Manju Bhashini vs Rashika argument: ಬಿಗ್‌ಬಾಸ್ ಮನೆಯಲ್ಲಿ ಕುಚುಕು ಗೆಳತಿಯರಾಗಿದ್ದ ಮಂಜು ಭಾಷಿಣಿ ಮತ್ತು ರಾಶಿಕಾ ನಡುವೆ ಜಗಳ ಶುರುವಾಗಿದೆ. 'ಕ್ರೂರಿ ಅಸುರ' ಟಾಸ್ಕ್ ವೇಳೆ ಮಂಜು ಆಡಿದ ವೈಯಕ್ತಿಕ ಮಾತಿನಿಂದ ರಾಶಿಕಾ ತೀವ್ರ ಅಸಮಾಧಾನಗೊಂಡಿದ್ದಾರೆ.
ಬಿಗ್‌ಬಾಸ್ ಮನೆ ಅನ್ನೋದು ರಾಜಕಾರಣ ಇದ್ದಂತೆ. ಇಲ್ಲಿ ಯಾರು ಯಾರಿಗೂ ಮಿತ್ರರಲ್ಲ ಮತ್ತು ಶತ್ರುಗಳಂತೂ ಅಲ್ಲವೇ ಅಲ್ಲ. ಎಲ್ಲರ ಉದ್ದೇಶ ಫಿನಾಲೆಗೆ ಹೋಗಿ ಟ್ರೋಫಿ ಎತ್ತಿ ಹಿಡಿಯೋದು ಆಗಿರುತ್ತದೆ. ಕಳೆದ 10 ದಿನಗಳಿಂದ ಕುಚುಕುಗಳಂತಿದ್ದ ಮಂಜು ಭಾಷಿಣಿ ಮತ್ತು ರಾಶಿಕಾ ನಡುವೆ ಬೆಂಕಿಯ ಕಿಡಿ ಹೊತ್ತಿಕೊಂಡಿದೆ.
25
ಕ್ರೂರಿ ಅಸುರನ ಎಂಟ್ರಿ
ಬಿಗ್‌ಬಾಸ್ ಮನೆಯೊಳಗೆ ಕ್ರೂರಿ ಅಸುರನ ಎಂಟ್ರಿಯಾಗಿದ್ದರಿಂದ ಆಟದ ರೂಪುರೇಷದಲ್ಲಿ ಬದಲಾವಣೆಯಾಗಿದೆ. ಮೊದಲ ದಿನದಿಂದಲೂ ಮಂಜು ಭಾಷಿಣಿ ಮತ್ತು ರಾಶಿಕಾ ಜಂಟಿಗಳಾಗಿದ್ದು, ಜೊತೆಯಲ್ಲಿ ಅಡುಗೆ ಮಾಡುತ್ತಾ ಓಡಾಡುತ್ತಿದ್ದಾರೆ. ಜಂಟಿಗಳಿಗೆ ಒಬ್ಬರಿಗೆ ಒಬ್ಬರೊಬ್ಬರನ್ನು ಸಹಿಸಿಕೊಳ್ಳುವ ತಾಳ್ಮೆ ಇರಬೇಕಾಗುತ್ತದೆ. ಈ ತಾಳ್ಮೆಯ ಕಟ್ಟೆ ಒಡೆದಾಗ ಪ್ರವಾಹ ಉಂಟಾಗುತ್ತದೆ. ಈ ಪ್ರವಾಹದ ತೀವ್ರತೆ ಹೇಗಿರುತ್ತೆ ಎಂಬುದನ್ನು ಇಂದಿನ ಪ್ರೋಮೋದಲ್ಲಿ ಕಾಣಬಹುದಾಗಿದೆ.
35
ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರಾಶಿಕಾ
ಇಂದಿನ ಪ್ರೋಮೋದಲ್ಲಿ ಈ ಹುಡುಗಿ (ರಾಶಿಕಾ) ಪದೇ ಪದೇ ವಾಶ್‌ರೂಂಗೆ ಹೋಗ್ತಾಳೆ ಎಂದು ಬೇಸರದಿಂದ ಹೇಳುತ್ತಾರೆ. ಈ ಮಾತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರಾಶಿಕಾ ಪರ್ಸನಲ್ ವಿಷಯ ಇಲ್ಲಿ ತೆಗೆದುಕೊಂಡು ಬರಬೇಡಿ ಅಂತಾರೆ. ಮನೆಯ ಅಸುರ ಕಾಕ್ರೋಚ್ ಸುಧಿ ನಾವು ಹೇಳುವರೆಗೂ ಹೋಗಬೇಡಿ ಎಂದು ಆಜ್ಞೆ ಮಾಡುತ್ತಾರೆ.
ಮಂಜು ಭಾಷಿಣಿ ಮತ್ತು ರಾಶಿಕಾ ನಡುವಿನ ಜಗಳ ನೋಡುತ್ತಿದ್ದ ಜಾನ್ವಿ ಮತ್ತು ಅಶ್ವಿನಿ ಗೌಡ ನಗುತ್ತಾರೆ. ಅಷ್ಟು ಮಾತ್ರವಲ್ಲ ಚಪ್ಪಾಳೆ ತಟ್ಟುತ್ತಾ ರಾಶಿಕಾಗೆ ತಮ್ಮ ಬೆಂಬಲ ಸೂಚಿಸುತ್ತಾರೆ. ಈ ವಾರ ಇವರೇ ಮನೆಯಿಂದ ಹೊರಗೆ ಹೋಗುವುದು ಎಂದು ಮಾತನಾಡಿಕೊಳ್ಳುತ್ತಾರೆ. ನಂತರ ಇಬ್ಬರ ಜಗಳದ ಮಜಾ ತೆಗೆದುಕೊಳ್ಳುತ್ತಾ, ಚೆನ್ನಾಗಿದೆ.. ಚೆನ್ನಾಗಿದೆ ಎಂದು ಕಮೆಂಟ್ ಪಾಸ್ ಮಾಡಿ ಉರಿಯೋ ಬೆಂಕಿಗೆ ತುಪ್ಪ ಸುರಿಯುವ ಪ್ರಯತ್ನ ಮಾಡಿದಂತೆ ಕಾಣಿಸಿದೆ.
ಈ ಹಿಂದಿನ ಸಂಚಿಕೆಯಲ್ಲಿ ಅಶ್ವಿನಿ ಗೌಡ ನೇರವಾಗಿ ನಾಮಿನೇಟ್ ಮಾಡಿದಾಗ ಮತ್ತು ಇತರೆ ಸ್ಪರ್ಧಿಗಳು ಜಾನ್ವಿಯವರನ್ನು ನಾಮಿನೇಟ್ ಮಾಡುತ್ತಾ ಕಾರಣಗಳನ್ನು ನೀಡುವಾಗ ಮಂಜು ಭಾಷಿಣಿ ಚಪ್ಪಾಳೆ ತಟ್ಟುವ ಮೂಲಕ ಇಬ್ಬರನ್ನು ಅಣುಕಿಸಿದ್ದರು. ಇದೀಗ ಮಂಜು ಭಾಷಿಣಿ ವಿರುದ್ದ ಹೇಳಿಕೆ ಬರುತ್ತಿರುವಾಗ ಅಶ್ವಿನಿ ಗೌಡ ಮತ್ತು ಜಾನ್ವಿ ತಿರುಗೇಟು ನೀಡಿದ್ದಾರೆ.