ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ರಾಮಯ್ಯ ಮಾಡಗಿ ರಸ್ತೆಯಲ್ಲಿವ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಟುಂಬದಲ್ಲಿ ಕಲಹಗಳು ಇದ್ದ ಕಾರಣ ಜಯಶ್ರೀ ತಾತನ ಮನೆಯಲ್ಲಿ ವಾಸವಿದ್ದರು.
ಸಿನಿಮಾ ಅವಕಾಶ ಹಾಗೂ ಯಾವುದೇ ಕೆಲಸವಿಲ್ಲದ ಕಾರಣ ಜಯಶ್ರೀ ಖಿನ್ನತೆಗೆ ಒಳಗಾಗಿದ್ದರು.
ಖಿನ್ನತೆ ಚಿಕಿತ್ಸೆ ಪಡೆಯುತ್ತಿದ್ದ ಜಯಶ್ರೀ ವಾತಾವರಣ ಬದಲಾವಣೆ ಬೇಕೆಂದು ಅನಾಥಾಶ್ರಮದಲ್ಲಿ ವಾಸವಿದ್ದರು ಎನ್ನಲಾಗಿದೆ.
2019ರಲ್ಲಿ ತಮ್ಮ ಮಾವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು
ಯಾವುದಾದರೂ ಖಾಸಗಿ ಕಂಪನಿಯಲ್ಲಿ ಕೆಲಸವಿದ್ದರೆ ಹೇಳಿ ಮಾಡುತ್ತೇನೆ ಎಂದು ಸ್ನೇಹಿತರ ಬಳಿ ಕೇಳಿಕೊಳ್ಳುತ್ತಿದ್ದಂತೆ.
ಈ ಹಿಂದೆ ಎರಡು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿಕೊಂಡು ಖಿನ್ನತೆ ಬಗ್ಗೆ ಜಯಶ್ರೀ ಹಂಚಿಕೊಂಡಾಗ ನಟ ಕಿಚ್ಚ ಸುದೀಪ್ ಬೆಂಬಲವಾಗಿ ನಿಂತರು.
ಸುದೀಪ್ ಮಾತುಗಳನ್ನು ಕೇಳಿ ಧೈರ್ಯ ತೆಗೆದುಕೊಂಡ ಜಯಶ್ರೀ ಹೊಸ ರೀತಿಯ ಜೀವನ ಆರಂಭಿಸುವುದರ ಬಗ್ಗೆ ಹೇಳಿಕೊಂಡಿದ್ದರು.
ಕೆಲ ತಿಂಗಳ ಹಿಂದೆ ಕೇಶ ಮುಂಡನ ಮಾಡಿಕೊಂಡು ನ್ಯೂ ಲೈಫ್ ಎಂದು ಹೇಳಿಕೊಂಡಿದ್ದರು.