ಬಿಗ್ಬಾಸ್ 12ರ ವಿಜೇತ ಗಿಲ್ಲಿ ನಟ, 'ಡಾನ್ಸ್ ಕರ್ನಾಟಕ ಡಾನ್ಸ್' ವೇದಿಕೆಯಲ್ಲಿ 'ಸ್ವಾತಿ ಮುತ್ತಿನ ಮಳೆಹನಿಯೇ' ಹಾಡಿಗೆ ಮಾಡಿದ ನೃತ್ಯ ವೈರಲ್ ಆಗಿದೆ. ಬಿಗ್ಬಾಸ್ ಮನೆಯಲ್ಲಿ 'ಗಿಲ್ಲಿಗೆ ಸೊಂಟನೇ ಇಲ್ಲ' ಎಂದು ನೀಡಿದ್ದ ಹೇಳಿಕೆಗೆ, ಈ ಡಾನ್ಸ್ ಮೂಲಕವೇ ಉತ್ತರ ನೀಡಲಾಗಿದೆ ಎನ್ನುತ್ತಿದ್ದಾರೆ.
ಬಿಗ್ಬಾಸ್ 12ರ (Bigg Boss 12) ಹವಾ ನಿಧಾನಕ್ಕೆ ಕಡಿಮೆಯಾಗುತ್ತಾ ಬಂದಿದೆ. ಆದರೆ ಇದರಲ್ಲಿ ದಾಖಲೆಯ ಮತ ಪಡೆದು ವಿನ್ ಆಗಿರೋ ಗಿಲ್ಲಿ ನಟ ಮಾತ್ರ ದಿನವೂ ಅವಕಾಶಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ.
ಇದೀಗ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯಲ್ಲಿ ಸ್ವಾತಿ ಮುತ್ತಿನ ಮಳೆಹನಿಯೇ ಹಾಡಿಗೆ ಗಿಲ್ಲಿ ನಟ ಮಾಡಿದ ಡಾನ್ಸ್ ಮತ್ತೆ ವೈರಲ್ ಆಗ್ತಿದೆ. ಹನೀಷ ಅವರ ಜೊತೆಗೆ ಗಿಲ್ಲಿ ನಟ ಅದ್ಭುತ ಡಾನ್ಸ್ ಮಾಡಿದ್ದರು. ಇದಕ್ಕೆ ಕಾರಣದೂ ಇದೆ.
ಬಿಗ್ಬಾಸ್ ಮನೆಯಲ್ಲಿ ಇರುವಾಗ ಜಾಹ್ನವಿ ಅವರು, ತಮಾಷೆಯಾಗಿ Bigg boss ಮನೆಯಲ್ಲಿ ಯಾರೂ ಗಂಡಸ್ರೇ ಅನ್ಸಲ್ಲ, ಗಿಲ್ಲಿಗೆ ಸೊಂಟನೇ ಇಲ್ಲ ಎಂದಿದ್ದರು. ಬಿಗ್ಬಾಸ್ನಲ್ಲಿ ಪುರುಷ ಸ್ಪರ್ಧಿಗಳಿಗಿಂತಲೂ, ಮಹಿಳೆಯರೇ ಸ್ಟ್ರಾಂಗ್ ಎಂದು ಹೇಳಲಾಗ್ತಿದೆ, ನಿಮಗೆ ಏನು ಅನ್ನಿಸತ್ತೆ ಜಾಹ್ನವಿಯವರೇ ಎಂದು ಪ್ರಶ್ನಿಸಿದ್ದಾಗ ಅವರು ಈ ರೀತಿಯ ಉತ್ತರ ಕೊಟ್ಟಿದ್ದರು.
56
ಶಾಕ್ ಆಗಿದ್ದ ಸುದೀಪ್
ಇದನ್ನು ಕೇಳಿ ಸುದೀಪ್ ಕಕ್ಕಾಬಿಕ್ಕಿಯಾಗಿದ್ದರು. ಏನ್ರೀ ಹೀಗೆ ಹೇಳ್ತಾ ಇದ್ದೀರಿ ಎಂದು ಪ್ರಶ್ನಿಸಿದ್ದರು. ಆಗ ಜಾಹ್ನವಿ ಅವರು, ಇಲ್ಲಿ ಹೆಣ್ಣುಮಕ್ಕಳೇ ಸ್ಟ್ರಾಂಗು. ಗಂಡಸರು ಯಾರೂ ಮ್ಯಾನ್ಲಿ ಅನ್ನಿಸ್ತಿಲ್ಲ ಎಂದಾಗ ಸುದೀಪ್ ಶಾಕ್ ಆದರು. ಇದ್ಯಾವ ರೀತಿ ಸ್ಟೇಟ್ಮೆಂಟ್ರಿ ಎಂದು ಪ್ರಶ್ನಿಸಿದ್ರು.
66
ಗಿಲ್ಲಿ ನಟನ ಫ್ಯಾನ್ಸ್ ಬೇಸರ
ಇದು ಗಿಲ್ಲಿ ನಟನ ಅಭಿಮಾನಿಗಳಿಗೆ ಸಕತ್ ಬೇಸರ ಮೂಡಿಸಿತ್ತು ಎನ್ನೋದು ಇದೀಗ ಕಾಣಿಸುತ್ತಿದೆ. ಗಿಲ್ಲಿ ನಟನಿಗೆ ಸೊಂಟನೇ ಇಲ್ಲ ಎಂದಿದ್ದೋರು ಈ ಡಾನ್ಸ್ ಅನ್ನು ಒಮ್ಮೆ ನೋಡಿ ಎಂದು ಅನು ಕುರುಬ ಎನ್ನುವವರು ಇದರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.