ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ 'ರಾಧಾ ಕಲ್ಯಾಣ' ಧಾರಾವಾಹಿ ಪ್ರಸಾರವಾಗಿತ್ತು. ಈ ಧಾರಾವಾಹಿಯಲ್ಲಿ ವಿಶಾಖಾ ಎಂಬ ಪಾತ್ರದಲ್ಲಿ ಚೈತ್ರಾ ರೈ ನಟಿಸಿದ್ದರು. ಚೈತ್ರಾ ರೈ ಅವರೀಗ ಒಮಾನ್ ದೇಶದ ಮಸ್ಕಟ್‌ನಲ್ಲಿ ಹೋಳಿ ಹಬ್ಬ ಆಚರಿಸಿದ್ದಾರೆ.
28
ಚೈತ್ರಾ ರೈ ಅವರು, 'ನಾಗಮಣಿ', 'ಕುಸುಮಾಂಜಲಿ', ʼಬೊಂಬೆಯಾಟಯ್ಯʼ, 'ಗೆಜ್ಜೆಪೂಜೆ', 'ಪೌರ್ಣಮಿ', 'ಬಣ್ಣದ ಬುಗುರಿ', 'ಯುಗಾದಿ' ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೆ ಸಾಲು ಸಾಲು ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು.
38
ಚೈತ್ರಾ ರೈ ಅವರು ಮಂಗಳೂರು ಮೂಲದ ಪ್ರಸನ್ನ ಶೆಟ್ಟಿಯನ್ನು ಮದುವೆಯಾಗಿದ್ದಾರೆ. ಪ್ರಸನ್ನ ಅವರು ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಚೈತ್ರಾ ಅವರು ಆಗಾಗ ಕತಾರ್‌ಗೆ ಭೇಟಿ ಕೊಡುತ್ತಿದ್ದರು. ಕೆಲ ಸಮಯದಿಂದ ಈ ಜೋಡಿ ವಿದೇಶದಲ್ಲಿ ನೆಲೆಸಿದೆ.
48
ಚೈತ್ರಾ ರೈ ಹಾಗೂ ಪ್ರಸನ್ನ ಅವರದ್ದು ಪಕ್ಕಾ ಅರೇಂಜ್ ಮ್ಯಾರೇಜ್. ಮಂಗಳೂರಿನಲ್ಲಿಯೇ ಇವರಿಬ್ಬರು ಮದುವೆಯಾಗಿದ್ದರು. ಈ ಜೋಡಿಗೆ ನಿಷ್ಕಾ ಎಂಬ ಮಗಳಿದ್ದಾಳೆ.
58
ಚೈತ್ರಾ ರೈ ಅವರು ಸದ್ಯ ಯಾವುದೇ ಧಾರಾವಾಹಿಗಳಲ್ಲಿ ನಟಿಸುತ್ತಿಲ್ಲ. ಮಗಳು ನಿಷ್ಕಾ ಅವರ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೆ ಅವರು ಯಾವಾಗ ಕರ್ನಾಟಕಕ್ಕೆ ಮರಳುತ್ತಾರೆ ಎಂದು ಕಾದು ನೋಡಬೇಕಿದೆ.
68
ಚೈತ್ರಾ ಅವರ ಪತಿ ಪ್ರಸನ್ನ ಹಾಗೂ ಮಗಳು ನಿಷ್ಕಾ ಜೊತೆಗೆ. ನಿಷ್ಕಾಗೆ ಅಪ್ಪ ಎಂದರೆ ತುಂಬ ಇಷ್ಟ ಅಂತೆ. ಇನ್ನು ಪ್ರಸನ್ನ ಅವರಿಗೂ ಮಗಳೆಂದರೆ ತುಂಬ ಇಷ್ಟ.
78
ನಿಷ್ಕಾ ಶೆಟ್ಟಿ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್ ಖಾತೆಯಿದ್ದು, ಅನೇಕರು ಇವರನ್ನು ಫಾಲೋ ಮಾಡುತ್ತಿದ್ದಾರೆ. ಚೈತ್ರಾ ರೈ ಅವರು ಈ ಖಾತೆ ಹ್ಯಾಂಡಲ್ ಮಾಡುತ್ತಿದ್ದಾರೆ.
88
ನಿಷ್ಕಾ ಶೆಟ್ಟಿ ಸೂಪರ್ ಆಗಿ ಹೋಳಿ ಆಚರಣೆ ಮಾಡಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.