ಬಿಗ್ ಬಾಸ್ ನಿಂದ ಧನ್‌ರಾಜ್‌ ಎಲಿಮಿನೇಟ್‌ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಮಾಜಿ ಸ್ಪರ್ಧಿ ಕಿರಿಕ್‌ ಕೀರ್ತಿ!

Published : Jan 19, 2025, 11:46 PM IST

ಬಿಗ್ ಬಾಸ್ ಕನ್ನಡ 11ರಲ್ಲಿ ಡಬಲ್ ಎಲಿಮಿನೇಶನ್ ನಡೆದಿದ್ದು, ಧನ್‌ರಾಜ್ ಆಚಾರ್  ಹೊರಹೋದ ಬಗ್ಗೆ ವೀಕ್ಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕಿರಿಕ್ ಕೀರ್ತಿ ಸೇರಿದಂತೆ ಹಲವರು ಧನ್‌ರಾಜ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

PREV
15
ಬಿಗ್ ಬಾಸ್ ನಿಂದ ಧನ್‌ರಾಜ್‌ ಎಲಿಮಿನೇಟ್‌ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಮಾಜಿ ಸ್ಪರ್ಧಿ ಕಿರಿಕ್‌ ಕೀರ್ತಿ!

ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆ ವಾರಕ್ಕೆ ಕಾಲಿಟ್ಟಿದೆ. ಕಿಚ್ಚನ ಕೊನೆಯ ಪಂಚಾಯತಿಯಲ್ಲಿ ಡಬಲ್‌ ಎಲಿಮಿನೇಶನ್‌ ನಡೆದಿದೆ. ಶನಿವಾರದ ಎಪಿಸೋಡ್‌ ನಲ್ಲಿ ಗೌತಮಿ ಜಾಧವ್ ಮತ್ತು ಭಾನುವಾರದ ಎಪಿಸೋಡ್‌ ನಲ್ಲಿ ಧನ್‌ರಾಜ್‌ ಆಚಾರ್ ಎಲಿಮಿನೇಟ್‌ ಆಗಿ ಮನೆಯಿಂದ ಹೊರಬಂದಿದ್ದಾರೆ. ಈ ಮೂಲಕ ಹನುಮಂತ, ಮೋಕ್ಷಿತಾ, ತ್ರಿವಿಕ್ರಮ್‌, ರಜತ್, ಭವ್ಯಾ ಮತ್ತು ಮಂಜು 6 ಮಂದಿ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ.

25

ಧನ್‌ರಾಜ್ ಎಲಿಮಿನೇಟ್ ಆಗಿದ್ದಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗುತ್ತಿದೆ. ಈ ಮೂಲಕ ಕಲರ್ಸ್ ಕನ್ನಡ ವಾಹಿನಿ ಮತ್ತು ಬಿಗ್‌ಬಾಸ್ ಟೀಂ ಬೇಕೆಂದೇ ಧನ್‌ರಾಜ್‌ ಅವರನ್ನು ಬಲಿ ತೆಗೆದುಕೊಂಡಿದೆ ಎಂದು ಹಲವರ ಅಭಿಪ್ರಾಯವಾಗಿದೆ. ಇನ್ನು ಮಾಜಿ ಬಿಗ್‌ಬಾಸ್ ಸ್ಪರ್ಧಿ, ರನ್ನರ್‌ಅಪ್‌ ಆಗಿದ್ದ ಕಿರಿಕ್‌ ಕೀರ್ತಿ ಅವರು ಧನ್‌ರಾಜ್ ಎಲಿಮಿನೇಟ್‌ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

35

"ಈ ಸೀಸನ್‌ನ ಬಿಗ್‌ಬಾಸ್‌ನಲ್ಲಿ ನಂಗೆ ತುಂಬಾ ಇಷ್ಟವಾದ ಕಂಟೆಸ್ಟೆಂಟ್‌ಗಳಲ್ಲಿ ಒಬ್ಬ ಧನರಾಜ್ ಆಚಾರ್. ಸಹೋದರ ತನಗೆ ಸಿಕ್ಕ ಎಲ್ಲಾ ಅವಕಾಶಗಳನ್ನು ಅದ್ಭುತವಾಗಿ ಬಳಸಿಕೊಂಡ. ತನ್ನ ಶಕ್ತಿ‌ಮೀರಿ ಟಾಸ್ಕ್ ಆಡಿದ್ದ. ಪ್ರತೀ ಕ್ಷಣ ಮನರಂಜನೆ ಕೊಟ್ಟಿದ್ದಾನೆ. ನಕ್ಕಿದ್ದಾನೆ. ನಗಿಸಿದ್ದಾನೆ. ಮನಸಾರೆ ಆಟವಾಡಿದ್ದಾನೆ. ತನ್ನ ವ್ಯಕ್ತಿತ್ವಕ್ಕೆ ತಕ್ಕಂತೆ ನಡೆದುಕೊಂಡಿದ್ದಾನೆ. ಸ್ನೇಹ ಉಳಿಸಿಕೊಂಡಿದ್ದಾನೆ. ಮನಸ್ಸಿಗೆ ಅನಿಸಿದ್ದನ್ನು ಮುಖದ ಮೇಲೆ ಹೇಳಿದ್ದಾನೆ. ಕಪ್ ಗೆಲ್ಲದಿದ್ದರೂ ಗೆದ್ದು ಬೀಗಿದ್ದಾನೆ. ಕಪ್ ಗೆಲ್ಲೋ ಅಷ್ಟು ಆಡಿದ್ದಾನಾ ಗೊತ್ತಿಲ್ಲ. ಆದ್ರೆ ಫಿನಾಲೆ ವಾರದಲ್ಲಿರೋ ಎಲ್ಲಾ ಯೋಗ್ಯತೆ ಇತ್ತು ಧನ್‌ರಾಜ್‌ಗೆ. ಫಿನಾಲೆಗೆ ವಾರ ಬಾಕಿ‌ ಇದ್ದಾಗ ಮನೆಯಿಂದ ಹೊರಹೋಗೋ ಸಂಕಟ ಸಾಮಾನ್ಯವಾದುದ್ದಲ್ಲ‌. ಬೇಜಾರಗಬೇಡ ತಮ್ಮ. ನಿನ್ನ ತಾಕತ್ತು ಇನ್ನೂ ಇದೆ‌‌. ನೀನು ಸೋತಿಲ್ಲ. ಸೋಲಲ್ಲ. ಮತ್ಯಾವತ್ತೂ ಕಣ್ಣೀರು ಹಾಕಬೇಡ. ಭವಿಷ್ಯ ಉಜ್ವಲವಾಗಿರಲಿ. ಬದುಕು ಬಂಗಾರವಾಗಲಿ.  U gave ur best.  ಸಕಲವೂ ಸನ್ಮಂಗಳವಾಗಲಿ." -ಕಿರಿಕ್‌ ಕೀರ್ತಿ
 

45

ಕಳೆದ ವಾರದ ಮಿಡ್‌ವೀಕ್‌ ಸೇಪ್‌ ಟಾಸ್ಕ್‌ ನಲ್ಲಿ ಧನ್‌ರಾಜ್ ಅವರಿಂದ ತಪ್ಪಾಗಿದೆ ಎಂದು ಬಿಗ್‌ಬಾಸ್‌ ಆ ವಿಚಾರವನ್ನು ಹೈಲೆಟ್ ಮಾಡಿ ತೋರಿಸಿತ್ತು. ಇದು ಹಲವು ವೀಕ್ಷಕರ ಕಣ್ಣಿಗೆ ಗುರಿಯಾಗಿತ್ತು. ತನಗೆ ಬೇಕಾದವರಿಗೆ ಬಿಗ್‌ಬಾಸ್‌ ತಂಡ ಮತ್ತು ಕಲರ್ಸ್ ಕನ್ನಡ ಮಣೆ ಹಾಕುತ್ತಿದೆ ಎಂದು ಅಭಿಪ್ರಾಯ ವ್ಯಕ್ತವಾಗಿತ್ತು. ಧನ್‌ರಾಜ್ ಅವರು ಸೇಪ್‌ ಆದರೆಂದೇ ಮಿಡ್‌ ವೀಕ್‌ ಕ್ಯಾನ್ಸಲ್‌ ಮಾಡಲಾಗಿದೆ. ಬಿಗ್‌ಬಾಸ್‌ ತನಗೆ ಬೇಕಾದವರನ್ನು ಗೆಲ್ಲಿಸಲು ಈ ರೀತಿ ಮಾಡಿದೆ ಎಂದೇ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗಿತ್ತು.

55

ಇದೀಗ ಧನ್‌ರಾಜ್‌ ಎಲಿಮಿನೇಟ್‌ ಆಗಿ ಬಂದ ಬಳಿಕವೂ ಧನರಾಜ್ ಒಬ್ಬ ಒಳ್ಳೆಯ ವ್ಯಕ್ತಿ ಅವರು ಹೊರಗೆ ಬಂದಿರುವುದು ತುಂಬಾ ಬೇಜಾರು.  ಫಿನಾಲೆವರೆಗೂ ಇರಬೇಕಿತ್ತು ಎಂಬುದು ಎಲ್ಲರ ಅಭಿಪ್ರಾಯ. 

ಅತ್ಯಂತ ಅಸಹ್ಯ ಎಪಿಸೋಡ್ ಇದು. ಸುದೀಪ್ ಗಾಗಿ ನೋಡುತ್ತಿದ್ದೆವು. ಈ ಸೀಸನ್ ಸಾಕು. ನಮ್ಮನೆಯಲ್ಲಿ ಇಂದಿನಿಂದ ಬಿಗ್ ಬಾಸ್ ನೋಡುವದು ಬಂದ್. ಈ ಸೀಸನ್ ಟಾಸ್ಕ್ ಗಳು. ಒಂದಷ್ಟು ನಿರ್ಣಯಗಳು  ಕೆಟ್ಟದಾಗಿದ್ದವು. ಅತ್ಯಂತ ಕೆಟ್ಟದಾದ ಸ್ಕ್ರಿಪ್ಟ್ ಇದಾಗಿತ್ತು ಎಂದು ಪ್ರಕಾಶ್ ಹಗ್ಡೆ ಎಂಬುವವರು ಕಲರ್ಸ್ ಕನ್ನಡ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories