ಇಂದು ಅಪ್ಪು ಸಿನಿಮಾ ರೀ ರಿಲೀಸ್ ಆಗಿದೆ. ಬೆಂಗಳೂರಿನ ವೀರೇಶ್ ಥಿಯೇಟರ್‌ನಲ್ಲಿ ರಕ್ಷಿತಾ ಪ್ರೇಮ್, ಯುವ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ನಿರೂಪಕಿ ಅನುಶ್ರೀ, ಕಾರ್ತಿಕ್ ಮಹೇಶ್, ನಮ್ರತಾ ಗೌಡ, ರಕ್ಷಕ್ ಬುಲೆಟ್ ಅವರು ಸಿನಿಮಾ ನೋಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರು ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಿನಿಮಾವಿದು.
2002ರಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ ಅಪ್ಪು ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾ ರಿಲೀಸ್ ಆಗಿ ಹದಿನಾಲ್ಕು ವರ್ಷಗಳ ಬಳಿಕ ಮತ್ತೆ ಈ ಚಿತ್ರ ರೀ ರಿಲೀಸ್ ಆಗಿದೆ.
ಪುನೀತ್ ರಾಜ್‌ಕುಮಾರ್ ಅವರಿಗೆ ನಾಯಕಿಯಾಗಿ ರಕ್ಷಿತಾ ಪ್ರೇಮ್ ಕಾಣಿಸಿಕೊಂಡಿದ್ದಾರೆ. ಶ್ವೇತಾ ಅವರನ್ನು ರಕ್ಷಿತಾ ಎಂದು ಚಿತ್ರರಂಗಕ್ಕೆ ಪಾರ್ವತಮ್ಮ ರಾಜ್‌ಕುಮಾರ್ ಅವರೇ ಪರಿಚಯಿಸಿದ್ದರು.
ಅಪ್ಪು ಸಿನಿಮಾಕ್ಕೆ ಪುರಿ ಜಗನ್ನಾಥ್ ಅವರು ನಿರ್ದೇಶನ ಮಾಡಿದ್ದರು. ಪುನೀತ್ ಅವರನ್ನು ಹೀರೋ ಆಗಿ ಪರಿಚಯಿಸಿದ ಕೀರ್ತಿ ಪುರಿ ಜಗನ್ನಾಥ್ ಅವರಿಗೆ ಸಲ್ಲುವುದು.
ʼಅಪ್ಪುʼ ಸಿನಿಮಾಕ್ಕೆ ಗುರುಕಿರಣ್ ಅವರು ಸಂಗೀತ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಆರು ಹಾಡುಗಳಿವೆ. ಈ ಹಾಡುಗಳು ಹಿಟ್ ಆಗಿವೆ.
‘ಅಪ್ಪು’ ಸಿನಿಮಾದಲ್ಲಿ ಅವಿನಾಶ್, ಶ್ರೀನಿವಾಸ್ ಮೂರ್ತಿ, ಸುಮಿತ್ರಾ ಮುಂತಾದವರು ನಟಿಸಿದ್ದಾರೆ. ಈ ಚಿತ್ರ ನೂರು ದಿನಗಳ ಯಶಸ್ವಿ ಪ್ರದರ್ಶನ ಕಂಡಿತ್ತು.
ಅಪ್ಪು ಸಿನಿಮಾ ನೂರು ದಿನಗಳ ಯಶಸ್ವಿ ಪ್ರದರ್ಶನ ಕಂಡಾಗ ದೊಡ್ಡ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆ ವೇಳೆ ರಜನೀಕಾಂತ್ ಅವರೇ ಪುನೀತ್‌ರನ್ನು ಸಿಂಹದ ಮರಿ ಎಂದು ಕರೆದು ಹಾಡಿ ಹೊಗಳಿದ್ದರು.