ಬಿಗ್‌ಬಾಸ್ ಕನ್ನಡ ಸೀಸನ್ 12ರ ಡ್ರಮ್ ಟಾಸ್ಕ್‌ನಲ್ಲಿ ಉಸ್ತುವಾರಿಗಳಾದ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವೆ ತೀವ್ರ ವಾಕ್ಸಮರ ನಡೆದಿದೆ. ಈ ಜಗಳವು ವೈಯಕ್ತಿಕ ನಿಂದನೆಯ ಹಂತಕ್ಕೆ ತಲುಪಿದ್ದು, ಹಿಂದಿನ ಮನಸ್ತಾಪ ಈಗ ಜ್ವಾಲೆಯಾಗಿ ಮಾರ್ಪಟ್ಟಿದೆ.
ಸೀಸನ್ 12ರ ಕನ್ನಡದ ಬಿಗ್‌ಬಾಸ್ 50 ದಿನಗಳನ್ನು ಪೂರೈಸಿದ್ದು, ಆಟಗಾರರಲ್ಲಿ ತಮ್ಮವರು ಯಾರು? ವಿರೋಧಿಗಳು ಯಾರು ಎಂಬುದರ ಲೆಕ್ಕ ಸಿಕ್ಕಿದೆ. ಹಾಗೆಯೇ ಬಿಗ್‌ಬಾಸ್ ನೀಡುವ ಟಾಸ್ಕ್‌ಗಳನ್ನು ಹೇಗೆ ಆಡಬೇಕು ಎಂಬುದರ ಲೆಕ್ಕವೂ ಗೊತ್ತಾಗಿದೆ. ಇದೀಗ ಬಿಗ್‌ಬಾಸ್ ನೀಡಿದ ಟಾಸ್ಕ್ ನಲ್ಲಿ ಮತ್ತೆ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವೆ ಜಗಳದ ಕಿಡಿ ಹೊತ್ತಿಕೊಂಡಿದೆ.
25
ಡ್ರಮ್ Task
ಸದಸ್ಯರನ್ನು ಎರಡು ತಂಡಗಳನ್ನಾಗಿ ಮಾಡಲಾಗಿದ್ದು, ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರನ್ನು ಉಸ್ತುವಾರಿಗಳನ್ನಾಗಿ ಮಾಡಲಾಗಿದೆ. ನಾಲ್ವರು ಸ್ಪರ್ಧಿಗಳು ಡ್ರಮ್ ಹೆಗಲ್ಮೇಲೆ ಹೊತ್ತಿಕೊಂಡು ನಿಂತಿರುತ್ತಾರೆ. ಎದುರಾಳಿ ತಂಡದವರು ಆ ಡ್ರಮ್ ಕೆಳಗೆ ಇಳಿಸುವಂತೆ ಮಾಡಬೇಕು. ಇದಕ್ಕಾಗಿ ಸ್ಪರ್ಧಿಗಳು ಡ್ರಮ್‌ನಲ್ಲಿ ನೀರು ತುಂಬಲು ಪ್ರಯತ್ನಿಸುತ್ತಾರೆ. ಮೊದಲು ಡ್ರಮ್ ಇಳಿಸೋರು ಆಟ ಸೋಲುತ್ತಾರೆ.
35
ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ
ಈ ಆಟದ ಸಂದರ್ಭದಲ್ಲಿ ಉಸ್ತುವಾರಿಗಳಾದ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವೆ ವಾಕ್ಸಮರ ಏರ್ಪಟ್ಟಿದ್ದು, ಇದು ವೈಯಕ್ತಿಕವಾಗಿ ನಿಂದಿಸುವ ಹಂತಕ್ಕೆ ತಲುಪಿದೆ. ಇಬ್ಬರು ಸ್ಪರ್ಧಿಗಳು ಏಕವಚನದಲ್ಲಿ ಪರಸ್ಪರ ನಿಂದಿಸಿದ್ದಾರೆ. ಈ ಹಿಂದೆಯೂ ಹಲವು ಬಾರಿ ಇಬ್ಬರ ನಡುವೆ ಜಗಳ ನಡೆದು ಮನಸ್ತಾಪದ ಕಿಚ್ಚು ಹತ್ತಿಕೊಂಡಿತ್ತು. ಅದೀಗ ಜ್ವಾಲೆಯಾಗಿ ಬದಲಾಗಿದೆ.
ಇಂದಿನ ಪ್ರೋಮೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ವ್ಯಕ್ತಪಡಿಸಿದ್ದಾರೆ.ಅಶ್ವಿನಿ ಮತ್ತು ಜಾನ್ವಿ ಅವರನ್ನು ಬಿಗ್ ಬಾಸ್ ನೇರವಾಗಿ ನಾಮಿನೇಷನ್ ಮಾಡಿರುವುದು ಒಳ್ಳೆಯದಾಯಿತು. ಯಾಕೆಂದ್ರೆ ಬಕೆಟ್ ತಂಡದ ಸದಸ್ಯರಿಗೆ. ಈಗ ಅವರದೇ ತಂಡದ ಸದಸ್ಯರನ್ನು ನಾಮಿನೇಷನ್ ಮಾಡುವ ಸಂದರ್ಭ ಒದಗಿ ಬಂದಿದೆ. ಯಾರನ್ನು ನಾಮಿನೇಷನ್ ಮಾಡ್ತಾರೆ ಮತ್ತು ಏನ್ ಕಾರಣ ಕೊಡ್ತಾರೆ ಅಂತ ನೋಡಬೇಕು ಎಂದು ಹೇಳಿದ್ದಾರೆ.
ಒಂದು ಊರಿನ ಕನ್ನಡ ಭಾಷೆ ಶೈಲಿಯ ಬಗ್ಗೆ ಅವಹೇಳನ ಮಾಡುತ್ತಿರುವ ಧ್ರುವ ವರ್ತನೆ ತುಂಬಾ ಅತಿಯಾಯಿತು. ಮಂಗಳೂರಲ್ಲಿ ಕನ್ನಡದಲ್ಲಿ ಮಾತನಾಡುವಾಗ ಎಂಥ ಗೊತ್ತುಂಟಾ ಶಬ್ದದಿಂದಲೇ ಪ್ರಾರಂಭ ಮಾಡುತ್ತಾರೆ. ಈ ವಾರ ಕಿಚ್ಚ ಸುದೀಪ್ ಇದರ ಬಗ್ಗೆ ಮಾತನಾಡುವರೇ ಎಂದು ಪ್ರಶ್ನೆ ಮಾಡಿದ್ದಾರೆ.
ಮೂಲ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಅಶ್ವಿನಿ ಗೌಡ ಮತ್ತು ಜಾನ್ವಿ ನೇರವಾಗಿ ನಾಮಿನೇಟ್ ಆಗಿದ್ದಾರೆ. ಡ್ರೆಸ್ಸಿಂಗ್ ರೂಮ್‌ನೊಳಗೆ ಇಬ್ಬರು ಸ್ಪರ್ಧಿಗಳು ಪಿಸು ಮಾತಿನಲ್ಲಿ ಮಾತನಾಡಿದ್ದರು. ಸುದೀಪ್ ಎಚ್ಚರಿಕೆ ಬಳಿಕವೂ ನಿಯಮ ಉಲ್ಲಂಘಿಸಿದ್ದಕ್ಕೆ ನಾಮಿನೇಟ್ ಮಾಡಿ ಶಿಕ್ಷೆ ನೀಡಲಾಗಿದೆ.