bigg boss kannada 11: ಚೈತ್ರಾ ಕುಂದಾಪುರ ಸೀಕ್ರೆಟ್ ರೂಂ, ಇದು ಮಿಡ್‌ ವೀಕ್‌ ಎಲಿಮಿನೇಶನ್ ಸೂಚನೆಯಾ?

First Published | Dec 9, 2024, 12:51 AM IST

ಬಿಗ್‌ಬಾಸ್‌ 11ರ 13ನೇ ವಾರದಲ್ಲಿ ನಾಮಿನೇಷನ್‌ನಿಂದ ಯಾರೂ ಹೊರಬಿದ್ದಿಲ್ಲ. ಆದರೆ ಚೈತ್ರಾ ಅವರನ್ನು ಸೀಕ್ರೆಟ್ ರೂಮ್‌ಗೆ ಕಳುಹಿಸಲಾಗಿದೆ. ಮನೆಯ ಸದಸ್ಯರು ತಮ್ಮ ಬಗ್ಗೆ ಮಾತನಾಡುವುದನ್ನು ಕೇಳಿ ಚೈತ್ರಾ ಶಾಕ್ ಆಗಿದ್ದಾರೆ.  ಆದರೆ ಇದು ಮಿಡ್‌ ವೀಕ್‌ ಎಲಿಮಿನೇಶನ್‌ಗೆ ದಾರಿ ಅನ್ನಿಸುತ್ತದೆ,

ಕನ್ನಡ ಬಿಗ್‌ಬಾಸ್‌ 11ನೇ ಸೀಸನ್‌ ನ  13 ನೇ ವಾರ ಆರಂಭವಾಗಿವೆ ಈ ವಾರ ದೊಡ್ಮನೆ ತೊರೆಯಲು ಭವ್ಯಾ, ಮೋಕ್ಷಿತಾ, ಚೈತ್ರಾ, ಗೋಲ್ಡ್ ಸುರೇಶ್, ಐಶ್ವರ್ಯಾ, ರಜತ್, ಮಂಜು ಹಾಗೂ ಗೌತಮಿ ನಾಮಿನೇಟ್ ಆಗಿದ್ದರು. ಆದರೆ ಈ ವಾರ ವೋಟಿಂಗ್‌ ಲೈನ್ಸ್‌ ಓಪನ್‌ ಇಲ್ಲದ ಕಾರಣ ಎಲಿಮಿನೇಷನ್‌ ಇಲ್ಲ. ಎಲ್ಲರೂ ಸೇವ್ ಆಗಿದ್ದಾರೆ. ಆದರೆ ಇದು ಮಿಡ್‌ ವೀಕ್‌ ಎಲಿಮಿನೇಶನ್‌ಗೆ ದಾರಿ ಅನ್ನಿಸುತ್ತದೆ,

ನಾಮಿನೇಷನ್ ಆದವರ ಪೈಕಿ ಈ ವಾರ ಚೈತ್ರಾ ಕುಂದಾಪುರ ಮತ್ತು ಐಶ್ವರ್ಯಾ ಸಿಂಧೋಗಿ ಅವರು ಡೇಂಜರ್​ ಜೋನ್ ತಲುಪಿದ್ದರು. ಆದರೆ ಕೊನೇ ಕ್ಷಣದಲ್ಲಿ ಒಂದು ಟ್ವಿಸ್ಟ್​ ನೀಡಲಾಯಿತು. 
 

Tap to resize

BBK11

ಭಾನುವಾರದ ಎಪಿಸೋಡ್​ನಲ್ಲಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ಕಿಚ್ಚ ನಿರೂಪಣೆ ಆರಂಭಿಸುವ ಮುನ್ನವೇ ಒಂದು ಸರ್ಪ್ರೈಸ್​ ಕಾದಿತ್ತು. ಕಿಚ್ಚ ಸುದೀಪ್‌ ಅಭಿನಯದ   ‘ಮ್ಯಾಕ್ಸ್’ ಸಿನಿಮಾದ ಟೀಸರ್​ ಪ್ರಸಾರ ಮಾಡಲಾಯಿತು. ಅದನ್ನು ನೋಡಿ ಉಗ್ರಂ ಮಂಜು ಅವರು ಹೆಚ್ಚು ಸಂಭ್ರಮಿಸಿದರು. ಯಾಕೆಂದರೆ ಮಂಜು ಈ ಚಿತ್ರದಲ್ಲಿ ಪೊಲೀಸ್‌ ಪಾತ್ರದಲ್ಲಿ ಮಿಂಚು್ತ್ತಿದ್ದಾರೆ.
 

ಇದೀಗ ಚೈತ್ರಾ ಅವರನ್ನು ಸೀಕ್ರೆಟ್‌ ರೂಮ್‌ಗೆ ಇರಿಸಿದ್ದಾರೆ ಬಿಗ್‌ ಬಾಸ್‌. ಮೊದಲಿಗೆ ಐಶ್ವರ್ಯಾ ಅವರು ಸೇಫ್‌ ಆದರು. ಐಶ್ವರ್ಯಾ ಸೇಫ್‌ ಆದ ಬಳಿಕ, ಇದೀಗ ಮನೆಯಲ್ಲಿ ಎಲ್ಲರೂ ಚೈತ್ರಾ ಔಟ್‌ ಎಂದು ಭಾವಿಸಿದ್ದಾರೆ. ಆದರೆ ಚೈತ್ರಾ ಅವರು ಮನೆಯಲ್ಲಿ ತಮ್ಮ ಬಗ್ಗೆ ಸದಸ್ಯರು ಹಿಂದೆ ಮಾತನಾಡುತ್ತಿರುವ ಬಗ್ಗೆ ಸೀಕ್ರೆಟ್‌ ರೂಮ್‌ನಲ್ಲಿ ಕೇಳಿ ಶಾಕ್‌ ಆಗಿದ್ದಾರೆ.

ರಜತ್ ಕೂಡ ಚೈತ್ರಾ ಬಗ್ಗೆ ಮಾತನಾಡಿದ್ದು ಹೀಗೆ. ಜನಕ್ಕೆ ಚೈತ್ರಾ ಅವರು ಸಖತ್‌ ಇರಿಟೇಟ್‌ ಮಾಡುತ್ತಾರೆ ಎಂದು ಅಂದುಕೊಂಡಿರ ಬಹುದು ಎನ್ನುತ್ತಾರೆ. ಹೀಗೆ ಎಲ್ಲರೂ ಅವರ ಬಗ್ಗೆ ಗೇಲಿ ಮಾಡಿರುವ ಕ್ಲಿಪ್ಸ್‌ ಶೇರ್‌ ಮಾಡಿಕೊಂಡಿದ್ದಾರೆ.
 


ವಿಲನ್ ಪಾತ್ರಗಳ ಮೂಲಕ ಹೆಚ್ಚು ಗುರುತಿಸಿಕೊಂಡಿರುವ ಉಗ್ರಂ ಮಂಜು ‘ಮ್ಯಾಕ್ಸ್’ ಸಿನಿಮಾದಲ್ಲಿ ಕೂಡ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ. ಬಿಬಿಕೆ ಮನೆಯಲ್ಲಿ ತೋರಿಸಲಾದ  ‘ಮ್ಯಾಕ್ಸ್’ ಟೀಸರ್​ ನೋಡಿ ಎಲ್ಲರೂ ಖುಷಿಪಟ್ಟರು. ‘ ಈ ಸಿನಿಮಾ ಡಿಸೆಂಬರ್​ 25ರಂದು ರಿಲೀಸ್​ ಆಗಲಿದೆ. 

‘ಮ್ಯಾಕ್ಸ್’ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ನಿರ್ದೇಶನ ಇದೆ. ಕಾಲಿವುಡ್​ನ ಕಲೈ ಪುಲಿ ಎಸ್. ಧಾನು ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.  ಬಹುತೇಕ ದೃಶ್ಯಗಳ ಶೂಟಿಂಗ್ ತಮಿಳುನಾಡಿನಲ್ಲೇ ನಡೆದಿದೆ. ಒಂದು ರಾತ್ರಿಯಲ್ಲಿ ನಡೆಯುವ ಕಥೆ  ಈ ಚಿತ್ರದ ಸಾರಾಂಶ ಹೇಳಲಾಗುತ್ತಿದೆ.  

Latest Videos

click me!