ವಧುವಿನಂತೆ ಸಿಂಗಾರಗೊಂಡ ಕನ್ನಡತಿ ರಂಜನಿ ರಾಘವನ್… ಸದ್ದಿಲ್ಲದೇ ನಟಿಯ ಮದ್ವೆ ಆಯ್ತಾ?

First Published | Dec 8, 2024, 4:18 PM IST

ಕನ್ನಡತಿ ಖ್ಯಾತಿಯ ರಂಜನಿ ರಾಘವನ್ ವಧುವಿನಂತೆ ಸಿಂಗಾರಗೊಂದಿದ್ದು, ಅಭಿಮಾನಿಗಳು ರಂಜನಿ ಸದ್ದಿಲ್ಲದೆ ಮದ್ವೆ ಆಗೋದ್ರ ಅಂತ ಕೇಳ್ತಿದ್ದಾರೆ. 
 

ಕನ್ನಡತಿ (Kannadati Serial) ಸೀರಿಯಲ್ ಖ್ಯಾತಿಯ ರಂಜನಿ ರಾಘವನ್ ಇತ್ತೀಚೆಗಷ್ಟೇ ತಮ್ಮ ಬಾಳ ಸಂಗಾತಿಯಾಗುವವರ ಬಗ್ಗೆ ಹೇಳುವ ಮೂಲಕ ಭಾರಿ ಸುದ್ದಿಯಾಗಿದ್ದರು. ಇದೀಗ ಅವರ ಹೊಸದೊಂದು ಫೋಟೊ ವೈರಲ್ ಆಗುತ್ತಿದ್ದು, ನಟಿ ಸದ್ದಿಲ್ಲದೇ ಮದ್ವೆ ಆಗೋದ್ರಾ ಎನ್ನುವ ಸಂಶಯ ಮೂಡಿದೆ. 
 

ಕೆಲ ತಿಂಗಳುಗಳ ಹಿಂದೆ ರಂಜನಿ ರಾಘವನ್ (Ranjani Raghavan) ಸಂದರ್ಶನವೊಂದರಲ್ಲಿ ಮದುವೆಯಾಗುವವರ ಬಗ್ಗೆ ಮಾತನಾಡುತ್ತಾ, ಬೆಸ್ಟ್ ಫ್ರೆಂಡ್ ಅಂತ ಇರುವವರೇ ಲೈಫ್ ಪಾರ್ಟ್ನರ್ ಆದರೆ ಚೆನ್ನಾಗಿರುತ್ತೆ, ಇದರಿಂದ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳೋದಕ್ಕೆ ಸಾಧ್ಯ ಆಗುತ್ತೆ, ನಾನು ಮದುವೆಯಾಗೋದಾದ್ರೆ ಅದೇ ರೀತಿಯಾಗಿ ಆಗೋದು ಎಂದು ಹೇಳುವ ಮೂಲಕ ಸುದ್ದಿಯಾಗಿದ್ದರು. 

Tap to resize

ಆ ಇಂಟರ್ವ್ಯೂ ವೈರಲ್ ಆದ ಸ್ವಲ್ಪ ದಿನದಲ್ಲೇ ನಟಿ ತಮ್ಮ ಗೆಳೆಯ ಹಾಗೂ ಭಾವಿ ಪತಿಯಾಗುವ ಹುಡುಗ ಸಾಗರ್ ಭಾರದ್ವಾಜ್ ಜೊತೆಗಿನ ಫೋಟೊ ಶೇರ್ ಮಾಡಿ, Objects in the mirror are closer than they appear ಎನ್ನುತ್ತಾ, ನನ್ ಹುಡುಗ, ಲೈಫ್ ಪಾರ್ಟ್ನರ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. 
 

ಇದೆಲ್ಲಾ ಆಗಿ ಒಂದೆರಡು ತಿಂಗಳುಗಳು ಕಳೆದಿವೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ರಂಜನಿಯವರ ಮುದ್ದಾದ ಫೋಟೊ ವೈರಲ್ ಆಗುತ್ತಿದೆ. ಫೋಟೊದಲ್ಲಿ ರಂಜನಿ ವಧುವಿನಂತೆ ಮಿಂಚುತ್ತಿದ್ದಾರೆ. ಇದನ್ನ ನೋಡಿ ಜನ ಕನ್ ಫ್ಯೂಸ್ ಆಗಿದ್ದಾರೆ. ನಟಿ ಸದ್ದಿಲ್ಲದೇ ಮದ್ವೆಯಾಗಿದ್ದಾರ ಎಂದು ಕೇಳುತ್ತಿದ್ದಾರೆ. 
 

ರಂಜನಿ ಗೋಲ್ಡನ್ ಬಣ್ಣದ ಬ್ಲೌಸ್ ಹಾಗೂ ಬಾರ್ಡರ್ ಇರುವ ಕ್ರೀಂ ಬಣ್ಣದ ರೇಷ್ಮೆ ಸೀರೆ ಧರಿಸಿದ್ದಾರೆ, ಇದರ ಜೊತೆಗೆ ಮ್ಯಾಚಿಂಗ್ ಜ್ಯುವೆಲ್ಲರಿ, ಇಯರಿಂಗ್ಸ್ ಮತ್ತು ಮುಂದಾಲೆ ಧರಿಸಿದ್ದು, ಕೈ ತುಂಬಾ ಬಳೆ ಧರಿಸಿ, ಬನ್ ಹೇರ್ ಸ್ಟೈಲ್ ಮಾಡಿ, ಮುಡಿಗೆ ಮಲ್ಲಿಗೆ ಮುಡಿದಿದ್ದಾರೆ. ಈ ಲುಕ್ ನಲ್ಲಿ ನಟಿ ತುಂಬಾನೆ ಸುಂದರವಾಗಿ ಕಾಣಿಸ್ತಿದ್ದಾರೆ. 
 

ಖಂಡಿತವಾಗಿಯೂ ಇದು ಮದುವೆಯ ಫೋಟೊ ಹೌದು, ಆದರೆ ರಂಜನಿ ರಾಘವನ್ ಮದುವೆ ಖಂಡಿತಾ ಅಲ್ಲ. ಇದು ಅವರ ಸಹೋದರಿಯಾದ ಸೌಧಾಮಿನಿ ರಾಘವನ್ (Soudhamini Raghavan) ಅವರ ಮದುವೆಯ ಫೋಟೊ ಆಗಿದೆ. ಸೌಧಾಮಿನಿ ವಿವಾಹ ಇತ್ತೀಚೆಗೆ ನಡೆದಿದ್ದು, ಸಹೋದರಿಯ ಮದುವೆ ಸಮಾರಂಭದಲ್ಲಿ ರಂಜನಿ ಫುಲ್ ಮಿಂಚುತ್ತಿದ್ದಾರೆ. 
 

ರಂಜನಿ ರಾಘವನ್ ಅವರಿಗೆ ಇಬ್ಬರು ಸಹೋದರಿಯರು. ಆದರೆ ಮನರಂಜನಾ ಜಗತ್ತಿನಲ್ಲಿ ಗುರುತಿಸಿಕೊಂಡವರು ರಂಜನಿ ಮಾತ್ರ. ಒಬ್ಬರು ಸೌಧಾಮಿನಿ, ಅವರ ಮದುವೆ ಸಮಾರಂಭ ನಡೆದಿದ್ದು, ಇನ್ನೊಬ್ಬ ಸಹೋದರಿ ವೈಷ್ಣವಿ ರಾಘವನ್ (Vaishnavi Raghavan), ಇವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. 
 

Latest Videos

click me!