ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ವಿಶೇಷ ಟಾಸ್ಕ್ ನೀಡಲಾಗಿದ್ದು, ಪುರುಷ ಸ್ಪರ್ಧಿಗಳನ್ನು ಪೆಟ್ಟಿಗೆಯಲ್ಲಿ ಬಂಧಿಸಲಾಗಿದೆ. ಮಹಿಳಾ ಸ್ಪರ್ಧಿಗಳು ಒಗಟು ಬಿಡಿಸಿ ಅವರನ್ನು ಪಾರು ಮಾಡಬೇಕಿದ್ದು, ಈ ಅಪಾಯಕಾರಿ ಟಾಸ್ಕ್ ಅನ್ನು ಯಾರೂ ಅನುಕರಿಸಬಾರದೆಂದು ವಾಹಿನಿ ಎಚ್ಚರಿಕೆ ನೀಡಿದೆ.
ಬಿಗ್ಬಾಸ್ (Bigg Boss)ನಲ್ಲಿ ಇದೀಗ ಟಾಸ್ಕ್ ಭರಾಟೆ ಬಹಳ ಜೋರಾಗಿಯೇ ನಡೆಯುತ್ತಿದೆ. ಬಿಗ್ಬಾಸ್ನ ಅರ್ಧ ಸೀಸನ್ ಇದಾಗಲೇ ಮುಗಿದಿರುವ ಹಿನ್ನೆಲೆಯಲ್ಲಿ, ಉಳಿದುಕೊಂಡಿರುವ ಸ್ಪರ್ಧಿಗಳು ಫೈನಲ್ ತಲುಪಲು ಹರಸಾಹಸ ಮಾಡುವುದು ಅನಿವಾರ್ಯವಾಗಿದೆ.
26
ಅಳಿವು-ಉಳಿವಿನ ಪ್ರಶ್ನೆ
ಇಷ್ಟು ದೂರದ ಪಯಣದವರೆಗೆ ಬಂದು ಬಿಗ್ಬಾಸ್ನಿಂದ ಮರಳುವುದು ಯಾವ ಸ್ಪರ್ಧಿಗೂ ಇಷ್ಟವಾಗುವುದಿಲ್ಲ. ಇನ್ನೇನು ಕೆಲವೇ ವಾರಗಳು ಇರುವ ಹಿನ್ನೆಲೆಯಲ್ಲಿ ಇದು ಅವರ ಅಳಿವು-ಉಳಿವಿನ ಪ್ರಶ್ನೆಯಾಗಿದ್ದು, ಟಾಸ್ಕ್ಗಳನ್ನು ಪೂರ್ತಿ ಮಾಡಲು ಹೆಣಗಾಡುತ್ತಿದ್ದಾರೆ.
36
ವಿಶೇಷ ಟಾಸ್ಕ್
ಇದೀಗ ಬಿಗ್ಬಾಸ್ ಸ್ಪರ್ಧಿಗಳಿಗೆ ವಿಶೇಷ ಟಾಸ್ಕ್ ನೀಡಿದೆ. ಅದೇನೆಂದರೆ ಪುರುಷ ಸ್ಪರ್ಧಿಗಳೆಲ್ಲಾ ಪೆಟ್ಟಿಗೆಯಲ್ಲಿ ಬಂಧಿಯಾಗಿದ್ದಾರೆ. ಹೊರಗಡೆಯಿಂದ ಲಾಕ್ ಮಾಡಲಾಗಿದೆ. ಮಹಿಳಾ ಸ್ಪರ್ಧಿಗಳಿಗೆ ಒಗಟು ಹೇಳಲಾಗುತ್ತದೆ. ಅವರು ಆ ಒಗಟನ್ನು ಬಿಡಿಸಿದರೆ ಅವರ ಜೋಡಿಯ ಪೆಟ್ಟಿಗೆಯ ಲಾಕ್ ಓಪನ್ ಆಗುತ್ತದೆ.
ಮಹಿಳಾ ಸ್ಪರ್ಧಿಗಳು ಒಗಟು ಬಿಡಿಸಲು ಹೆಣಗಾಡುತ್ತಿದ್ದರೆ, ಅತ್ತ ಪುರುಷ ಸ್ಪರ್ಧಿಗಳು ಪೆಟ್ಟಿಗೆಯ ಒಳಗೆ ಉಸಿರುಗಟ್ಟುವಂತೆ ಕಾಣಿಸುತ್ತಿದ್ದಾರೆ. ಬೇಗ ಬೇಗ ಪೆಟ್ಟಿಗೆ ತೆರೆಯಿರಿ ಎಂದು ಹೇಳುತ್ತಿದ್ದಾರೆ.
56
ವೀಕ್ಷಕರಿಗೆ ಎಚ್ಚರಿಕೆ
ಅಂದಹಾಗೆ ಈ ಟಾಸ್ಕ್ ಮಾಡುವ ಸಮಯದಲ್ಲಿ ಕಲರ್ಸ್ ಕನ್ನಡ ವಾಹಿನಿ (Colors Kannada Channel) ವೀಕ್ಷಕರಿಗೆ ವಿಶೇಷ ಎಚ್ಚರಿಕೆಯನ್ನು ನೀಡಿದೆ. ಅದೇನೆಂದರೆ, ಇಂಥ ಸ್ಪರ್ಧೆಗಳನ್ನು ನೋಡಿ ಅದನ್ನು ಹುಚ್ಚುಚ್ಚಾಗಿ ಅನುಕರಣೆ ಮಾಡುವವರೂ ಇದ್ದೇ ಇದ್ದಾರೆ. ಅದಕ್ಕಾಗಿಯೇ ಈ ಎಚ್ಚರಿಕೆ.
66
ವಾಹಿನಿಯ ವಾರ್ನಿಂಗ್
ಪೆಟ್ಟಿಗೆಯೊಳಗೆ ಸ್ಪರ್ಧಿಗಳನ್ನು ಹಾಕಿ ಹೊರಗೆ ಲಾಕ್ ಮಾಡಿರುವ ಟಾಸ್ಕ್ ಅನ್ನು ಪರಿಣಿತರ ನೇತೃತ್ವದಲ್ಲಿ ಮಾಡಲಾಗಿದೆ. ದಯವಿಟ್ಟು ಇದರ ಅನುಕರಣೆ ಮಾಡಬೇಡಿ ಎನ್ನುವ ವಾರ್ನಿಂಗ್ ನೀಡಲಾಗಿದೆ.