ಬಿಗ್ ಬಾಸ್‌ನಲ್ಲಿ ಬಿಗ್ ಟ್ವಿಸ್ಟ್, ಗೆಲ್ಲುವ ಸ್ಪರ್ಧಿ ಫಿನಾಲೆಗೆ ಕೆಲವೇ ದಿನಗಳ ಮೊದಲು 18 ಲಕ್ಷ ರೂಪಾಯಿ ನಗದು ಆಯ್ಕೆ ಮಾಡಿ ಮನೆಯಿಂದ ಹೊರ ನಡೆದಿದ್ದಾರೆ. ಇದು ಅಭಿಮಾನಿಗಳಿಗೆ ತೀವ್ರ ಶಾಕ್ ಕೊಟ್ಟಿದೆ.
ಬಿಗ್ ಬಾಸ್ ಸ್ಪರ್ಧೆ ಪ್ರತಿ ಎಪಿಸೋಡ್‌ನಲ್ಲಿ ಹಲವು ಟ್ವಿಸ್ಟ್ ನೀಡುತ್ತದೆ. ಪ್ರೇಕ್ಷಕರ ಬೆಂಬಲ, ಟಾಸ್ಕ್, ಮನರಂಜನೆ ಹೀಗೆ ಆಲ್ರೌಂಡರ್ ಆಟದ ಮೂಲಕ ಸ್ಪರ್ಧಿಗಳು ಫಿನಾಲೆ ಪ್ರವೇಶಿಸುತ್ತಾರೆ. ಕನ್ನಡ ಬಿಗ್ ಬಾಸ್ ಶೋ ಅಂತಿಮ ಹಂತ ತಲುಪಿದೆ. ಫಿನಾಲೆ ಸ್ಪರ್ಧಿಗಳಾಗಿ ಗಿಲ್ಲಿ ನಟ, ರಘು, ಅಶ್ವಿನಿ ಸೇರಿದಂತೆ ಪ್ರಮುಖರು ಗುರುತಿಸಿಕೊಂಡಿದ್ದಾರೆ. ಇತ್ತ ಇತರ ಭಾಷೆಗಳ ಬಿಗ್ ಬಾಸ್ ಶೋ ಕೂಡ ರೋಚಕತೆ ಪಡೆದುಕೊಳ್ಳುತ್ತಿದೆ. ಈ ಪೈಕಿ ತಮಿಳು ಬಿಗ್ ಬಾಸ್‌ನಲ್ಲಿ ಅಚ್ಚರಿ ಬೆಳವಣಿಗೆಯಾಗಿದೆ.
27
18 ಲಕ್ಷ ರೂ ಆಫರ್ ಆಯ್ಕೆ ಮಾಡಿದ ಸ್ಪರ್ಧಿ
ತಮಿಳು ಬಿಗ್ ಬಾಸ್‌ನಲ್ಲಿ ಸ್ಪರ್ಧಿ ಗಾನಾ ವಿನೋದ್ ಈ ಬಾರಿ ತಮಿಳು ಬಿಗ್ ಬಾಸ್ ಗೆಲ್ಲುವ ನೆಚ್ಚಿನ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದಾರೆ. ತಮಿಳು ಬಿಗ್ ಬಾಸ್ ಫಿನಾಲೆಗೆ ಕೇವಲ ಐದು ದಿನ ಮಾತ್ರ ಬಾಕಿ ಇದೆ. ಇದರ ನಡುವೆ ಬಿಗ್ ಬಾಸ್ ಆಫರ್ ಒಂದು ನೀಡಿತ್ತು. 18 ಲಕ್ಷ ರೂಪಾಯಿ ಪಡೆದು ಮನೆಯಿಂದ ಹೊರ ನಡೆಯಬಹುದು. ಅಥವಾ ಆಫರ್ ತಿರಸ್ಕರಿಸಿ ಮನೆಯಲ್ಲಿ ಮುಂದುವರಿಯಬಹುದು ಅನ್ನೋ ಆಫರ್ ನೀಡಲಾಗಿತ್ತು. ಇದರಲ್ಲಿ ಗೆಲ್ಲುವ ಸ್ಪರ್ಧಿ ಗಾನಾ ವಿನೋದ್ 18 ಲಕ್ಷ ರೂಪಾಯಿ ಆಯ್ಕೆ ಮಾಡಿಕೊಂಡಿದ್ದಾರೆ.
37
ಅವರಸದಲ್ಲಿ ನಿರ್ಧಾರ ತೆಗೆದುಕೊಂಡ್ರಾ ಗೆಲ್ಲುವ ಸ್ಪರ್ಧಿ
ಬಿಗ್ ಬಾಸ್ ಮೊದಲಿಗೆ ಹಣದ ಆಫರ್ ನೀಡಿತ್ತು. ಬಳಿಕ ಹಣ ಒಟ್ಟು ಮೊತ್ತು ಹೆಚ್ಚಿಸುತ್ತಾ ಹೋಗಿತ್ತು. 18 ಲಕ್ಷ ರೂಪಾಯಿ ತಲುಪುವ ವೇಳೆ ಗಾನಾ ವಿನೋದ್ ಹಣ ಆಯ್ಕೆ ಮಾಡಿಕೊಂಡು ಮನೆಯಿಂದ ಹೊರ ನಡೆದಿದ್ದಾರೆ. ಇದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಇನ್ನು ಐದು ದಿನದಲ್ಲಿ ಬಿಗ್ ಬಾಸ್ ಟ್ರೋಫಿ ಜೊತೆ 50 ಲಕ್ಷ ರೂಪಾಯಿ ಗೆಲ್ಲಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗಾನಾ ವಿನೋದ್ 18 ಲಕ್ಷ ರೂಪಾಯಿ ಸೂಟ್‌ಕೇಸ್ ಹಿಡಿದು ಮನೆಯಿಂದ ಹೊರ ನಡೆದಿದ್ದಾರೆ. ಹೊರಬಂದ ಬೆನ್ನಲ್ಲೇ ಗಾನಾ ವಿನೋದ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಸೋಶಿಯಲ್ ಮೀಡಿಯಾ ಮೂಲಕ ಪೋಸ್ಟ್ ಹಾಕಿದ್ದಾರೆ. ಹಣಕ್ಕಿಂತ ನಿಮ್ಮ ಪ್ರೀತಿ ದೊಡ್ಡದು ಎಂದು ಅಭಿಮಾನಿಗಳು, ಬೆಂಬಲಿಗರಿಗೆ ಸಂದೇಶ ಕಳುಹಿಸಿದ್ದಾರೆ.
57
ಬಿಗ್ ಬಾಸ್‌ನಿಂದ ಹೊರನಡೆದ ಸ್ಪರ್ಧಿಗೆ ಸಿಗುವ ಒಟ್ಟು ಮೊತ್ತವೆಷ್ಟು?
ಬಿಗ್ ಬಾಸ್‌ನಿಂದ 18 ಲಕ್ಷ ರೂಪಾಯಿ ಹಿಡಿದು ಹೊರಟ ಗಾನಾ ವಿನೋದ್‌ಗೆ ಸಿಗುವ ಒಟ್ಟು ಮೊತ್ತದ ಲೆಕ್ಕಾಚಾರ ಇಲ್ಲಿದೆ. ಗಾನಾ ವಿನೋದ್ ಬಿಗ್ ಬಾಸ್‌ನಲ್ಲಿ ಪಾಲ್ಗೊಂಡ ಪ್ರತಿ ಎಪಿಸೋಡ್‌ಗೆ 27,000 ರೂಪಾಯಿ ನಿಗದಿ ಮಾಡಲಾಗಿದೆ. 95 ದಿನಗಳ ಈ ಮೊತ್ತ 27,55,000 ರೂಪಾಯಿ ಆಗಲಿದೆ. 27.50 ಲಕ್ಷ ರೂಪಾಯಿ ಹಾಗೂ ನಗದು ಬಹುಮಾನ 18 ಲಕ್ಷ ರೂಪಾಯಿ ಒಟ್ಟು 45.5 ಲಕ್ಷ ರೂಪಾಯಿ ಮೊತ್ತವನ್ನು ಗಾನಾ ವಿನೋದ್ ಪಡೆಯಲಿದ್ದಾರೆ.
67
ಟ್ರೋಫಿ ಜೊತೆ ಅರ್ಧ ಕೋಟಿ ಮಿಸ್
ಗಾನಾ ವಿನೋಧ್ ನಿರ್ಧಾರವನ್ನು ಕೆಲ ಅಭಿಮಾನಿಗಳು ಟೀಕಿಸಿದ್ದಾರೆ. ಗಾನಾ ವಿನೋಧ್ ಬಿಗ್ ಬಾಸ್ ಟ್ರೋಫಿ ಗೆಲ್ಲುವ ಸ್ಪರ್ಧಿಯಾಗಿದ್ದರು. ನಾಲ್ಕು ದಿನ ತಾಳ್ಮೆಯಿಂದ ಇದ್ದರೆ 50 ಲಕ್ಷ ರೂಪಾಯಿ, ಟ್ರೋಫಿ ಜೊತೆಗೆ 100 ದಿನದ ಸಂಭಾವನೆ ಗೆಲ್ಲಬಹುದಿತ್ತು. ಇದರ ಒಟ್ಟು ಮೊತ್ತ ಸರಿಸುಮಾರು 78 ಲಕ್ಷ ರೂಪಾಯಿ ಎಂದು ಹಲವು ಅಭಿಮಾನಿಗಳು ಲೆಕ್ಕಾಚಾರ ನೀಡಿದ್ದಾರೆ.
ಟ್ರೋಫಿ ಜೊತೆ ಅರ್ಧ ಕೋಟಿ ಮಿಸ್
77
ಗಾನಾ ವಿನೋದ್ ಹೊರನಡೆದ ಕಾರಣ ಇತರ್ ಸ್ಪರ್ಧಿಗಳಲ್ಲಿ ಪೈಪೋಟಿ
ತಮಿಳು ಬಿಗಾ ಬಾಸ್ 9ರಲ್ಲಿ ಗಾನಾ ವಿನೋಧ್ ಮನೆಯಿಂದ ಹೊರನಡೆಯುತ್ತಿದ್ದಂತೆ ಇತರ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಟ್ರೋಫಿಗಾಗಿ ಪೈಪೋಟಿ ತೀವ್ರಗೊಂಡಿದೆ. ಫಿನಾಲೆ ಟಿಕೆಟ್ ಪಡೆದಿರುವ ಅರೋರಾ ಸಿಂಕ್ಲೈರ್, ದಿವ್ಯ ಗಣೇಶ್, ಸಾಂದ್ರ, ವಿಕ್ಕಾಲ್ಸ್ ವಿಕ್ರಮ, ಶಬರಿನಾಥನ್ ಸ್ಪರ್ಧಿಗಳ ನಡುವೆ ಪೈಪೋಟಿ ನಡೆಯುತ್ತಿದೆ.
ಗಾನಾ ವಿನೋದ್ ಹೊರನಡೆದ ಕಾರಣ ಇತರ್ ಸ್ಪರ್ಧಿಗಳಲ್ಲಿ ಪೈಪೋಟಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.