ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ತಮ್ಮ ಸಂತೋಷಕ್ಕೆ ಮೂರು ಪ್ರಮುಖ ಕಾರಣಗಳನ್ನು ಹಂಚಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರಿಂದ ಚಪ್ಪಾಳೆ ಮತ್ತು ಮೆಚ್ಚುಗೆ, ಜನರಿಂದ ಮೊದಲು ಸೇವ್ ಆಗಿದ್ದು ಹಾಗೂ ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇ ಅವರ ಖುಷಿಗೆ ಕಾರಣವಾಗಿದೆ.
ಬಿಗ್‌ಬಾಸ್ ಮನೆಯ ಪುಟ್ಟಿಯಾಗಿರುವ ರಕ್ಷಿತಾ ಶೆಟ್ಟಿ ತಮ್ಮ ಖುಷಿಗೆ ಮೂರು ಕಾರಣಗಳನ್ನು ನೀಡಿದ್ದಾರೆ. ಶನಿವಾರದ ವೀಕೆಂಡ್ ಸಂಚಿಕೆ ಮುಕ್ತಾಯದ ಬಳಿಕ ತಮಗಾಗುತ್ತಿರುವ ಸಂತೋಷವನ್ನು ಮನೆಯ ಸದಸ್ಯರೊಂದಿಗೆ ಹಂಚಿಕೊಂಡಿದ್ದಾರೆ.
25
ಚಪ್ಪಾಳೆ
ಬಿಗ್‌ಬಾಸ್ ಸ್ಪರ್ಧಿಗಳಿಗೆ ಟ್ರೋಫಿ ಪಡೆಯೋದು ಎಷ್ಟು ಮುಖ್ಯವೋ? ವಾರಕ್ಕೊಮೆ ಶೋ ನಿರೂಪಕರಾಗಿರುವ ನಟ ಸುದೀಪ್ ನೀಡುವ ಚಪ್ಪಾಳೆ ಸಿಗಬೇಕೆಂದು ಬಯಸುತ್ತಾರೆ. ಎಂಟು ವಾರ ಕಳೆದರೂ ಕೇವಲ ನಾಲ್ಕು ಜನರು ಮಾತ್ರ ಕಿಚ್ಚನ ಚಪ್ಪಾಳೆಯನ್ನು ಪಡೆದುಕೊಂಡಿದ್ದಾರೆ.
35
ತಾಳ್ಮೆ ಮತ್ತು ಮಾನವೀಯತೆ
ಈ ಹಿಂದಿನ ವಾರ ತಾಳ್ಮೆ ಮತ್ತು ಮಾನವೀಯತೆಯಿಂದ ಆಟವಾಡಿ, ವಿರೋಧಿಗಳಿಂದಲೇ ಉತ್ತಮ ಪಡೆದುಕೊಂಡಿರುವ ರಕ್ಷಿತಾ ಶೆಟ್ಟಿ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಈ ಹಿಂದೆ ಅನಗತ್ಯವಾಗಿ ನಾನು ಅತಿರೇಕವಾಗಿ ನಡೆದುಕೊಂಡಿದ್ದು ತಪ್ಪು. ನೀವು ಹೇಳಿದ್ಮೇಲೆ ಸರಿ ಮಾಡಿಕೊಂಡೆ ಎಂದು ತಪ್ಪನ್ನು ಯಾವುದೇ ಅಳಕಿಲ್ಲದೇ ಒಪ್ಪಿಕೊಂಡಿದ್ದರು.
ಸುದೀಪ್ ಹೇಳಿದ ಮಾತುಗಳನ್ನ ಸೂಕ್ಷ್ಮವಾಗಿ ಕೇಳಿಸಿಕೊಂಡಿದ್ದ ರಕ್ಷಿತಾ ಶೆಟ್ಟಿ ತಮ್ಮ ವ್ಯಕ್ತಿತ್ವಕ್ಕಾಗುತ್ತಿದ್ದ ಹಾನಿಯನ್ನು ತಪ್ಪಿಸಿಕೊಂಡು ಹಳೆಯ ಆಟಕ್ಕ ಮರಳಿದ್ದರು. ಹಾಗೆಯೇ ಹನಿ ಹನಿ ಡ್ರಮ್ ಕಹಾನಿ ಟಾಸ್ಕ್‌ನಲ್ಲಿಯೂ ಅದ್ಭುತವಾಗಿ ಆಟವಾಡಿದ್ರು. ಹಾಗೆಯೇ ಮನೆಯಲ್ಲಿಯೂ ರಕ್ಷಿತಾ ನಡೆಗೆ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ವೇಳೆ ತಮ್ಮ ಖುಷಿಗೆ ರಕ್ಷಿತಾ ಶೆಟ್ಟಿ ಮೂರು ಕಾರಣಗಳನ್ನು ನೀಡಿದರು.