ಲ ಶಾಸ್ತ್ರ
ಮಲ್ಲಮ್ಮ, ಬಿಗ್ ಬಾಸ್ ಮನೆಯಲ್ಲಿಯೇ ಮೊಮ್ಮಗನಿಗೆ ನಾಮಕರಣದ ಶಾಸ್ತ್ರ ಮಾಡಬೇಕೆಂದು ಬಯಸಿದ್ದರು. ಆದ್ರೆ ಅವರ ಈ ಆಸೆ ಈಡೇರಲಿಲ್ಲ. ಬಿಗ್ ಬಾಸ್, ನಾಮಕರಣ ಶಾಸ್ತ್ರ ಮಾಡಲು ಸಾಧ್ಯವಾಗ್ತಿಲ್ಲ. ಮಗುವಿಗೆ ಹೆಸರು ಸೂಚಿಸಬಲ್ಲೆವು ಎಂದಿದ್ದರು. ಮಲ್ಲಮ್ಮನ ಬಳಿಯೇ ಮೊಮ್ಮಗುವಿಗೆ ಯಾವ ಹೆಸರಿಡಬೇಕು ಕೇಳಿದ್ದಾರೆ. ಮಲ್ಲಮ್ಮ ಗಣೇಶ ಎಂದಿದ್ದಾರೆ. ನಂತ್ರ ಬಿಗ್ ಬಾಸ್ ಮೂರು ಬಾರಿ ಗಣೇಶನ ಹೆಸರು ಹೇಳಿ ನಾಮಕರಣ ಮಾಡಿದ್ದಾರೆ.
67
ಮಲ್ಲಮ್ಮ ಬ್ಯುಸಿ
ಬಿಗ್ ಬಾಸ್ ಮನೆಯಿಂದ ಹೊರ ಬಂದ ಮಲ್ಲಮ್ಮ ಕಾನ್ಫಿಡೆನ್ಸ್ ಡಬಲ್ ಆದಂತಿದೆ. ಒಂದ್ಕಡೆ ಮೊಮ್ಮಗ ಬಂದಿರುವ ಖುಷಿಯಾದ್ರೆ ಇನ್ನೊಂದು ಕಡೆ ಇಡೀ ಕರ್ನಾಟಕ ಮಲ್ಲಮ್ಮ ಅವರನ್ನು ಗುರುತಿಸಿ ಗೌರವಿಸುತ್ತಿದೆ. ಮಲ್ಲಮ್ಮ ಅವರಿಗೆ ಅವರ ಊರಿನಲ್ಲಿ ಅದ್ಧೂರಿ ಸ್ವಾಗತ ಕೂಡ ಸಿಕ್ಕಿದೆ. ಅನೇಕ ಕಾರ್ಯಕ್ರಮಗಳಿಗೆ ಹೋಗ್ತಿರುವ ಮಲ್ಲಮ್ಮ ಪ್ರಸಿದ್ಧಿ ದಿನೇ ದಿನೇ ಹೆಚ್ಚಾಗ್ತಿದೆ.
77
ಅನುಬಂಧದಲ್ಲಿ ಮಲ್ಲಮ್ಮ ಡಾನ್ಸ್
ಸೋಶಿಯಲ್ ಮೀಡಿಯಾ ಮೂಲಕ ಪ್ರಸಿದ್ಧಿ ಪಡೆದಿದ್ದ ಮಲ್ಲಮ್ಮ, ಬಿಗ್ ಬಾಸ್ ಮನೆಗೆ ಬಂದಾಗ ಸ್ವಲ್ಪ ಕನ್ಫ್ಯೂಸ್ ಆಗಿದ್ದರು. ಅವರಿಗೆ ಎಲ್ಲ ವಿಷ್ಯಗಳು ಸರಿಯಾಗಿ ತಿಳಿಯುತ್ತಿರಲಿಲ್ಲ. ಆಗ ಅವರಿಗೆ ಆಪ್ತರಾಗಿದ್ದು ಧ್ರುವಂತ್ ಹಾಗೂ ರಕ್ಷಿತಾ. ಟಾಸ್ಕ್ ನಲ್ಲಿ ಛಲ ಬಿಡದೆ ಆಡಿದ್ದ ಮಲ್ಲಮ್ಮ, ಉತ್ತಮ ಸ್ಪರ್ಧಿ, ಫಿನಾಲೆಯವರೆಗೆ ಬರ್ತಾರೆ ಎಂಬ ನಿರೀಕ್ಷೆ ಇತ್ತು. ಇದ್ದಷ್ಟು ದಿನ ಉತ್ತಮ ಆಟ ಪ್ರದರ್ಶಿಸಿದ್ದ ಮಲ್ಲಮ್ಮ, ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದರು. ಈಗ ಮಲ್ಲಮ್ಮ ಅನುಬಂಧ ಅವಾರ್ಡ್ ಕಾರ್ಯಕ್ರಮಕ್ಕೆ ಸಿದ್ಧರಾಗ್ತಿದ್ದಾರೆ. ಡಾನ್ಸ್ ಪ್ರಾಕ್ಟೀಸ್ ಮಾಡ್ತಿರೋದಾಗಿ ಮಲ್ಲಮ್ಮ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.