ಬಿಗ್ಬಾಸ್ ಖ್ಯಾತಿಯ ಡಾಗ್ ಸತೀಶ್ ತಮ್ಮ ಮಗ ಕಾಲೇಜಿನಲ್ಲಿ ಫೇಲ್ ಆದ ಕಾರಣಕ್ಕೆ ಅದ್ಧೂರಿ ಪಾರ್ಟಿ ಆಯೋಜಿಸಿದ್ದಾರೆ. ಈ ಪಾರ್ಟಿಯಲ್ಲಿ ಸೆಲೆಬ್ರಿಟಿಗಳು ಭಾಗವಹಿಸಿದ್ದು, ಇದೇ ವೇಳೆ ಸತೀಶ್ ಅವರು ಬಿಗ್‌ಬಾಸ್ ಮನೆಗೆ ಮತ್ತೆ ಪ್ರವೇಶಿಸುವ ಬಗ್ಗೆ ಸುಳಿವು ನೀಡಿದ್ದಾರೆ.
ಮಾತೆತ್ತಿದರೆ ಕೋಟಿ ಕೋಟಿ ಎಂದೇ ಹೇಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಲೇ ಹವಾ ಸೃಷ್ಟಿಸುತ್ತಿರುವವರು ಬಿಗ್ಬಾಸ್ ಖ್ಯಾತಿಯ ಡಾಗ್ ಸತೀಶ್ (Bigg Boss Dog Sathish). ತಮ್ಮದು ಲಕ್ಷ ಲಕ್ಷ ಬೆಲೆ ಬಾಳುವ ಡ್ರೆಸ್, ತಮ್ಮ ಬಳಿ 100 ಕೋಟಿಯ ನಾಯಿ ಇದೆ, ಬಿಗ್ಬಾಸ್ ಅನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯುವ ತಾಕತ್ತು ನನಗಿದೆ... ಹೀಗೆ ಹಲವಾರು ಡೈಲಾಗ್ ಮೂಲಕ ಫೇಮಸ್ ಆಗ್ತಿದ್ದಾರೆ ಡಾಗ್ ಸತೀಶ್.
26
ನಂಬರ್ 2 ಹೀರೋ
ತಮ್ಮ ಮಗನನ್ನು ವಿಶ್ವದ ನಂಬರ್ 2 ಹೀರೋ ಮಾಡುತ್ತೇನೆ ಎಂದು ಪಣ ತೊಟ್ಟಿರುವ ಡಾಗ್ ಸತೀಶ್ ಅವರ ಮಗ ಕಾಲೇಜಿನಲ್ಲಿ ಫೇಲ್ ಆಗಿದ್ದಾನಂತೆ. ನಂಬರ್ 1 ಹೀರೋ ಮಾಡಿದರೆ ಅಹಂ ಹೆಚ್ಚಾಗುವ ಕಾರಣ, ನಂಬರ್ 2 ಹೀರೋಮಾಡುವುದಾಗಿ ಸಂದರ್ಶನಗಳಲ್ಲಿ ಹೇಳಿಕೊಳ್ಳುತ್ತಲೇ ಬಂದಿರುವ ಡಾಗ್ ಸತೀಶ್ ಅವರು ಇದೀಗ ಮಗ ಫೇಲ್ ಆಗಿರುವುದಕ್ಕೆ ದೊಡ್ಡ ಪಾರ್ಟಿಯನ್ನು ಮಾಡಿ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಿದ್ದಾರೆ.
36
ಮಗನ ಫೇಲ್ ಪಾರ್ಟಿ
ನಟನಾಗಲು, ರಾಜಕಾರಣಿಯಾಗಲು, ಆಗರ್ಭ ಶ್ರೀಮಂತನಾಗಲು ಶಿಕ್ಷಣವೇ ಮುಖ್ಯವಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಇದೇ ಕಾರಣಕ್ಕೆ ಡಾಗ್ ಸತೀಶ್ ಅವರು ತಮ್ಮ ಮಗನ ಫೇಲ್ ಪಾರ್ಟಿಯನ್ನು ವಿಜ್ರಂಭಣೆಯಿಂದ ಆಚರಿಸಿದ್ದಾರೆ. ಇದರಲ್ಲಿ ಸೋನು ಗೌಡ, ಬಿಗ್ಬಾಸ್ ಕಾಕ್ರೋಚ್ ಸುಧಿ ಸೇರಿದಂತೆ ಹಲವಾರು ಮಂದಿ ಆಗಮಿಸಿ ಮಗನಿಗೆ ವಿಷ್ ಮಾಡಿದ್ದಾರೆ.
ಇದೇ 9ರಂದು ಮಗನ ಹುಟ್ಟುಹಬ್ಬವೂ ಇತ್ತು. ಹಾಗೂ ಈಗ ಫೇಲ್ ಆಗಿದ್ದಾನೆ ಎನ್ನುವ ಕಾರಣಕ್ಕೆ ಕೇಕ್ ಕಟ್ ಮಾಡಿ ಈ ಪಾರ್ಟಿಯನ್ನು ಆಯೋಜಿಸಲಾಗಿದೆ ಎಂದು ಡಾಗ್ ಸತೀಶ್ ಹೇಳಿಕೊಂಡಿದ್ದಾರೆ.
56
ಡ್ರೆಸ್ ಡಿಸೈನರ್
ಇದೇ ಸಂದರ್ಭದಲ್ಲಿ ಅವರ ಡ್ರೆಸ್ಗಳನ್ನು ಡಿಸೈನ್ ಮಾಡುವವರೂ ಪಾರ್ಟಿಗೆ ಆಗಮಿಸಿದ್ದು, ಮುಂದಿನ ಬಾರಿ ಬಿಗ್ಬಾಸ್ಗೆ ಹೋದಾಗ ಇದನ್ನು ಧರಿಸುವಂತೆ ಹೇಳಿದ್ದಾರೆ. ಆಗ ಡಾಗ್ ಸತೀಶ್ ಅವರು, ಆ ಮೂರು ದಿನಗಳಲ್ಲಿ ಒಮ್ಮೆ ಖಂಡಿತವಾಗಿಯೂ ಈ ಡ್ರೆಸ್ ಧರಿಸುತ್ತೇನೆ ಎಂದಿದ್ದಾರೆ. ಅಂದರೆ ಬಿಗ್ಬಾಸ್ಗೆ ಡಾಗ್ ಸತೀಶ್ ಮತ್ತೆ ಎಂಟ್ರಿ ಕೊಡ್ತಿದ್ದಾರಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
66
ಹೋಗುವುದು ಯಾವಾಗ?
ಅಷ್ಟಕ್ಕೂ ಗ್ರ್ಯಾಂಡ್ ಫಿನಾಲೆ ದಿನ ಬಿಗ್ಬಾಸ್ನ ಎಲ್ಲಾ ಸ್ಪರ್ಧಿಗಳನ್ನು ಕರೆಸುವುದು ಸಾಮಾನ್ಯ. ಅದೇ ರೀತಿ Bigg Boss Season 12ರ ಗ್ರ್ಯಾಂಡ್ ಫಿನಾಲೆಯ ದಿನದ ಬಗ್ಗೆ ಬಹುಶಃ ಡಾಗ್ ಸತೀಶ್ ಅವರು ಮಾತನಾಡಿರಬಹುದು. ಆದರೆ ಈ ವಿಡಿಯೋ ವೈರಲ್ ಆಗುತ್ತಲೇ, ಸತೀಶ್ ಅವರು ಬಿಗ್ಬಾಸ್ಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡುತ್ತಿದ್ದಾರೆ ಎಂದು ಹಲವರು ಅಂದುಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.