ಹುಟ್ಟುಹಬ್ಬ ಸಂಭ್ರಮದಲ್ಲಿ Bigg Boss ಅಶ್ವಿನಿ ಗೌಡ: ವಯಸ್ಸೆಷ್ಟು? ನಟಿಯ ಒಂದಿಷ್ಟು ಇಂಟರೆಸ್ಟಿಂಗ್​ ಮಾಹಿತಿ

Published : Nov 23, 2025, 07:10 PM IST

ಬಿಗ್ ಬಾಸ್ ಮನೆಯಲ್ಲಿ ಜಗಳದಿಂದಲೇ ಸದ್ದು ಮಾಡುತ್ತಿರುವ ನಟಿ ಅಶ್ವಿನಿ ಗೌಡ ಅವರ 40ನೇ ಹುಟ್ಟುಹಬ್ಬದ ವಿಶೇಷವಿದು. 17ನೇ ವಯಸ್ಸಿಗೆ ಮದುವೆ, ಮಗ, 150 ಮನೆಗಳ ಒಡತಿಯಾಗಿರುವ ಅವರ ಶ್ರೀಮಂತಿಕೆ, ವಿವಾದಗಳು ಹಾಗೂ ಜಾಹ್ನವಿ ಮೇಲಿನ ಪ್ರೀತಿಯ ಹಿಂದಿನ ಕಾರಣವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

PREV
19
ಜಗಳದಿಂದ ಫೇಮಸ್​

ಬಿಗ್​ಬಾಸ್​ನಲ್ಲಿ (Bigg Boss) ಅಶ್ವಿನಿ ಗೌಡ ಅವರು ಹವಾ ಸೃಷ್ಟಿಸುತ್ತಿದ್ದಾರೆ. ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಇವರ ವಿರುದ್ಧವೇ ಕಮೆಂಟ್​ಗಳ ಸುರಿಮಳೆಯಾಗುತ್ತಿರುತ್ತದೆ. ಅಶ್ವಿನಿ ಗೌಡ ಅವರು ಜಗಳದಿಂದಲೇ ಬಿಗ್​ಬಾಸ್​ ಮನೆಯಲ್ಲಿ ಫೇಮಸ್​ ಆಗಿರೋ ಕಾರಣದಿಂದಾಗಿ ಅವರ ಬಗ್ಗೆ ನೆಗೆಟಿವ್​ ಕಮೆಂಟ್ಸ್​ ಸುರಿಮಳೆಯೇ ಆಗುತ್ತಿರುತ್ತದೆ.

29
40ರ ಸಂಭ್ರಮ

ಅಂದಹಾಗೆ ನಟಿ, ಸಾಮಾಜಿಕ ಹೋರಾಟಗಾರ್ತಿ ಎಂದು ಗುರುತಿಸಿಕೊಂಡಿರೋ ಅಶ್ವಿನಿ ಗೌಡ ಅವರಿಗೆ ಇಂದು ಅಂದರೆ ನವೆಂಬರ್​ 23 ಹುಟ್ಟುಹಬ್ಬದ ಸಂಭ್ರಮ. 1985ರಲ್ಲಿ ಇವರು ಹುಟ್ಟಿದ್ದು, ಇವರಿಗೆ ಇದೀಗ 40 ವರ್ಷಗಳು ಪೂರ್ಣಗೊಂಡು 41ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

39
ಹಲವು ಸಿನಿಮಾಗಳಲ್ಲಿ ನಟನೆ

ಅಶ್ವಿನಿ ಗೌಡ ಅವರು 100 ಸಿನಿಮಾ ಸೇರಿದಂತೆ ಮಹಾಪರ್ವ, ಕಾವೇರಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದಾರೆ. ಕನ್ನಡದ ಪರ ಹೋರಾಟಗಾರ್ತಿ ಎಂದೂ ಗುರುತಿಸಿಕೊಂಡಿರೋ ಇವರ ಮೇಲೆ 25ಕ್ಕೂ ಅಧಿಕ ದೂರುಗಳು ಇವೆ ಎನ್ನಲಾಗುತ್ತಿದೆ. ಇಂಥ ಕಾಂಟ್ರವರ್ಸಿಯಿಂದಲೇ ಇದೀಗ ಬಿಗ್​ಬಾಸ್​ ಮನೆಯವರೆಗೂ ನಟಿ ಕಾಲಿಟ್ಟಿದ್ದಾರೆ.

49
ಸಿರಿವಂತಿಕೆ

ಇದಾಗಲೇ ಅಶ್ವಿನಿ ಅವರು ಸೆಲೆಬ್ರಿಟಿಯಾಗಿರುವ ಕಾರಣ ಹಲವಾರು ಕಡೆಗಳಲ್ಲಿ ಸಂದರ್ಶನ ನೀಡಿದ್ದಾರೆ. ತಮಗೆ 150 ಮನೆಗಳ ಬಾಡಿಗೆ ಬರುತ್ತದೆ. ತಾತನ ಬಳಿ ಆಸ್ತಿ ಇತ್ತು ಅದನ್ನು ತಂದೆ ಮತ್ತಷ್ಟು ಅಭಿವೃದ್ದಿಪಡಿಸಿದರು ಎನ್ನುವ ಮೂಲಕ ಹುಟ್ಟಿನಿಂದಲೇ ತಾವು ಶ್ರೀಮಂತರು ಎನ್ನುವುದನ್ನು ತಿಳಿಸಿದ್ದಾರೆ.

59
17ನೇ ವಯಸ್ಸಿನಲ್ಲಿ ಮದುವೆ

17ನೇ ವಯಸ್ಸಿನಲ್ಲಿಯೇ ಮದುವೆಯಾದವರು ಅಶ್ವಿನಿ ಗೌಡ. ಆದರೆ ಕಾರಣಾಂತರಗಳಿಂದ ಅವರ ಈ ಮದುವೆ ಮುರಿದು ಬಿದ್ದಿದೆ. ಅವರಿಗೆ ಒಬ್ಬ ಮಗ ಕೂಡ ಇದ್ದು, ಆತನೇ ತನ್ನ ಪ್ರಪಂಚ ಎಂದು ಅವರು ಹೇಳಿಕೊಂಡಿದ್ದಾರೆ. ಕಲರ್ಸ್​ ಕನ್ನಡ ವಾಹಿನಿ ಶೇರ್​ ಮಾಡಿರುವ ಹುಟ್ಟುಹಬ್ಬದ ಪ್ರೊಮೋದಲ್ಲಿ ಕೂಡ ಅಶ್ವಿನಿ ಗೌಡ ಅವರ ಮಗನನ್ನು ನೋಡಬಹುದಾಗಿದೆ.

69
ಮಗನೇ ಸೇತುವೆ

ನಮ್ಮ ಕುಟುಂಬಕ್ಕೂ ಹಾಗೂ ನಮ್ಮ ಮಾಜಿ ಪತಿಯ ಕುಟುಂಬಕ್ಕೂ ನನ್ನ ಮಗನೇ ಸೇತುವೇ, ನನ್ನ ಜೊತೆಗಿಂತಲೂ ನನ್ನ ಮಗ ಅಪ್ಪನೊಂದಿಗೆ ತುಂಬಾ ಕ್ಲೋಸ್‌. ನಾನು ಯಾವುದೇ ಕೆಲಸ ಮಾಡಿದರೂ ಅದಕ್ಕೆ ನನ್ನ ಅತ್ತೆ ಮಾವ ಅದಕ್ಕೆ ಪ್ರೋತ್ಸಾಹ ನೀಡಿದ್ದಾರೆ, ಇಂದಿಗೂ ಕೂಡ ನಾನು ಅವರ ಮನೆಗೆ ಹೋಗುತ್ತೇನೆ, ನನ್ನ ಅತ್ತೆ ಮಾವನೊಂದಿಗೆ ನಾನು ಚೆನ್ನಾಗಿಯೇ ಇದ್ದೇನೆ" ಎಂದು ಅಶ್ವಿನಿ ಗೌಡ ಹೇಳಿಕೊಂಡಿದ್ದಾರೆ.

79
ಜಾಹ್ನವಿ ಮೇಲೆ ಪ್ರೀತಿ

ಬಿಗ್​ಬಾಸ್​ ಮನೆಯಲ್ಲಿ ಜಾಹ್ನವಿ ಅವರನ್ನು ಕಂಡಂತೆ ಅಶ್ವಿನಿ ಗೌಡ ಅವರಿಗೆ ಅಪಾರ ಪ್ರೀತಿ. ಇದರ ಬಗ್ಗೆ ಟೀಕೆಗಳೂ ಕೇಳಿ ಬರುವುದು ಉಂಟು. ಆದರೆ ಮನೆಯಿಂದ ಪತ್ರ ಬರುವ ಟಾಸ್ಕ್​ನಲ್ಲಿ ಈ ಪ್ರೀತಿಯ ಬಗ್ಗೆಯೂ ಅಶ್ವಿನಿ ಗೌಡ (Bigg Boss Ashwini Gowda) ರಿವೀಲ್​ ಮಾಡಿದ್ದರು. ಅಶ್ವಿನಿ ಗೌಡ ಜಾಹ್ನವಿಗಾಗಿ ತಮ್ಮ ಮಗನ ಪತ್ರ ಹಾಗೂ ಇಮ್ಯೂನಿಟಿಯನ್ನ ತ್ಯಾಗ ಮಾಡಿದ್ದರು. ಈ ಕುರಿತಂತೆ ಮಾತನಾಡಿದ್ದ ಅಶ್ವಿನಿ ಗೌಡ ಒಬ್ಬ ತಾಯಿ ಎಷ್ಟು ಮುಖ್ಯನೋ, ತಂದೆ ಕೂಡ ಅಷ್ಟೇ ಮುಖ್ಯ ಆಗಿರ್ತಾರೆ. ನನಗೆ ಜಾಹ್ನವಿ ಅವರ ಜರ್ನಿ ಗೊತ್ತಿದೆ. ನಾನು ಅವರು ಒಂದೇ ದೋಣಿಯಲ್ಲಿ ಸಾಗುತ್ತಿದ್ದೇವೆ ಎಂದಿದ್ದರು.

89
ತಂದೆಯ ಪ್ರೀತಿ

ನನ್ನ ಮಗನಿಗೆ ಸಂಪೂರ್ಣವಾಗಿ ತಂದೆಯ ಪ್ರೀತಿ ಸಿಕ್ಕಿದೆ. ನನಗೆ ನನ್ನ ತಂದೆ ಬೇಕು ಅಂದರೂ ಕೂಡ ನನಗೆ ನನ್ನ ತಂದೆ ಸಿಗಲ್ಲ. ಆದರೆ, ಜಾಹ್ನವಿ ಮಗನಿಗೆ ತಂದೆಯಾಗಿ ತಾಯಿಯಾಗಿ ಜಾಹ್ನವಿ ನಿಂತಿದ್ದಾರೆ. ಅವರಿಗೆ ಈ ಪತ್ರ ಡಿಸರ್ವಿಂಗ್‌ ಅಂತ ನನಗೆ ಅನಿಸುತ್ತೆ. ಹಾಗಾಗಿ ಜಾಹ್ನವಿಗೆ ಪತ್ರವನ್ನ ಕೊಡೋದಾಗಿ ಹೇಳಿ ಕಣ್ಣೀರಿಟ್ಟರು.

99
ಹುಟ್ಟುಹಬ್ಬದ ಶುಭಾಶಯ

ಒಟ್ಟಿನಲ್ಲಿ ಅಶ್ವಿನಿ ಗೌಡ ಟೀಕೆಗಳಿಂದಲೇ ಫೇಮಸ್​ ಆಗುತ್ತಿದ್ದಾರೆ. ಅವರು ಬಿಗ್​ಬಾಸ್​ನಲ್ಲಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮುತ್ತಿದ್ದಾರೆ. ಅವರನ್ನು ದ್ವೇಷಿಸುವವರು ಇರುವಷ್ಟೇ ಪ್ರೀತಿಸುವವರೂ ಇದ್ದಾರೆ. ಅವರಿಗೆ ಕಲರ್ಸ್​ ಕನ್ನಡದ ವತಿಯಿಂದ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ಕೋರಲಾಗಿದೆ.

Read more Photos on
click me!

Recommended Stories