ಬಿಗ್ ಬಾಸ್ ತೆಲುಗು ಸೀಸನ್ 8 ಅದ್ದೂರಿಯಾಗಿ ಮುಕ್ತಾಯಗೊಂಡಿದೆ. 14 ಮಂದಿ ನೇರವಾಗಿ ಬಂದವರು ಮತ್ತು 8 ಮಂದಿ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಭಾಗವಹಿಸಿದ್ದ ಈ ಸೀಸನ್‌ನಲ್ಲಿ ಅವಿನಾಶ್, ಪ್ರೇರಣಾ, ನಬೀಲ್, ಗೌತಮ್ ಮತ್ತು ನಿಖಿಲ್ ಫೈನಲ್‌ಗೆ ತಲುಪಿದ್ದರು. ಟಿಕೆಟ್ ಟು ಫಿನಾಲೆ ಗೆದ್ದಿದ್ದರಿಂದ ಅವಿನಾಶ್ ನೇರವಾಗಿ ಫೈನಲ್‌ಗೆ ಪ್ರವೇಶ ಪಡೆದಿದ್ದರು.
ಕಳೆದ ನಾಲ್ಕು ವಾರಗಳಿಂದ ಟೈಟಲ್ ಪೈಪೋಟಿ ನಿಖಿಲ್ ಮತ್ತು ಗೌತಮ್ ನಡುವೆ ಎಂದು ಪ್ರಚಾರ ನಡೆಯುತ್ತಿತ್ತು. ಹೀಗಾಗಿ ಅವಿನಾಶ್, ಪ್ರೇರಣಾ ಮತ್ತು ನಬೀಲ್ ಹೊರಬೀಳುತ್ತಾರೆ ಎಂದು ಪ್ರೇಕ್ಷಕರು ಊಹಿಸಿದ್ದರು.
ನಾಗಾರ್ಜುನ ಸೂಟ್‌ಕೇಸ್ ಕೂಡ ಆಫರ್ ಮಾಡಿದ್ದರು. ಇಬ್ಬರಲ್ಲಿ ಒಬ್ಬರೇ ಗೆಲ್ಲುವುದರಿಂದ ಹಣ ತೆಗೆದುಕೊಂಡು ಒಬ್ಬರು ಟೈಟಲ್ ರೇಸ್‌ನಿಂದ ಹಿಂದೆ ಸರಿಯಬಹುದು ಎಂದು ಸೂಚಿಸಿದ್ದರು. ಆದರೆ, ನಿಖಿಲ್ ಮತ್ತು ಗೌತಮ್ ಇದಕ್ಕೆ ನಿರಾಕರಿಸಿದರು.
ಇದೀಗ ಕನ್ನಡಿಗ ನಿಖಿಲ್ ತೆಲುಗು ಬಿಗ್ ಬಾಸ್ ಸೀಸನ್-8 ವಿನ್ನರ್ ಟೈಟಲ್ ಗೆದ್ದಿದ್ದನ್ನು ಒಂದು ವರ್ಗ ವಿರೋಧಿಸುತ್ತಿದೆ. ಕನ್ನಡ ನಟನಿಗೆ ಬಿಗ್ ಬಾಸ್ ತೆಲುಗು ಟೈಟಲ್ ಹೇಗೆ ಕೊಡುತ್ತಾರೆ. ಇದಕ್ಕೆ ತೆಲುಗು ಮೂಲದ ಗೌತಮ್ ಮಾತ್ರ ಟೈಟಲ್‌ಗೆ ಅರ್ಹರು ಎಂದು ಕಾಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
ಬಿಗ್ ಬಾಸ್ ಟ್ರೋಫಿ ಗೆದ್ದ ನಂತರ ನಿಖಿಲ್ ಸಂದರ್ಶನಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ, ತೆಲುಗು ಎಂಬ ಭಾಷಾ ಭೇದ ತನಗೆ ಇಲ್ಲ ಎಂದು ಹೇಳಿದ್ದಾರೆ. ನನಗೆ ನಾನು ನಿಖಿಲ್ ಅಂತ ಮಾತ್ರ ಗೊತ್ತು. ಭಾಷೆ ಯಾವುದು ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ನೀನು ಬೆಳ್ಳಗಿದ್ದೀಯಾ ಎಂದು ಯಾರು ಕೇಳುವುದಿಲ್ಲ? ಪ್ರಶಸ್ತಿ ಗೆದ್ದಿದ್ದೀಯಾ ಎಂದು ಕೇಳುತ್ತಾರೆ. ನಾನು ಪ್ರಶಸ್ತಿಯನ್ನು ಗೆದ್ದಾಗ ತಾಯಿ ಮತ್ತು ಕಿರಿಯ ಸಹೋದರ ಭಾವುಕರಾದರು ಎಂದು ಹೇಳಿಕೊಂಡಿದ್ದಾರೆ.
ತಮ್ಮ ಮೇಲೆ ಟ್ರೋಲ್ ಮಾಡುತ್ತಿರುವವರು ಮತ್ತು ಅಪ ಪ್ರಚಾರ ಮಾಡುತ್ತಿರುವವರು ಯಾರು ಎಂದು ಗೊತ್ತಿದೆ ಎಂದು ನಿಖಿಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರು ಅಪಪ್ರಚಾರ ಮಾಡುತ್ತಿದ್ದಾನೋ ಇದನ್ನೆಲ್ಲಾ ನಿಲ್ಲಿಸಿದರೆ ಒಳ್ಳೆಯದು. ನನ್ನ ಮೇಲೆ ಎಷ್ಟೇ ಅಪಪ್ರಚಾರ, ಟ್ರೋಲ್ ಮಾಡಿದರೂ ಪರವಾಗಿಲ್ಲ. ಆದರೆ, ಕುಟುಂಬ ಸದಸ್ಯರನ್ನು ಮತ್ತು ಪ್ರೀತಿ ಪಾತ್ರರನ್ನು ಇದರಲ್ಲಿ ಎಳೆಯಬೇಡಿ. ನಾನು ಆಕ್ಷನ್‌ಗೆ ಇಳಿದರೆ ಚೆನ್ನಾಗಿರುವುದಿಲ್ಲ ಎಂದು ನಿಖಿಲ್ ಎಚ್ಚರಿಕೆ ನೀಡಿದ್ದಾರೆ.
ಬಿಗ್ ಬಾಸ್ ತೆಲುಗು ಸೀಸನ್ 8 ರ ಟೈಟಲ್ ವಿನ್ನರ್ ಆಗಿರುವ ನಿಖಿಲ್ ರೂ. 55 ಲಕ್ಷ ಬಹುಮಾನ ಗಳಿಸಿದ್ದಾರೆ. ಜೊತೆಗೆ ಕಾರೊಂದನ್ನೂ ಉಡುಗೊರೆಯಾಗಿ ಪಡೆದಿದ್ದಾರೆ. ಆದರೆ, ತೆರಿಗೆ ರೂಪದಲ್ಲಿ ತುಂಬಾ ಹಣ ಕಡಿತವಾಗಿದೆ. ನಿಖಿಲ್ ಗೆದ್ದ ಬಹುಮಾನದಲ್ಲಿ ಶೇ.40 ಪ್ರತಿಶತದಷ್ಟು ತೆರಿಗೆ ಕಡಿತವಾಗುತ್ತದೆ. ಇನ್ನು ನಿಖಿಲ್ ಸಂಭಾವನೆ ರೂಪದಲ್ಲಿ ರೂ. 33.75 ಲಕ್ಷ ಪಡೆದಿದ್ದಾರೆ. ಸಂಭಾವನೆಯಲ್ಲಿ ಹೆಚ್ಚು ಕಡಿತ ಆಗುವುದಿಲ್ಲ.