ಬಿಗ್‌ಬಾಸ್ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವೇಟ್ ಆಗಿರುತ್ತಾರೆ. ಇಂದು ಇನ್‌ಸ್ಟಾಗ್ರಾಂನಲ್ಲಿ ಕೆಲ ಫೋಟೋಗಳನ್ನು ನಿವೇದಿತಾ ಶೇರ್ ಮಾಡಿಕೊಂಡಿದ್ದಾರೆ.
ಗೆಳತಿ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ನಿವೇದಿತಾ ಹಂಚಿಕೊಂಡಿದ್ದಾರೆ. ಕನ್ನಡಿ ಮುಂದೆ ನಿಂತು ತಮ್ಮನ್ನೇ ಮರೆತ ಹಾಗೆ ರೀತಿಯಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದರ ಜೊತೆ ಸೊಂಟದ ಮೇಲೆ ಮೂರು ಎಳೆಯುಳ್ಳ ಸರ ಇರೋದನ್ನು ಝೂಮ್ ಮಾಡಿದ್ದಾರೆ.
ನಿವೇದಿತಾ ಗೌಡ ಅವರ ಫೋಟೋ ಅಪ್ಲೋಡ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಮಾಡಲು ಆರಂಭಿಸಿದ್ದಾರೆ. ಫುಲ್ ಸ್ಲೀವ್ ಇರೋ ಬ್ಲ್ಯಾಕ್ ಟೈಟ್ ಗೌನ್ ಧರಿಸಿ, ಓಪನ್ ಹೇರ್ ಬಿಟ್ಕೊಂಡ ನಿವೇದಿತಾ ಗೌಡ ಅತ್ಯಾಕರ್ಷಕವಾಗಿ ಕಾಣುತ್ತಿದ್ದಾರೆ.
ನಿಮ್ಮ ಡ್ರೆಸ್‌ನಲ್ಲಿರೋ ಆ ಚೈನ್ ಮಾಡಿದೆ ಎಂದು ಕೆಲ ಪಡ್ಡೆಗಳು ಕಮೆಂಟ್ ಮಾಡಿದ್ರೆ, ಒಂದಿಷ್ಟು ಮಂದಿ ಮತ್ತೆ ಟಾಯ್ಲೆಟ್‌ನಲ್ಲಿಯೇ ಫೋಟೋ ಕ್ಲಿಕ್ ಮಾಡಿಕೊಂಡ್ರಾ ಎಂದಿದ್ದಾರೆ. ಹಾಗೆ ಯಾಕೆ ಈ ಶೋಕಿ ಅಂತಾನೂ ಕಮೆಂಟ್ ಮಾಡಿದ್ದಾರೆ. ತುಂಬಾ ಜನರು ರೆಡ್ ಹಾರ್ಟ್ ಮತ್ತು ಫೈರ್ ಎಮೋಜಿ ಹಾಕಿ ಕಮೆಂಟ್ ಮಾಡಿದ್ದಾರೆ.
ಬಿಗ್‌ಬಾಸ್ ಶೋನಿಂದ ಹೊರ ಬಂದ ಬಳಿಕ ನಿವೇದಿತಾ ಗೌಡ, ಕಲರ್ಸ್ ಕನ್ನಡ ವಾಹಿನಿ ಗಿಚ್ ಗಿಲಿಗಿಲಿ, ರಾಜಾರಾಣಿ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಇತ್ತೀಚೆಗೆ ತೆಲುಗು ಸಿನಿಮಾದತ್ತ ನಿವೇದಿತಾ ಮುಖ ಮಾಡಿದ್ದಾರೆ.