ಬಿಗ್ಬಾಸ್ ಮೂಲಕ ಜನಪ್ರಿಯರಾಗಿರುವ ಗಿಲ್ಲಿ ನಟನ ಮದುವೆ ಬಗ್ಗೆ ಚರ್ಚೆ ಜೋರಾಗಿದೆ. ಹಳೆಯ ಸಂದರ್ಶನವೊಂದರಲ್ಲಿ, ತಾವು ಸದ್ಯಕ್ಕೆ ಮದುವೆಯಾಗುವುದಿಲ್ಲ, ಆರ್ಥಿಕವಾಗಿ ಸಬಲರಾಗಿ ಜವಾಬ್ದಾರಿ ಹೊರಲು ಸಿದ್ಧರಾದ ನಂತರವೇ ಮದುವೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಗ್ಬಾಸ್ (Bigg Boss) ಮೂಲಕ ಹವಾ ಸೃಷ್ಟಿಸುತ್ತಿರುವವರು ಒಬ್ಬರು ಗಿಲ್ಲಿ ನಟ. ಅವರೇ ಬಿಗ್ಬಾಸ್ 12 ವಿನ್ನರ್ ಎಂದು ಇದಾಗಲೇ ಹಲವಾರು ಅಭಿಮಾನಿಗಳು ಘೋಷಿಸಿದ್ದಾರೆ. ಹೊರಗಡೆ ಬಂದಿರುವ ಸ್ಪರ್ಧಿಗಳೂ ಅವರದ್ದೇ ಹೆಸರು ಹೇಳುತ್ತಿದ್ದಾರೆ.
27
ಕಾಮಿಡಿ ಗಿಲ್ಲಿ ನಟ
ಕಾಮಿಡಿ ಮೂಲಕವೇ ರಂಜಿಸುವ ಗಿಲ್ಲಿ ನಟ, ಕೆಲವೊಮ್ಮೆ ಸೀರಿಯಸ್ ಟೈಮ್ನಲ್ಲಿಯೂ ಕಾಮಿಡಿ ಮಾಡಿ ಹಲವರ ಕೆಂಗಣ್ಣಿಗೆ ಗುರಿಯಾಗಿರುವುದೂ ಇದೆ. ಇದೇ ವೇಳೆ ಗಿಲ್ಲಿ ನಟ ಹೋದ ರಿಯಾಲಿಟಿ ಷೋಗಳಲ್ಲಿ ಹೆಣ್ಣುಮಕ್ಕಳಿಗೆ ಗಾಳ ಹಾಕುವ ಕಾಮಿಡಿ ಇದ್ದೇ ಇರುತ್ತದೆ.
37
ಗಿಲ್ಲಿ ಮದುವೆ ಯಾವಾಗ?
ಇದೀಗ ಬಿಗ್ಬಾಸ್ನಲ್ಲಿ ಕೂಡ ಕಾವ್ಯಾ ಶೈವ (Kavya Shaiva) ಅವರನ್ನು ಲವ್ ಮಾಡುವುದಾಗಿ ತಮಾಷೆ ಮಾಡುತ್ತಲೇ ಇದ್ದಾರೆ. ಆದ್ದರಿಂದ ಹೋದಲ್ಲಿ ಬಂದಲ್ಲಿ ಹೆಣ್ಣುಮಕ್ಕಳಿಗೆ ಕಾಳು ಹಾಕುವ ಗಿಲ್ಲಿ ಎಂದೇ ಫೇಮಸ್ ಆಗಿರೋ ಗಿಲ್ಲಿ ನಟನ ರಿಯಲ್ ಮದುವೆ ಯಾವಾಗ ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ.
ಬಾಸ್ ಟಿವಿಗೆ ನೀಡಿದ್ದ ಸಂದರ್ಶನದಲ್ಲಿ ಗಿಲ್ಲಿ ನಟ ಮದುವೆ (Bigg Biss gilli Natas marriage) ಬಗ್ಗೆ ಮಾತನಾಡಿದ್ದಾರೆ. ಕೆಲ ತಿಂಗಳ ಹಿಂದೆ ಮಾಡಿರುವ ಈ ವಿಡಿಯೋ ಇದೀಗ ಮತ್ತೆ ಶೇರ್ ಮಾಡಲಾಗಿದೆ.
57
ಕಮಿಟ್ಮೆಂಟ್ಸ್ಗೆ ರೆಡಿ ಇಲ್ಲ
ಮದುವೆಯ ಬಗ್ಗೆ ಗಿಲ್ಲಿ ನಟನನ್ನು ಪ್ರಶ್ನಿಸಿದಾಗ ಅವರು, ಸದ್ಯದ ಯಾವ ಪ್ಲ್ಯಾನೂ ಇಲ್ಲಪ್ಪ. ಇನ್ನು 2-3 ವರ್ಷ ಆಗಲಿ, ಆಮೇಲೆ ನೋಡೋಣ ಎಂದಿದ್ದಾರೆ. ಸದ್ಯದ ಸ್ಥಿತಿಯಲ್ಲಿ ನನ್ನನ್ನು ನಾನು ನೋಡಿಕೊಳ್ಳುವಷ್ಟು ದುಡಿಯುತ್ತಾ ಇದ್ದೇನೆ. ಮದುವೆ ಎಂದರೆ ಅಲ್ಲಿ ಕಮಿಟ್ಮೆಂಟ್ ಹೆಚ್ಚು. ಹೆಂಡತಿ, ಮಕ್ಕಳು, ಸಂಸಾರ ಇವೆಲ್ಲಾ ನಿಭಾಯಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ ಎಂದಿದ್ದಾರೆ.
67
2-3 ವರ್ಷ ಬೇಕು
ಮೊದಲು ನಾನು ಸರಿಯಾಗಿ ದುಡಿಯಬೇಕು. ಸಂಸಾರದ ಜವಾಬ್ದಾರಿ ತೆಗೆದುಕೊಳ್ಳಲು ರೆಡಿಯಾಗಬೇಕು. ಆಮೇಲೆ ಮದುವೆ, ಮಕ್ಕಳ ಯೋಚನೆ. ಅದಕ್ಕೆ ಏನಿದ್ರೂ ಕನಿಷ್ಠ 2-3 ವರ್ಷಗಳಾದರೂ ಬೇಕು ಎಂದಿದ್ದಾರೆ.
77
ಸದ್ಯ ಬಿಜಿ
ಸದ್ಯ ನನ್ನ ಬಳಿ ಕೆಲವು ಸಿನಿಮಾ, ರಿಯಾಲಿಟಿ ಷೋಗಳು ಇವೆ. ಸದ್ಯದ ಪರಿಸ್ಥಿತಿಯಲ್ಲಿ ಬಿಜಿ ಇದ್ದೇನೆ. ಮುಂದೆ ಏನೋ ಹೇಗೋ ಗೊತ್ತಿಲ್ಲ. ಇದು ಎಲ್ಲಿಯವರೆಗೆ ಕರೆದುಕೊಂಡು ಹೋಗುತ್ತದೆಯೋ ಗೊತ್ತಿಲ್ಲ. ಆದ್ದರಿಂದ ಎಲ್ಲವೂ ಸರಿಯಾಗಿ ಸೆಟ್ಲ್ ಆದ್ಮೇಲೆ ಮದುವೆಯ ಬಗ್ಗೆ ಯೋಚಿಸುವೆ ಎಂದು ಹೇಳಿದ್ದಾರೆ.