ಕಲರ್ಸ್ ಕನ್ನಡ ಜನ ಮೆಚ್ಚಿದ ಧಾರಾವಾಹಿ ಪ್ರಶಸ್ತಿ ಪಡೆದ ನಮ್ಮನೆ ಯುವರಾಣಿ.
ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಸೊಸೆ ಕಮ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಅಹಲ್ಯಾ ಅಲಿಯಾಸ್ ಕಾವ್ಯ ಮಹಾದೇವ್.
ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಅಹಲ್ಯಾ ಪಾತ್ರಕ್ಕೆ ಜನ ಮೆಚ್ಚಿದ ಮಂಥರೆ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಧಾರಾವಾಹಿ ಆರಂಭದಲ್ಲಿ ಪರ್ಫೆಕ್ಟ್ ಮಗಳಾಗಿದ್ದ, ರಾಜ್‌ಗುರು ಕುಟುಂಬಕ್ಕೆ ಸೊಸೆಯಾಗಿ ಎಂಟ್ರಿ ಕೊಡುತ್ತಿದ್ದಂತೆ ತನ್ನ ಕುತಂತ್ರ ಬುದ್ಧಿ ತೋರಿಸುವ ಪಾತ್ರ ಅಹಲ್ಯಾಳದ್ದು.
ಅಹಲ್ಯಾ ನಾಟಕದ ಮೇಲೆ ಪ್ರಾರಂಭದಿಂದಲೂ ಕಣ್ಣಿಟ್ಟಿದ್ದ ಮೀರಾಳಿಗೆ ತನ್ನ ಅತ್ತಿಗೆ ಹೀಗೆ ಎಂಬುದನ್ನು ಗಂಡ ಅನಿಕೇತ್‌ಗೆ ತಿಳಿಸುವ ಪ್ರಯತ್ನ ಮಾಡುತ್ತಾಳೆ.
ಆದರೆ ಯಾವಾಗ ಅನಿಕೇತ್‌ನನ್ನೇ ಮುಗಿಸುವ ಪ್ಲಾನ್ ಮಾಡುತ್ತಾಳೋ, ಆಗ ಅಹಲ್ಯಾ ಮುಖವಾಡ ಬಯಲು ಮಾಡಲು ಅನಿಕೇತ್ ಪಣ ತೊಡುತ್ತಾನೆ.
ಅನಿಕೇತ್ ಮಾಡಿರುವ ಈ ಮಾಸ್ಟರ್ ಪ್ಲಾನ್‌ನಿಂದ ಅಹಲ್ಯ ಮಿಸ್ ಆಗೋಕ್ಕೆ ಸಾಧ್ಯವೇ ಇಲ್ಲ.
ಆನ್‌ಸ್ಕ್ರೀನ್‌ನಲ್ಲಿ ವಿಲನ್ ಆಗಿರುವ ಅಹಲ್ಯಾ ಪ್ರತಿಯೊಬ್ಬರಿಗೂ ಹೆದರಿಸಿ ಬೆಸರಿಸಿ ಕೆಲಸ ಮಾಡಿಸಿಕೊಳ್ಳುತ್ತಾರೆ.
ಈ ಕಾರಣ ನೆಟ್ಟಿಗರು ಆನ್‌ಸ್ಕ್ರೀನ್‌ನಲ್ಲಿ ಹೆದರಿಸುವ ಪಾತ್ರ ಮಾಡಿರುವುದಕ್ಕೆ ಅವಾರ್ಡ್ ಬಂದಿರುವುದು ಎಂದು ಕಾಮೆಂಟ್ ಮಾಡಿದ್ದಾರೆ