ಅಣ್ಣಯ್ಯದಲ್ಲಿ ಕನ್ನಡ ಭಾಷಾ ಮಹತ್ವ ಹೇಳಿದ ನಿಶಾ ರವಿಕೃಷ್ಣನ್ ಕನ್ನಡತಿಯೇ ಅಲ್ಲ, ಹಾಗಿದ್ರೆ ಎಲ್ಲಿಯವರು?

First Published | Nov 22, 2024, 8:12 PM IST

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಆಗಿ ಮಿಂಚುತ್ತಾ ಕನ್ನಡ ಭಾಷೆಯ ಮಹತ್ವ ಸಾರಿದ ನಟಿ ನಿಶಾ ರವಿಕೃಷ್ಣನ್ ಕನ್ನಡತಿಯೇ ಅಲ್ವಂತೆ, ಹಾಗಿದ್ರೆ ಎಲ್ಲಿಯವರಿವರು ಗೊತ್ತಾ? 
 

ಸರ್ವಮಂಗಳ ಮಾಂಗಲ್ಯೆ ಧಾರಾವಾಹಿಯಲ್ಲಿ ಪೋಷಕ ಪಾತ್ರದ ಮೂಲಕ ನಟನೆಗೆ ಎಂಟ್ರಿ ಕೊಟ್ಟು,  ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕಿಯಾಗುವ  ಮೂಲಕ ಕನ್ನಡಿಗರ ಮನೆಮಗಳಾದ ಹಾಗೂ ಕನ್ನಡಿಗರಿಂದ ರೌಡಿ ಬೇಬಿ ಅಂತಾನೇ ಕರೆಸಿಕೊಳ್ಳುವ ಜನಪ್ರಿಯ ಕಿರುತೆರೆ ನಟಿ ನಿಶಾ ರವಿಕೃಷ್ಣನ್ (Nisha Ravikrishnan) ಅವರು ತಮ್ಮ  ಮೊದಲ ಧಾರವಾಹಿ ಎಂದರೆ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು
 

ನಿಜ ಜೀವನದಲ್ಲಿ ತುಂಬಾನೇ ಸೈಲೆಂಟ್ ಆಗಿರುವ ಹುಡುಗಿ ತೆರೆ ಮೇಲೆ ತನ್ನ ರೌಡಿ ಬೇಬಿ ಪಾತ್ರದಿಂದ, ತಮ್ಮ ಪಟ ಪಟ ಮಾತಿನಿಂದ, ಮುದ್ದಾದ ಮುಖದಿಂದ, ಅದ್ಭುತ ನಟನೆಯಿಂದ ಕಿರುತೆರೆ (Kannada smallscreen) ಪ್ರಿಯರ ನೆಚ್ಚಿನ ನಟಿಯಾಗಿ ಜನಪ್ರಿಯತೆ ಪಡೆದಿದ್ದರು. ಇವರು ಕೇವಲ ನಟಿ ಮಾತ್ರ ಅಲ್ಲ ಗಾಯಕಿಯು ಹೌದು, ನೃತ್ಯಗಾರ್ತಿಯೂ ಹೌದು. 
 

Tap to resize

ಸದ್ಯ ಅಣ್ಣಯ್ಯ ದಾರವಾಹಿಯಲ್ಲಿ (Annayya serial) ಪಾರು ಪಾತ್ರದ ಮೂಲಕ ಮತ್ತೆ ಕನ್ನಡಿಗರನ್ನು ರಂಜಿಸುತ್ತಿರುವ ನಿಶಾ ರವಿಕೃಷ್ಣನ್ ಕುರಿತು ಇಂಟರೆಸ್ಟಿಂಗ್ ಮಾಹಿತಿ ಎಂದು ಹೊರಬಂದಿದೆ ಅದೇನ್ ಗೊತ್ತಾ ಈ ರೌಡಿ ಬೇಬಿ ಕನ್ನಡಂತೆ ಅಲ್ಲವಂತೆ. ಕನ್ನಡ ಸೀರಿಯಲ್ ಮೂಲಕ ಕನ್ನಡಿಗರ ಮನಗೆದ್ದಿರುವ ಈ ನಟಿ ನಿಜವಾಗಿಯೂ ಎಲ್ಲಿಯವರು? 
 

ನಿಶಾ ರವಿಕೃಷ್ಣನ್ ಒಂದು ಇಂಟರ್ವ್ಯೂ ಒಂದರಲ್ಲಿ ತಿಳಿಸಿದಂತೆ ಇವರು, ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಬೆಂಗಳೂರಲ್ಲೆ, ಆದ್ರೆ ಈ ಮೂಲತಃ ಮಲಯಾಳಿ ಬೆಡಗಿ. ಇವರ ಮಾತೃ ಭಾಷೆ ಮಲಯಾಳಂ (Malayalam). ಮನೆಯಲ್ಲಿ ಮಾತನಾಡೋದು ಸಹ ಮಲಯಾಳಂ. ಆದರೆ ಸದ್ಯ ಕನ್ನಡದ ಹುಡುಗಿಯಾಗಿದ್ದಾರೆ. 
 

ನಿಶಾ ರವಿಕೃಷ್ಣನ್ ಸೋಶಿಯಲ್ ಮೀಡೀಯಾ ಪೇಜ್ ಗಳನ್ನು ನೋಡಿದ್ರೆ, ಅಲ್ಲಿ ಇವರು ತಮ್ಮ ಕುಟುಂಬ ಸಮೇತರಾಗಿ ಓಣಂ ಸೆಲೆಬ್ರೇಷನ್ ಮಾಡುವ ಫೋಟೊಗಳನ್ನು ಸಹ ಕಾಣಬಹುದು. ಮಲಯಾಳಿ ಹುಡುಗಿಯಾದರೂ ಕನ್ನಡದ ಜೊತೆ ತೆಲುಗಿನಲ್ಲಿ ಫೇಮಸ್ ಇವರು. 
 

ಸದ್ಯ ನಿಶಾ ಕನ್ನಡದಲ್ಲಿ ಅಣ್ಣಯ್ಯ ಧಾರಾವಾಹಿಯಲ್ಲಿ ಹಾಗೂ ತೆಲುಗಿನಲ್ಲಿ ಅಮ್ಮಾಯಿಗಾರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಎರಡೂ ಕಡೆಗಳಿಂದಲೂ ವೀಕ್ಷಕರಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾದ ಪಾತ್ರಗಳಿವು. ಆದರೆ ಇವರಿಗೆ ತಮ್ಮ ಮಾತೃ ಭಾಷೆಯಾದ ಮಲಯಾಲಂನಲ್ಲೂ ನಟಿಸೋ ಆಸೆಯಿದೆಯಂತೆ. 
 

ಇಲ್ಲಿವರೆಗೆ ತಮಗೆ ಮಲಯಾಲಂ ಕಿರುತೆರೆಯಿಂದ ಯಾವುದೇ ಆಫರ್ ಬಂದಿಲ್ಲ, ಬಂದ್ರೆ ಖಂಡಿತಾ ಮಾಡ್ತೇನೆ. ನನ್ನ ಫೇಸ್ ಮಲಯಾಳಿ ಹುಡುಗಿ ಥರ ಕಾಣಿಸ್ತಿಲ್ಲ ಅನ್ಸತ್ತೆ ಅದಕ್ಕಾಗಿ ಅವಕಾಶಗಳು ಬಾರದೇ ಇರಬಹುದು ಅಂತಾನೂ ಹೇಳಿದ್ದಾರೆ ಈ ಬೆಡಗಿ. 

ನಿಶಾ ರವಿಕೃಷ್ಣನ್ ಇದೀಗ ‘ಅಂಶು’ (Anshu film) ಸಿನಿಮಾದ ಮೂಲಕ ಕನ್ನಡ ಸಿನಿಮಾಗೂ ಕಾಲಿಟ್ಟಿದ್ದು, ಸಿನಿಮಾ ಟ್ರೈಲರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೆಣ್ಣು ಭ್ರೂಣ ಹತ್ಯೆಯ ಕುರಿತ ಸಿನಿಮಾ ಇದಾಗಿದ್ದು, ಶೀಘ್ರದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ. ಕಿರುತೆರೆ ಆಯ್ತು ಇನ್ನು ದೊಡ್ಡ ತೆರೆ ಮೇಲೆ ನಿಶಾ ಮೋಡಿ ಮಾಡ್ತಾರ ಕಾದು ನೋಡಬೇಕು. 
 

Latest Videos

click me!