ಅತಿಥಿಗಳ ಮುಂದೆ ಗುಲಾಮರಾಗಬೇಕಾ? ಬಿಗ್‌ಬಾಸ್ ವಿರುದ್ಧ ಅಸಮಾಧಾನ ಹೊರಹಾಕಿದ ವೀಕ್ಷಕರು

Published : Nov 27, 2025, 09:38 AM IST

'ಬಿಬಿ ಪ್ಯಾಲೇಸ್' ಟಾಸ್ಕ್‌ನಲ್ಲಿ, ಸೀಸನ್ 11ರ ಸ್ಪರ್ಧಿಗಳು ಅತಿಥಿಗಳಾಗಿ ಆಗಮಿಸಿದ್ದಾರೆ. ಅಂಕಗಳಿಗಾಗಿ ಸ್ಪರ್ಧಿಗಳು ಅತಿಥಿಗಳಿಗೆ ಮಸಾಜ್ ಸೇರಿದಂತೆ ಹಲವು ಸೇವೆಗಳನ್ನು ನೀಡುತ್ತಿದ್ದು, ಈ ವರ್ತನೆ ಗುಲಾಮಗಿರಿಯಂತೆ ಇದೆ ಎಂದು ವೀಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
15
ಬಿಗ್‌ಬಾಸ್ ಕನ್ನಡ ಸೀಸನ್ 12

ಸದ್ಯ ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಬಿಬಿ ಪ್ಯಾಲೇಸ್ ಟಾಸ್ಕ್ ಆರಂಭವಾಗಿದೆ. ಅತಿಥಿಗಳು ಮನೆಯಲ್ಲಿರುವ ಸ್ಪರ್ಧಿಗಳ ಜೊತೆ ನಡೆದುಕೊಳ್ಳುವ ರೀತಿಗೆ ವೀಕ್ಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳು ವೈರಲ್ ಆಗುತ್ತಿವೆ.

25
ಸೀಸನ್ 11ರ ಸ್ಪರ್ಧಿ

ಸೀಸನ್ 11ರ ಸ್ಪರ್ಧಿಗಳಾದ ಉಗ್ರಂ ಮಂಜು, ತ್ರಿವಿಕ್ರಮ್, ರಜತ್, ಮೋಕ್ಷಿತಾ ಪೈ ಮತ್ತು ಚೈತ್ರಾ ಕುಂದಾಪುರ ಅತಿಥಿಗಳಾಗಿ ಆಗಮಿಸಿದ್ದರು. ಈ ಅತಿಥಿಗಳಿಗೆ ಉತ್ತಮ ಮತ್ತು ಗುಣಮಟ್ಟದ ಸೇವೆಯನ್ನು ನೀಡುವ ಮೂಲಕ ಸ್ಪರ್ಧಿಗಳು ಪಾಯಿಂಟ್ಸ್ ಪಡೆದುಕೊಳ್ಳಬೇಕು. ಹೀಗಾಗಿ ಸ್ಪರ್ಧಿಗಳು ಅತಿಥಿಗಳ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

35
ಫೋಟೋ ವೈರಲ್

ಗಿಲ್ಲಿ ನಟ ಅವರ ಸೇವೆ ಬಗ್ಗೆ ಐವರು ಅತಿಥಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಸೇವೆ ಪಡೆದುಕೊಳ್ಳುವ ರೀತಿಯಲ್ಲಿ ಅತಿಥಿಗಳ ವರ್ತನೆಯೂ ಅತಿಯಾಗಿದೆ. ನೋಡುಗರಿಗೆ ಕಿರಿಕಿರಿಯನ್ನುಂಟು ಮಾಡ್ತಿದೆನ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಬಿಬಿ ಪ್ಯಾಲೇಸ್‌ನಲ್ಲಿ ಹಲವು ಸೇವೆಗಳನ್ನು ನೀಡಲಾಗುತ್ತಿದೆ. ಗಾರ್ಡನ್ ಏರಿಯಾದಲ್ಲಿ ಸ್ಪರ್ಧಿಗಳಿಂದ ಅತಿಥಿಗಳು ಮಸಾಜ್ ಸೇರಿದಂತೆ ಇನ್ನಿತರ ಸೇವೆ ಪಡೆಯುತ್ತಿರುವ ಫೋಟೋ ವೈರಲ್ ಆಗಿದೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ರೋಸ್ಟ್‌ಗೆ ರಜತ್ ಬ್ಲಾಸ್ಟ್; ರಣರಂಗವಾದ ಬಿಗ್‌ಬಾಸ್ ಮನೆ

45
ಫೋಟೋದಲ್ಲಿ ಏನಿದೆ?

ವೈರಲ್ ಆಗಿರುವ ಫೋಟೋದಲ್ಲಿ ಮಂಜು ಅವರ ಕಾಲಿಗೆ ಸೂರಜ್ ಮಸಾಜ್ ಮಾಡುತ್ತಿದ್ದಾರೆ. ಇತ್ತ ರಘು ಸಹ ಮತ್ತೋರ್ವ ಅತಿಥಿಗೆ ಬಾಡಿ ಮಸಾಜ್ ಮಾಡುತ್ತಿದ್ದಾರೆ. ಬಾಡಿ ಮಸಾಜ್ ಮಾಡಿಕೊಳ್ಳುತ್ತಿರುವ ಸ್ಪರ್ಧಿ ಯಾರು ಎಂದು ಫೋಟೋದಲ್ಲಿ ಕಾಣಿಸಿಲ್ಲ. ಮಹಿಳಾ ಅತಿಥಿಗಳು ಆಹಾರ ಸವಿಯುತ್ತಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ನೆರವೇರಿದ ರಕ್ಷಿತಾಳ ವಿಚಿತ್ರ ಆಸೆ! ಎರಡನೇ ಬಾರಿಗೆ ಸತ್ಯ ಆಯ್ತು!

55
ವೀಕ್ಷಕರ ಅಭಿಪ್ರಾಯ ಏನು?

ಅತಿಥಿಗಳಿಗೆ ಸೇವೆ ನೀಡುವ ನೆಪದಲ್ಲಿ ಸ್ಪರ್ಧಿಗಳನ್ನು ಗುಲಾಮರಂತೆ ನಡೆಸಿಕೊಳ್ಳುವುದು ಎಷ್ಟು ಸರಿ ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ. ಸ್ಪರ್ಧಿಗಳು ತಪ್ಪು ಮಾಡಿದಾಗ ಮಧ್ಯೆ ಪ್ರವೇಶಿಸುವ ಬಿಗ್‌ಬಾಸ್, ಈಗ್ಯಾಕೆ ಮಾತನಾಡುತ್ತಿಲ್ಲ ಎಂದು ಕೇಳುತ್ತಿದ್ದಾರೆ. ಸ್ಪರ್ಧಿಗಳ ಗೌರವಕ್ಕೆ ಧಕ್ಕೆಯುಂಟು ಮಾಡದಂತೆ ಅತಿಥಿಗಳು ಸೇವೆ ಪಡೆದುಕೊಂಡ್ರೆ ನೋಡಲು ಚೆನ್ನಾಗಿರುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Read more Photos on
click me!

Recommended Stories