BBK11 ದೊಡ್ಮನೆಯಲ್ಲಿ ಟ್ವಿಸ್ಟ್, ಮನೆಯ ನೂತನ ಕ್ಯಾಪ್ಟನ್‌ ಆಗಿ ಫಿನಾಲೆಗೆ ಮತ್ತಷ್ಟು ಹತ್ತಿರವಾದ ಭವ್ಯಾ ಗೌಡ

First Published | Dec 20, 2024, 6:07 PM IST

ಬಿಗ್‌ಬಾಸ್‌ ಕನ್ನಡ 11ರ 12ನೇ ವಾರದಲ್ಲಿ ಭವ್ಯಾ ಗೌಡ ಮನೆಯ ನೂತನ ಕ್ಯಾಪ್ಟನ್‌ ಆಗಿ ಆಯ್ಕೆಯಾಗಿದ್ದಾರೆ. ಚೈತ್ರಾ ಕುಂದಾಪುರ ಮೂರನೇ ಬಾರಿಗೆ ಜೈಲು ಸೇರಿದ್ದಾರೆ. ಈ ವಾರ ಎಲಿಮಿನೇಶನ್‌ ಇಲ್ಲ. ಜೊತೆಗೆ ಭವ್ಯಾ ಗೌಡ ಫಿನಾಲೆಗೆ ಹತ್ತಿರವಾಗಿದ್ದಾರೆ.

ಬಿಗ್‌ಬಾಸ್‌ ಕನ್ನಡ 11 ಈಗ 12ನೇ ವಾರದಲ್ಲಿದೆ. ಇನ್ನು 4 ವಾರದಲ್ಲಿ ಬಿಗ್‌ಬಾಸ್‌ ಫಿನಾಲೆ ನಡೆಯಲಿದೆ. ಇದಕ್ಕೂ ಮುನ್ನ ಕ್ಯಾಪ್ಟನ್‌ ಆಗಿ ಇಮ್ಯೂನಿಟಿ ಪಡೆದು ಉಳಿದುಕೊಳ್ಳಲು ಸ್ಪರ್ಧಿಗಳು ಹೆಣಗಾಡುತ್ತಿದ್ದಾರೆ. ಈ ನಡುವೆ ಮನೆಯ ನೂತನ ಕ್ಯಾಪ್ಟನ್‌ ಆಗಿ ಭವ್ಯಾ ಆಯ್ಕೆಯಾಗಿದ್ದಾರೆ.
 

ಬಿಗ್ ಬಾಸ್​ ಮನೆಯಲ್ಲಿ ದಿನದಿಂದ ದಿನಕ್ಕೆ ಆಟಗಳು ಕಷ್ಟವಾಗುತ್ತಾ ಹೋಗುತ್ತಿದೆ. ಯಾರು ಮನೆಯಿಂದ ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಕಳೆದವಾರ ಶಿಶಿರ್ ಶಾಸ್ತ್ರಿ ಮನೆಯಿಂದ ಔಟ್‌ ಆಗಿದ್ದೇ ಇದಕ್ಕೆ ಸಾಕ್ಷಿ. ಇನ್ನು ಶೋ ನಡೆಯಲಿರುವುದು ಕೆಲವೇ ದಿನಗಳು ಮಾತ್ರ. ಫಿನಾಲೆ ಸಮೀಪದಲ್ಲಿರುವ ಮನೆಯ ಸ್ಪರ್ಧಿಗಳು ಮನೆಯ ನಾಯಕತ್ವ ವಹಿಸಿ ಇನ್ನಷ್ಟು ದಿನ ಉಳಿದುಕೊಳ್ಳಲು ಹೆಣಗಾಡುತ್ತಿದ್ದಾರೆ. 

Tap to resize

ಇವೆಲ್ಲದರ ಮಧ್ಯೆ ಮುಂದಿನ ಕ್ಯಾಪ್ಟನ್ ಆಗಲು ಐಶ್ವರ್ಯಾ ಮತ್ತು ಭವ್ಯಾ ಗೌಡ ಮಧ್ಯೆ ಪೈಪೋಟಿ ನಡೆದಿದೆ. ಆದರೆ ಈ ಟಾಸ್ಕ್‌ ನಲ್ಲಿ ‘ಇದು ಅದೃಷ್ಟದ ಆಟ. ಅಂದಾಜಿನ ಮೇಲೆ ಇಡಬೇಕು’ ಎಂದು ಚೈತ್ರಾ ಕುಂದಾಪುರ ಹೇಳಿರುವುದು ಪ್ರೋಮೋದಲ್ಲಿ ಕಾಣಿಸಿದೆ.

ಮತ್ತೊಂದು ಪ್ರೋಮೋದಲ್ಲಿ ಚೈತ್ರಾ ಕುಂದಾಪುರ ಕಳಪೆಗೆ ಹೋಗಿದ್ದು, ಮೂರನೇ ಬಾರಿ ಬಿಗ್‌ಬಾಸ್‌ ಜೈಲಿಗೆ ಹೋಗಿ ಚೈತ್ರಾ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ!. ಕಳೆದ ವಾರವೂ ಅವರು ಕಳಪೆ ಪಡೆದು ಜೈಲು ಸೇರಿದ್ದರು. ಆದರೆ ಜೈಲಿಗೆ ಹೋಗುವ ಮುನ್ನ ನೀಡಲಾಗುವ ಕಳಪೆ ಎಂದು ಬರೆದಿರುವ ಜೈಲಿನ ವಸ್ತ್ರವನ್ನು ಭವ್ಯಾ ಅವರು ನೀಡುತ್ತಿದ್ದು, ಇದರಿಂದ ಟಾಸ್ಕ್ ಗೆದ್ದು ಮನೆಯ ಕ್ಯಾಪ್ಟನ್‌ ಆಗಿ ಭವ್ಯಾ ಅವರು ಆಯ್ಕೆಯಾಗಿರುವುದು ಖಚಿತವಾಗಿದೆ.

ಈ ಮೂಲಕ ಭವ್ಯಾ ಅವರು ಎರಡನೇ ಬಾರಿಗೆ ಮನೆಯ ಕ್ಯಾಪ್ಟನ್‌ ಆಗಿ ಜವಾಬ್ದಾರಿ ನಿರ್ವಹಿದಂತೆ ಆಗುತ್ತದೆ. ಮಾತ್ರವಲ್ಲ 14ನೇ ವಾರದಲ್ಲಿ ಸೇಫ್ ಆಗಿರಲಿದ್ದಾರೆ. ಹೀಗಾಗಿ ಫಿನಾಲೆ ಅತ್ಯಂತ ಸಮೀಪಕ್ಕೆ ಭವ್ಯಾ ಲಗ್ಗೆ ಇಟ್ಟಿದ್ದಾರೆ. ಆದರೆ ಭವ್ಯಾ ಅವರು ಟಾಸ್ಕ್‌ ನಲ್ಲಿ ತನ್ನ ಸಾಮರ್ಥ್ಯವನ್ನು ಎಷ್ಟು ತೋರಿಸುತ್ತಿದ್ದಾರೋ ಅವರು ಮನೆಯಲ್ಲಿ ಏನೂ ಮನೋರಂಜನೆ ಕೊಡುತ್ತಿಲ್ಲ. ಆದರೆ ಅವರು ಕಾರಣ ನೀಡುವಾಗ ಬೇರೆಯವರಿಗೆ ಮಾತ್ರ, ನೀವು ಮನೋರಂಜನೆ ನೀಡುವುದಿಲ್ಲ. ಮನೆಯಲ್ಲಿ ಎಲ್ಲರ ಒಡನಾಟ ನಡೆಸುವುದಿಲ್ಲ ಎಂದು ಕಾರಣ ನೀಡುತ್ತಿದ್ದಾರೆ. ಆದರೆ ಭವ್ಯಾ ಮಾತ್ರ ಕೇವಲ ತ್ರಿವಿಕ್ರಮ್ ಜೊತೆಗೆ ಇರುತ್ತಾರೆ. ಮನೆಯವರ ವಿರುದ್ಧ ಸಿಡುಕಿಕೊಂಡೇ ಇರುತ್ತಾರೆ. ಜೊತೆಗೆ ಸೀಸನ್‌ 10 ರ ಸಂಗೀತಾ ಆಗಲು ಹೋಗಬೇಡಿ. ಸಂಗೀತಾಗೆ ಸರಿಸಾಟಿ ಯಾರೂ ಇಲ್ಲ ಎಂಬ ಮೀಮ್ಸ್, ಟ್ರೂಲ್‌ಗಳು ಹರಿದಾಡುತ್ತಿದೆ.
 

ಇನ್ನು  ಮನೆ ಮಂದಿ  ಟಾಸ್ಕ್‌ ಗೆದ್ದು ಲಕ್ಷುರಿ ಬಜೆಟ್‌ ಪಡೆಯಲು ಅರ್ಹತೆ ಪಡೆದಿದ್ದರು. ಆದರೆ   ಲಕ್ಷುರಿ ಬಜೆಟ್‌ ಗೆ ಸಂಬಂಧಿಸಿ ಚೈತ್ರಾ, ಭವ್ಯಾ, ಗೌತಮಿ, ತ್ರಿವಿಕ್ರಮ್ ಮತ್ತು ಮಂಜು ಚರ್ಚೆ ನಡೆಸುತ್ತಿದ್ದು, ಲಕ್ಷುರಿಯನ್ನು ಕಳೆದುಕೊಂಡಿದ್ದಾರೆ. ಉಪ್ಪಿನಕಾಯಿ ಮಿಸ್‌ ಆಗಿದೆ. ಮಟನ್‌ ಕೂಡ ಸಿಕ್ಕಿಲ್ಲ. ಲೆಕ್ಕಾಚಾರ ತಪ್ಪಾಗಿ  ಲಕ್ಷುರಿ ಐಟಂ ಕಳೆದುಕೊಂಡಿರುವಂತಿದೆ.
 

ಇನ್ನು ಈ ವಾರ ಯಾರೂ ಕೂಡ ಮನೆಯಿಂದ ಹೊರಗಡೆ ಹೋಗುತ್ತಿಲ್ಲ. ಏಕೆಂದರೆ ಶುಕ್ರವಾರದವರೆಗೆ ಓಟಿಂಗ್ ಲೈನ್ ಓಪನ್ ಆಗಿಲ್ಲ. ಕಳೆದವಾರ ಶಿಶಿರ್ ಎಲಿಮಿನೇಟ್‌ ಆಗಿದ್ದರು. ಅದೇ ದಿನ ಅನಿವಾರ್ಯವಾಗಿ ಗೋಲ್ಡ್ ಸುರೇಶ್ ಹೊರಹೋಗಿದ್ದರು. ಹೀಗಾಗಿ  ಓಟಿಂಗ್‌ ಲೈನ್ ಓಪನ್‌ ಇಲ್ಲ. ಈ ವಾರ ಮನೆಯಿಂದ ಹೊರಹೋಗಲು ಕೇವಲ 4 ಮಂದಿ ನಾಮಿನೇಟ್ ಆಗಿದ್ದರು. ರಜತ್, ಮೋಕ್ಷಿತಾ, ಹನುಮಂತ ಮತ್ತು ತ್ರಿವಿಕ್ರಮ್ ಇವರೆಲ್ಲರೂ ಸೇಫ್ ಆಗಿರಲಿದ್ದಾರೆ.  ಈವರೆಗೆ ಯಮುನಾ ಶ್ರೀನಿಧಿ, ಹಂಸ, ಮಾನಸಾ, ಅನುಷಾ ರೈ, ಧರ್ಮ ಕೀರ್ತಿರಾಜ್‌, ಶಿಶಿರ್‌ ಶಾಸ್ತ್ರಿ ಎಲಿಮಿನೇಟ್ ಆಗಿದ್ದಾರೆ. ರಂಜಿತ್ ಹಾಗೂ ಜಗದೀಶ್‌ ರನ್ನು ಹೊರಕಳುಹಿಸಲಾಗಿದ್ದು, ಶೋಭಾ ಶೆಟ್ಟಿ ತಾವಾಗಿಯೇ ಹೊರ ನಡೆದಿದ್ದಾರೆ. ವೈಯಕ್ತಿಕ ಕಾರಣದಿಂದ ಅನಿವಾರ್ಯವಾಗಿ  ಗೋಲ್ಡ್ ಸುರೇಶ್‌ ಅವರು ಹೊರಬಂದಿದ್ದಾರೆ. 

Latest Videos

click me!