BBK 12: ನೋಡಿದ್ದು, ಕೇಳಿದ್ದು ಸುಳ್ಳಾಗಬಹುದು: ಬಿಗ್‌ಬಾಸ್ ಸೀಸನ್ 12ರಲ್ಲಿ ರೋಚಕ ತಿರುವು

Published : Dec 20, 2025, 09:13 AM IST

BBK 12 Elimination Twist: ಈ ವಾರ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗುವ ಸಾಧ್ಯತೆಯಿದೆ. ಮತ್ತೊಂದೆಡೆ, ಸೀಕ್ರೆಟ್ ರೂಮ್‌ನಲ್ಲಿರುವ ರಕ್ಷಿತಾ ಶೆಟ್ಟಿ, ಧ್ರುವಂತ್ ವರ್ತನೆಯಿಂದ ಬೇಸತ್ತು ಮನೆಗೆ ಮರಳಲು ಮನವಿ ಮಾಡಿದ್ದಾರೆ.

PREV
15
ಬಿಗ್‌ಬಾಸ್ ಕನ್ನಡ ಸೀಸನ್ 12

ರೆಸ್ಟೊರೆಂಟ್ ಟಾಸ್ಕ್‌ ವೇಳೆ ಬಿಗ್‌ಬಾಸ್ ಮನೆಯೊಳಗೆ ಸೀಸನ್ 11ರ ಸ್ಪರ್ಧಿಗಳಾದ ಉಗ್ರಂ ಮಂಜು, ವಿಕ್ರಂ, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ಆಗಮಿಸಿದ್ದರು. ವಾರಂತ್ಯಕ್ಕೆ ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ಸ್ಪರ್ಧಿಗಳಾಗಿ ಮುಂದುವರಿದಿದ್ದರು. ಸ್ಪರ್ಧಿಗಳಾಗಿ ರಜತ್ ಮತ್ತು ಚೈತ್ರಾ ತಮ್ಮ ಆಟವನ್ನು ಮುಂದುವರಿಸಿದ್ದರು.

25
ವೀಕ್ಷಕರಲ್ಲಿ ಗೊಂದಲ

ಈ ಆಟದಲ್ಲಿ ಚೈತ್ರಾ ಕುಂದಾಪುರ ಮನೆಯ ಕ್ಯಾಪ್ಟನ್ ಆಗಿ ಅಧಿಕಾರ ಸಹ ಚಲಾಯಿಸಿದರು. ಈ ಹಿಂದಿನ ವಾರದಲ್ಲಿ ಮನೆಯವರ ಮುಂದೆ ಎಲಿಮಿನೇಟ್ ಆಗಿ ಸೀಕ್ರೆಟ್ ರೂಮ್ ಸೇರಿರುವ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಕಮ್ ಬ್ಯಾಕ್ ಮಾಡುವ ಸಮಯ ಬಂದಿದೆ. ಆದ್ರೆ ಈ ವಾರವೂ ವೋಟಿಂಗ್ ಲೈನ್ ತೆರೆದಿರಲಿಲ್ಲ. ಹಾಗಾಗಿ ಯಾರು ಮನೆಯಿಂದ ಹೊರಗೆ ಹೋಗ್ತಾರೆ ಎಂಬುದರ ಬಗ್ಗೆ ವೀಕ್ಷಕರಲ್ಲಿ ಗೊಂದಲ ಮೂಡಿದೆ.

35
Expect The Unexpected ಆಟ

ಬಿಗ್‌ಬಾಸ್ ಮನೆಯಲ್ಲಿ ಮಾತ್ರ ನಾಮಿನೇಷನ್ ಪ್ರಕ್ರಿಯೆ ಈ ಬಾರಿ ತುಂಬಾ ವಿಶೇಷ ಮತ್ತು ವಿಭಿನ್ನವಾಗಿ ನಡೆದಿತ್ತು. ಈ ಪ್ರಕ್ರಿಯೆಯ ಪ್ರಕಾರ, ಚೈತ್ರಾ ಕುಂದಾಪುರ, ಮಾಳು ನಿಪನಾಳ, ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ಧನುಷ್ ಮತ್ತು ರಜತ್ ನಾಮಿನೇಟ್ ಆಗಿದ್ದಾರೆ. 

ಮೊದಲೇ ಹೇಳಿದಂತೆ ಸೀಸನ್ 12ರ ಆಟ Expect The Unexpected ಆಗಿರೋದರಿಂದ ಈ ಬಾರಿ ಮನೆಯಿಂದ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

45
ಇಬ್ಬರು ಮನೆಯಿಂದ ಔಟ್?

ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಬಂದಿರುವ ಸೀಸನ್ 11ರ ಆಟಗಾರರಾದ ರಜತ್ ಕಿಶನ್ ಮತ್ತು ಚೈತ್ರಾ ಕುಂದಾಪುರ ಎಲಿಮಿನೇಟ್ ಆಗಲಿದ್ದಾರಂತೆ. ಇಬ್ಬರು ಸ್ಪರ್ಧಿಗಳು ಕೇವಲ ಒಂದಿಷ್ಟು ದಿನಗಳಿಗಾಗಿ ಮಾತ್ರ ಬಂದಿದ್ರಾ ಎಂಬ ಅನುಮಾನ ಮೂಡಿದೆ. ಮನೆಯಲ್ಲಿದ್ದ ಕಡಿಮೆ ಸಮಯದಲ್ಲಿಯೇ ಚೈತ್ರಾ ಕುಂದಾಪುರ ಮನೆಯ ನಾಯಕಿಯಾಗಿ ಕ್ಯಾಪ್ಟನ್ ರೂಮ್‌ನ ಸೌಲಭ್ಯ ಮತ್ತು ಕಳಪೆಯಾಗಿ ಜೈಲುವಾಸವನ್ನು ಸಹ ಅನುಭವಿಸಿದ್ದಾರೆ.

ಇದನ್ನೂ ಓದಿ: BBK 12: ಈ ವಾರ ಮಾತ್ರ ಕಿಚ್ಚ ಸುದೀಪ್‌ ಈ ವಿಷ್ಯ ಮಾತಾಡ್ಬೇಕು; ಇಲ್ಲ ಅಂದ್ರೆ ಸಮಸ್ಯೆ ತಪ್ಪಿದ್ದಲ್ಲ!

55
ಬಿಗ್‌ಬಾಸ್ ಮನೆಯೊಳಗೆ ಕಳುಹಿಸಿ

ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಧ್ರುವಂತ್‌ ಜೊತೆಯಲ್ಲಿರಲು ಆಗುತ್ತಿಲ್ಲ. ದಯವಿಟ್ಟು ನನ್ನನ್ನು ಬಿಗ್‌ಬಾಸ್ ಮನೆಯೊಳಗೆ ಕಳುಹಿಸಿ ಎಂದು ರಕ್ಷಿತಾ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ. ಧ್ರುವಂತ್ ಡ್ಯೂಯಲ್ ಪರ್ಸನಾಲಿಟಿ ವ್ಯಕ್ತಿಯಾಗಿದ್ದಾರೆ ಎಂದು ರಕ್ಷಿತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: BBK 12: ಧ್ರುವಂತ್ ನೆಮ್ಮದಿ ನನ್ನ ಕೈಯಲ್ಲುಂಟು: ಸುದೀಪ್ ಮುಂದೆ ಕಣ್ಣೀರಿನ ಕಥೆ ಹೇಳಿಕೊಂಡ ರಕ್ಷಿತಾ ಶೆಟ್ಟಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories