BBK 12 ನಾಮಿನೇಷನ್: ರಣಕಹಳೆ ಮೊಳಗಿಸಿದ ಧ್ರುವಂತ್, ಬೆಕ್ಕಿನ ಹೆಜ್ಜೆ ಇಟ್ಟ ರಕ್ಷಿತಾ ಶೆಟ್ಟಿ

Published : Nov 24, 2025, 09:09 AM IST

ಈ ವಾರದ ಬಿಗ್‌ಬಾಸ್ ನಾಮಿನೇಷನ್ ಪ್ರಕ್ರಿಯೆಯು ಸ್ಪರ್ಧಿಗಳ ಬಟ್ಟೆ ತೊಳೆಯುವ ವಿಶೇಷತೆಯೊಂದಿಗೆ ನಡೆದಿದೆ. ಧ್ರುವಂತ್ ಅವರು ಅಶ್ವಿನಿ ಮತ್ತು ಜಾನ್ವಿಯನ್ನು 'ಡಮ್ಮಿ ಕ್ಯಾಂಡಿಡೇಟ್‌' ಎಂದು ಆರೋಪಿಸಿದ್ದು, ಇದು ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.

PREV
16
ನಾಮಿನೇಷನ್ ಪ್ರಕ್ರಿಯೆ

ಬಿಗ್‌ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಸ್ಪರ್ಧಿಗಳ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿ ಮಾಡಿದೆ. ಸ್ಪರ್ಧಿಯಲ್ಲಿನ ನೆಗೆಟಿವ್ ಅಂಶವನ್ನು ಹೇಳಿ ನಾಮಿನೇಟ್ ಮಾಡಬೇಕಾಗುತ್ತದೆ. ಹಾಗಾಗಿ ಇದು ಸ್ಪರ್ಧಿಗಳ ನಡುವಿನ ಮನಸ್ತಾಪಕ್ಕೆ ಕಾರಣವಾಗುತ್ತದೆ.

26
ಧ್ರುವಂತ್ ರಣಕಹಳೆ

ಈ ವಾರದ ನಾಮಿನೇಷನ್ ಪ್ರಕ್ರಿಯೆಯನ್ನು ವಿಶೇಷವಾಗಿ ನೀಡಲಾಗಿದೆ. ನಾಮಿನೇಟ್ ಮಾಡುವ ಸ್ಪರ್ಧಿಯ ಬಟ್ಟೆಯನ್ನು ತೊಳೆಯುತ್ತಾ ಕಾರಣ ನೀಡಬೇಕು. ಈ ನಾಮಿನೇಟ್‌ನಲ್ಲಿ ಅಶ್ವಿನಿ ಗೌಡ ಮತ್ತು ಜಾನ್ವಿ ವಿರುದ್ಧ ಧ್ರುವಂತ್ ರಣಕಹಳೆಯನ್ನು ಮೊಳಗಿಸಿದ್ದಾರೆ.

36
ಡಮ್ಮಿ ಕ್ಯಾಂಡಿಡೇಟ್‌

ಈ ಮನೆಯಲ್ಲಿ ಫೇಕ್ ಮುಖವಾಡ ಹಾಕಿಕೊಂಡಿರುವ ವ್ಯಕ್ತಿ ಅಂದ್ರೆ ಅಶ್ವಿನಿ ಗೌಡ. ಈ ಮನೆಯಲ್ಲಿ ಮಿಸ್ ಲೀಡ್ ಮಾಡಿದ್ದು ಜಾನ್ವಿ ಮತ್ತು ಅಶ್ವಿನಿ ಗೌಡ. ಇವರಿಬ್ಬರು ಈ ಮನೆಯಲ್ಲಿರುವ ಡಮ್ಮಿ ಕ್ಯಾಂಡಿಡೇಟ್‌ಗಳು ಎಂದು ಧ್ರುವಂತ್ ಹೇಳಿದ್ದಾರೆ. ಈ ಆರೋಪಗಳಿಗೆ ಅಶ್ವಿನಿ ಗೌಡ ಖಡಕ್‌ ಆಗಿಯೇ ತಿರುಗೇಟು ನೀಡಿದ್ದಾರೆ.

46
ಅಶ್ವಿನಿ ಗೌಡ

ನಮ್ಮನ್ನು ಫೇಕ್‌ ಅನ್ನುತ್ತಿರುವ ಈ ವ್ಯಕ್ತಿಯೇ ಫೇಕ್. ನಮ್ಮಿಬ್ಬರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ನಾವೇನು ಮಲ್ಲಮ್ಮ ಅಲ್ಲ. ಫೇಕ್ ಮಾತನಾಡುವ ನಿಮಗೆ ಇಷ್ಟಿದ್ರೆ, ತಾಕತ್‌ನಿಂದ ಮಾತನಾಡುವ ನಮಗೆ ಎಷ್ಟಿರಲ್ಲ ಎಂದು ಹೇಳಿದ ಅಶ್ವಿನಿ ಗೌಡ ಅವರು ತಮ್ಮ ಕೋಪವನ್ನು ಧ್ರುವಂತ್ ಬಟ್ಟೆ ಮೇಲೆ ತೋರಿಸಿದ್ದಾರೆ.

56
ಬಟ್ಟೆ ಮೇಲೆ ಕೋಪ

ಜಾನ್ವಿ ಅವರು ಸಹ ಧ್ರುವಂತ್ ಅವರನ್ನೇ ನಾಮಿನೇಟ್ ಮಾಡಿದ್ದಾರೆ. ಮತ್ತೊಂದೆಡೆ ರಕ್ಷಿತಾ ಶೆಟ್ಟಿ ಅವರು ಗಿಲ್ಲಿ ನಟ ಅವರ ಹೆಸರು ಹೇಳಿರೋದನ್ನು ಕೇಳಿಸಿಕೊಳ್ಳಬಹುದು. ಒಟ್ಟಿನಲ್ಲಿ ಸ್ಪರ್ಧಿಗಳು ತಮ್ಮ ಕೋಪವನ್ನೆಲ್ಲಾ ಬಟ್ಟೆ ಮೇಲೆ ತೋರಿಸಿರೋದು ಕಾಣುತ್ತದೆ. ಯಾರು, ಯಾರನ್ನು ನಾಮಿನೇಟ್ ಮಾಡಿದ್ದಾರೆ ಅನ್ನೋದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

66
ಬೆಕ್ಕಿನ ಹೆಜ್ಜೆಯನ್ನಿಟ್ಟ ರಕ್ಷಿತಾ ಶೆಟ್ಟಿ

ಗಿಲ್ಲಿಯೊಂದಿಗೆ ಚೆನ್ನಾಗಿರುವ ರಕ್ಷಿತಾ ಶೆಟ್ಟಿ ಆಟ ಅಂತಾ ಬಂದಾಗ ತಮ್ಮ ವಿವೇಚನೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಕಳಪೆ ಪಟ್ಟವನ್ನು ಗಿಲ್ಲಿಗೆ ರಕ್ಷಿತಾ ನೀಡಿದ್ದರು. ಇದೀಗ ನಾಮಿನೇಟ್ ಮಾಡುವ ಮೂಲಕ ಆಟ ಮತ್ತು ಸ್ನೇಹ ಬೇರೆ ಎಂಬ ಸಂದೇಶವನ್ನು ನೀಡಿ ಬೆಕ್ಕಿನ ಹೆಜ್ಜೆಯನ್ನು ರಕ್ಷಿತಾ ಶೆಟ್ಟಿ ಇರಿಸಿದ್ದಾರೆ.

ಇದನ್ನೂ ಓದಿ: BBK 12: ಸೀರಿಯಸ್ ಟೈಮ್‌ನಲ್ಲೂ ಗಿಲ್ಲಿ ವಿಚಿತ್ರ ವರ್ತನೆ; ಇತ್ತ ರಿಷಾ ಗೌಡ ಎಲಿಮಿನೇಷನ್‌ನಲ್ಲಿತ್ತು ಅಚ್ಚರಿ

ಪ್ರೋಮೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್  ಮಾಡಿ

https://www.instagram.com/p/DRbEz0EAUvX/

Read more Photos on
click me!

Recommended Stories