ಟೆಂಪನ್‌ ರನ್‌ ಆಯ್ತು, ಈಗ ಜೋಡಿ ಫೋಟೋಶೂಟ್!‌ ಏನು ವಿಶೇಷ ಶಿಶಿರ್‌ ಶಾಸ್ತ್ರೀ, ಐಶ್ವರ್ಯಾ ಶಿಂಧೋಗಿ ಅವ್ರೇ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶೋನಲ್ಲಿ ಭಾಗವಹಿಸಿದ್ದ ಐಶ್ವರ್ಯಾ ಶಿಂಧೋಗಿ ಹಾಗೂ ಶಿಶಿರ್‌ ಶಾಸ್ತ್ರೀ ಅವರು ಈಗ ಜೋಡಿ ಫೋಟೋಶೂಟ್‌ ಮಾಡಿಸಿದ್ದಾರೆ. ಇದರ ವಿಶೇಷತೆ ಏನು? 

'ಬಿಗ್‌ ಬಾಸ್‌ ಕನ್ನಡ ಸೀಸನ್‌ 11' ಶೋನಲ್ಲಿ ಐಶ್ವರ್ಯ ಶಿಂಧೋಗಿ, ಶಿಶಿರ್‌ ಶಾಸ್ತ್ರೀ ಪರಿಚಯ ಆಗಿತ್ತು. ಅವರಿಬ್ಬರು ಅಲ್ಲಿಯೇ ಸ್ನೇಹಿತರಾಗಿದ್ದರು. 

ಬಿಗ್‌ ಬಾಸ್‌ ಮನೆಯಲ್ಲಿ ಜೋಡಿ ಸುಖ ದುಃಖಗಳನ್ನು ಹಂಚಿಕೊಂಡಿದೆ. ಅಷ್ಟೇ ಅಲ್ಲದೆ ಮಾನಸಿಕವಾಗಿ ಪರಸ್ಪರ ಬೆಂಬಲ ಕೊಟ್ಟಿಕೊಂಡಿದ್ದರು. 


ಬಿಗ್‌ ಬಾಸ್‌ ಮನೆಯಿಂದ ಬಂದನಂತರದಲ್ಲಿ ಮೋಕ್ಷಿತಾ ಪೈ, ಐಶ್ವರ್ಯ ಶಿಂಧೋಗಿ, ಶಿಶಿರ್‌ ಶಾಸ್ತ್ರೀ ಅವರು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಎಂದು ಟೆಂಪಲ್‌ ರನ್‌ ಮಾಡುತ್ತಿದ್ದಾರೆ. 

ಟೆಂಪಲ್‌ ರನ್‌ ಬಳಿಕ ಕೆಲ ಕಾರ್ಯಕ್ರಮಗಳಲ್ಲಿಯೂ ಐಶ್ವರ್ಯ ಶಿಂಧೋಗಿ, ಶಿಶಿರ್‌ ಶಾಸ್ತ್ರೀ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈಗ ಈ ಜೋಡಿ ಫೋಟೋಶೂಟ್‌ ಮಾಡಿಸಿಕೊಂಡಿದೆ. 

ಕಲಾವಿದರು ವಿಭಿನ್ನವಾದ ಫೋಟೋಶೂಟ್‌ಗಳಲ್ಲಿ ಕಾಣಿಸಿಕೊಂಡು, ಪ್ರಯೋಗ ಮಾಡುತ್ತಿರುತ್ತಾರೆ. ಈಗ ಇವರು ಕೂಡ ಅದೇ ಹಾದಿಯಲ್ಲಿದ್ದಾರೆ. 

ನೀಲಿ ಬಣ್ಣದ ಲೆಹೆಂಗಾದಲ್ಲಿ ಐಶ್ವರ್ಯಾ ಮಿಂಚಿದ್ದರೆ, ಕಪ್ಪು ಹಾಗೂ ಹಳದಿ ಬಣ್ಣದ ಡ್ರೆಸ್‌ನಲ್ಲಿ ಶಿಶಿರ್‌ ಶಾಸ್ತ್ರೀ ಕಂಗೊಳಿಸಿದ್ದಾರೆ. 

ಐಶ್ವರ್ಯಾ ಶಿಂಧೋಗಿ, ಶಿಶಿರ್‌ ಶಾಸ್ತ್ರೀ ಫೋಟೋಶೂಟ್‌ ನೋಡಿದರೆ ಪ್ರಿ ವೆಡ್ಡಿಂಗ್‌ ಫೋಟೋಶೂಟ್‌ ರೀತಿ ಅದ್ದೂರಿ ಆಗಿದೆ ಎಂದು ನೆಟ್ಟಿಗರು ಕಾಮೆಂಟ್‌ ಮಾಡ್ತಿದ್ದಾರೆ. 

Latest Videos

click me!