ಬಿಗ್ ಬಾಸ್ ಕನ್ನಡ vs ಹಿಂದಿ ಪ್ರಶಸ್ತಿ ಮೊತ್ತ: ಕನ್ನಡವೇ ಬೆಸ್ಟ್ ಏಕೆ ಗೊತ್ತಾ?

Published : Jan 19, 2025, 08:01 PM IST

ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಭಾಷಾ ಅವತರಣಿಕೆಯ ಬಿಗ್ ಬಾಸ್ ಸ್ಪರ್ಧೆ ವಿಜೇತರ ಸಂಭಾವನೆಗಿಂತಲೂ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ನಡೆಸಿಕೊಡುವ ಕನ್ನಡ ಬಿಗ್ ಬಾಸ್ ವಿಜೇತರ ಸಂಭಾವನೆಯೇ ಭಾರೀ ಬೆಸ್ಟ್ ಎಂಬ ಲೆಕ್ಕಾಚಾರ ಶುರುವಾಗಿದೆ.

PREV
17
ಬಿಗ್ ಬಾಸ್ ಕನ್ನಡ vs ಹಿಂದಿ ಪ್ರಶಸ್ತಿ ಮೊತ್ತ: ಕನ್ನಡವೇ ಬೆಸ್ಟ್ ಏಕೆ ಗೊತ್ತಾ?

ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಭಾಷಾ ಅವತರಣಿಕೆಯ ಬಿಗ್ ಬಾಸ್ ಸ್ಪರ್ಧೆ ವಿಜೇತರ ಸಂಭಾವನೆಗಿಂತಲೂ, ಕಿಚ್ಚ ಸುದೀಪ ನಡೆಸಿಕೊಡುವ ಕನ್ನಡ ಬಿಗ್ ಬಾಸ್ ವಿಜೇತರ ಸಂಭಾವನೆಯೇ ಭಾರೀ ಬೆಸ್ಟ್ ಎಂಬ ಲೆಕ್ಕಾಚಾರ ಶುರುವಾಗಿದೆ. ಕಾರಣ ಹಿಂದಿ ಬಿಗ್ ಬಾಸ್‌ನಲ್ಲಿ ಪ್ರಶಸ್ತಿ ಮೊತ್ತದ ಮೌಲ್ಯದಲ್ಲಿ ಭಾರೀ ಏರುಪೇರು ಸಂಭವಿಸಿದೆ.

27

ಇದೀಗ ಕನ್ನಡ ಬಿಗ್ ಬಾಸ್‌ಗಿಂತ ಒಂದು ವಾರ ಮೊದಲೇ ಮುಕ್ತಾಯಗೊಳ್ಳುವ ಹಿಂದಿ ಬಿಗ್ ಬಾಸ್ ಫಿನಾಲೆ ಇಂದು ನಡೆಯಲಿದೆ. ಆರಂಭದಲ್ಲಿ 1 ಕೋಟಿ ರೂ. ಹೊಂದಿದ್ದ ಹಿಂದಿ ಬಿಗ್ ಬಾಸ್ ವಿಜೇತರ ಪ್ರಶಸ್ತಿ ಮೊತ್ತವು ಭಾರೀ ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗಿದೆ. ಆದರೆ, ಕನ್ನಡ ಬಿಗ್ ಬಾಸ್ ಶುರುವಾದಾಗಿನಿಂದ 11 ಸೀಸನ್‌ಗಳನ್ನು ಕಳೆದರೂ ಪ್ರಶಸ್ತಿ ಮೊತ್ತದಲ್ಲಿ ಯಾವುದೇ ಏರಿಳಿಕೆ ಆಗಿಲ್ಲ.

37

ಹಿಂದಿ ಬಿಗ್‌ ಬಾಸ್‌ನಲ್ಲಿ ಎಷ್ಟಿದೆ ಪ್ರಶಸ್ತಿ ಮೌಲ್ಯ:
ಬಿಗ್ ಬಾಸ್ ಹಿಂದಿ ಸೀಸನ್ 18ರ ಫೈನಲ್ ಇಂದು (ಜ.19) ರಾತ್ರಿ ಪ್ರಸಾರವಾಗುತ್ತದೆ. ವಿಜೇತರು ಒಂದು ಟ್ರೋಫಿ ಮತ್ತು ನಗದು ಬಹುಮಾನವನ್ನು ಪಡೆಯುತ್ತಾರೆ. ಆದರೆ, ದೇಶದಲ್ಲಿ ಅತ್ಯಂತ ದೊಡ್ಡ ರಿಯಾಲಿಟಿ ಶೋ ಆಗಿರುವ ಹಿಂದಿ ಬಿಗ್‌ ಬಾಸ್ ವಿಜೇತರಿಗೆ ಎಷ್ಟು ಪ್ರಶಸ್ತಿ ಮೊತ್ತ ಸಿಗಲಿದೆ ಎಂಬುದು ಇಲ್ಲಿದೆ ನೋಡಿ.. 

ಬಿಗ್ ಬಾಸ್ ಹಿಂದಿ ಅವತರಣಿಕೆಯ ಸೀಸನ್‌ವಾರು ವಿಜೇತರ ಬಹುಮಾನವು ಬದಲಾಗುತ್ತಲೇ ಬಂದಿದೆ. ಕೆಲವು ಅವಧಿಯಲ್ಲಿ ಹೆಚ್ಚಾದರೆ, ಇನ್ನು ಕೆಲವು ಅವಧಿಯಲ್ಲಿ ಬೇಡಿಕೆ ಕಳೆದುಕೊಂಡು ತೀರಾ ತಳಮಟ್ಟಕ್ಕೆ ಕುಸಿತವನ್ನು ಕಂಡಿದೆ. ಅದರ ಮೌಲ್ಯ ಈಗ ಇತರೆ ಭಾಷೆಗಳ ಬಿಗ್ ಬಾಸ್ ಸ್ಪರ್ಧಿಗಳ ವಿಜೇತರಿಗೆ ಕೊಡುವಷ್ಟು ಸರಿದೂಗಿಸುವ ಮಟ್ಟಕ್ಕೆ ಬಂದಿದೆ.

47

ಹಿಂದಿ ಬಿಗ್ ಬಾಸ್ ಸೀಸನ್ 1ರಿಂದ ಸೀಸನ್ 5ರವರೆಗೆ ಎಲ್ಲ ವಿಜೇತರಿಗೆ ತಲಾ 1 ಕೋಟಿ ರೂ. ಬಹುಮಾನವನ್ನು ನೀಡಲಾಗಿದೆ. ಇದು ಆಗ ದೇಶದ ಅತ್ಯಂತ ಹೆಚ್ಚು ವೀಕ್ಷಣೆ ಪಡೆದ ಹಾಗೂ ಅತಿದೊಡ್ಡ ರಿಯಾಲಿಟಿ ಶೋ ಆಗಿತ್ತು. ನಂತರ ಮೊತ್ತವನ್ನು ಕಡಿಮೆ ಮಾಡಲಾಯಿತು. ನಂತರ ಸೀಸನ್ 6ರಿಂದ ಬಹುಮಾನದ ಮೊತ್ತವನ್ನು ಶೇ.50 ಕಡಿತಗೊಳಿಸಿ ಕೇವಲ 50 ಲಕ್ಷ ರೂಪಾಯಿಗೆ ಇಳಿಕೆ ಮಾಡಲಾಯಿತು. ಇದಕ್ಕೆ ವಿರೋಧ ಮಾಡಲಾದರೂ, ಟಿವಿ ನಿರೂಪಕರು ಮಾತ್ರ ಬೆಲೆ ಹೆಚ್ಚಳ ಮಾಡಲಿಲ್ಲ. ಸೀಸನ್ 6, 7 ಮತ್ತು 8ನೇ ಋತುಗಳಲ್ಲಿ ವಿಜೇತರಿಗೆ ಕೇವಲ 50 ಲಕ್ಷ ರೂ. ಬಹುಮಾನ ಮೊತ್ತ ನೀಡಲಾಯಿತು.

57

ಇದಾದ ನಂತರ 9ನೇ ಸೀಸನ್‌ಗೆ ಬಹುಮಾನದ ಮೊತ್ತವನ್ನು ಮತ್ತಷ್ಟು ಕಡಿಮೆ ಮಾಡಿ ಕೇವಲ 35 ಲಕ್ಷ ರೂ.ಗೆ ಸೀಮಿತ ಮಾಡಲಾಯಿತು. ಇನ್ನು ಸ್ಪರ್ಧಿಗಳು ತೀವ್ರ ಗಲಾಟೆ ಮಾಡಿದ್ದರಿಂದ ಪ್ರಶಸ್ತಿ ಮೊತ್ತವನ್ನು ಪುನಃ 40 ಲಕ್ಷ ರೂ.ಗೆ ಹಿಗ್ಗಿಸಲಾಯಿತು. ಇದಾದ ನಂತರ 11ನೇ ಸೀಸನ್ ವಿಜೇತರಿಗೆ 44 ಲಕ್ಷ ರೂ. ನೀಡಲಾಯಿತು.

67

ಭಾರತೀಯ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿದ್ದ ಹಿಂದಿ ಬಿಗ್ ಬಾಸ್ ಶೋನ ವಿಜೇತರಿಗೆ ಅತಿ ಕಡಿಮೆ ಮೌಲ್ಯದ ಮೊತ್ತವನ್ನು ನೀಡಲಾಗಿದ್ದು 12ನೇ ಸೀಸನ್‌ನಲ್ಲಿ. 12ನೇ ಸೀಸನ್ ವಿಜೇತರಿಗೆ ಕೇವಲ 30 ಲಕ್ಷ ರೂ. ಬಹುಮಾನ ನೀಡಲಾಗಿದೆ. ಇದಕ್ಕೆ ಭಾರೀ ವಿರೋಧ ವ್ಯಕ್ತವಾದ ನಂತರ 13ನೇ ಸೀಸನ್‌ಗೆ 40 ಲಕ್ಷ ರೂ.ಗೆ ಹೆಚ್ಚಿಸಲಾಯಿತು. ಇದನ್ನೇ 15ನೇ ಸೀಸನ್‌ಗೂ ಮುಂದುವರಸಲಾಯುತು. ಆದರೆ, ಪುನಃ 16ನೇ ಸೀಸನ್‌ಗೆ ವಿಜೇತರ ಪ್ರಶಸ್ತಿ ಮೊತ್ತವನ್ನು ಪುನಃ 31.8 ಲಕ್ಷ ರೂ.ಗೆ ತಗ್ಗಿಸಲಾಯಿತು.

77

ಇನ್ನು ಕಳೆದ 17ನೇ ಹಿಂದಿ ಭಾಷೆಯ ಬಿಗ್ ಬಾಸ್ ಸೀಸನ್‌ ವಿಜೇತರಿಗೆ ದಕ್ಷಿಣದ ಇತರೆ ಭಾಷೆಗಳ ವಿಜೇತರಿಗೆ ನೀಡುವಂತೆ 50 ಲಕ್ಷ ರೂ. ಬಹುಮಾನ ನೀಡಲಾಗಿದೆ. ಇದೀಗ 18ನೇ ಸೀಸನ್ ಹಿಂದಿ ಬಿಗ್ ಬಾಸ್ ಫಿನಾಲೆ ಇಂದು ನಡೆಯುತ್ತಿದ್ದು, ವಿಜೇತರಿಗೆ 50 ಲಕ್ಷ ರೂ. ಲಕ್ಷ ಬಹುಮಾನ ಮೊತ್ತ ನೀಡಲಾಗುತ್ತದೆ ಎಂಬುದು ತಿಳಿದುಬಂದಿದೆ. ಹೀಗಾಗಿ, ಹಿಂದಿ ಬಿಗ್ ಬಾಸ್‌ಗೆ ಹೋಲಿಕೆ ಮಾಡಿದರೆ ಕನ್ನಡದ ಬಿಗ್ ಬಾಸ್ ವಿಜೇತರ ಪ್ರಶಸ್ತಿ ಮೊತ್ತವೇ ಭಾರೀ ಅನುಕೂಲಕರವಾಗಿದೆ ಎಂದು ಹೇಳಬಹುದು. ಆದರೆ, 10 ವರ್ಷದ ಹಿಂದಿನದ್ದಕ್ಕೆ ಹೋಲಿಸಿದರೆ ಈಗಿನ 50 ಲಕ್ಷ ರೂ. ಭಾರೀ ಕಡಿಮೆ ಎಂದೇ ಹೇಳಬಹುದು.

click me!

Recommended Stories