ಬಿಗ್ ಬಾಸ್ ಸ್ಪರ್ಧಿಗೆ ಮತ್ತೊಂದು ಸಂಕಷ್ಟ, ನಿಷೇಧಿತ ಪೊಟಾಶ್ ಗನ್ ಬಳಸಿದ ತಾನ್ಯ ವಿರುದ್ಧ ದೂರು, ವಿವಾದಗಳಿಗೆ ಸಿಲುಕಿರುವ ಬಿಗ್ ಬಾಸ್ ಇದೀಗ ಮತ್ತೊಂದು ಸಂಕಷ್ಟದಲ್ಲಿದೆ. ಬಿಗ್ ಬಾಸ್ ಸ್ಪರ್ಧಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ ದೂರು ನಿವಾಸಿಯೊಬ್ಬರು ದೂರು ನೀಡಿದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿಗಳ ಆಟಕ್ಕಿಂತ ಹೆಚ್ಚು ಈ ಬಾರಿ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ಕನ್ನಡದಲ್ಲಿ ಬಿಗ್ ಬಾಸ್ ಎರಡು ದಿನ ಸ್ಥಗಿತಗೊಳ್ಳುವ ಮೂಲಕ ಕೋಲಾಹಲ ಸೃಷ್ಟಿಸಿತ್ತು. ಇದೀಗ ಬಿಗ್ ಬಾಸ್ ಸ್ಪರ್ಧಿ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೌದು, ಹಿಂದಿ ಬಾಗ್ ಬಾಸ್ 19ನೇ ಆವೃತ್ತಿ ಸ್ಪರ್ಧಿ ತಾನ್ಯ ಮಿತ್ತಲ್ ವಿರುದ್ದ ನಿವಾಸಿಯೊಬ್ಬರು ದೂರು ನೀಡಿದ್ದಾರೆ.
26
ದೂರು ದಾಖಲಾಗಿದ್ದು ಯಾಕೆ?
ವಿವಾದಗಳಿಂದಲೇ ಸುದ್ದಿಯಾಗಿರುವ ಸ್ಪರ್ಧಿ ತಾನ್ಯ ಮಿತ್ತಲ್, ಈ ಬಾರಿ ಎಫ್ಐಆರ್ ಎದುರಿಸುತ್ತಿದ್ದಾರೆ. ತಾನ್ಯ ಮಿತ್ತಲ್ ದೀಪಾವಳಿ ಸಂಭ್ರಮದಲ್ಲಿ ನಿಷೇಧಿತ ಪೊಟಾಶ್ ಗನ್ ಬಳಸಿದ್ದಾರೆ. ಇದು ನಿಷೇಧವಾಗಿದ್ದರೂ ಬಳಸಲಾಗಿದೆ ಎಂದು ಗ್ವಾಲಿಯರ್ ನಿವಾಸಿ ಶಿಶುಪಾಲ್ ಸಿಂಗ್ ಕನ್‌ಶಾನ ದೂರು ನೀಡಿದ್ದಾರೆ.
36
ಏನಿದು ನಿಷೇಧಿತ ಪೊಟಾಶ್ ಗನ್?
ಪೊಟಾಶ್ ಮದ್ದುಗಳನ್ನು ಬಳಸಿ ಈ ಪಟಾಕಿ ಅಥವಾ ಗನ್ ರೀತಿಯಲ್ಲಿ ಸಿಡಿಸಲಾಗುತ್ತದೆ. ಫಿರಂಗಿ ಸೇರಿದಂತೆ ಇತರ ಶಸ್ತ್ರಗಳಲ್ಲೇ ಇದೇ ತಂತ್ರಗಾರಿಗೆ ಬಳಸಲಾಗುತ್ತಿತ್ತು. ಈ ರೀತಿ ಸಣ್ಣ ಕೊಳವೆಗಳ ಮೂಲಕ ಪೊಟಾಶ್ ಮದ್ದು ಸೇರಿ ಸಿಡಿಸಲಾಗುತ್ತದೆ.ಈ ಪಟಾಕಿಯನ್ನು ಮಧ್ಯ ಪ್ರದೇಶದಲ್ಲಿ ನಿಷೇಧಿಸಲಾಗಿದೆ. ನಿಷೇಧವಿದ್ದರೂ ಬಳಸಲಾಗಿದೆ ಎಂದು ತಾನ್ಯ ಮಿತ್ತಲ್ ವಿರುದ್ದ ದೂರು ನೀಡಿದ್ದಾರೆ.
ದೀಪಾವಳಿ ಹಬ್ಬಕ್ಕೆ ತಾನ್ಯ ಮಿತ್ತಲ್ ಪೊಟಾಶ್ ಗನ ಬಳಕೆ ಮಾಡಿದ್ದಾರೆ. ದೀಪಾಪಳಿ ಪಟಾಕಿ ಸಿಡಿಸುವ ವೇಳೆ ಈ ನಿಷೇಧಿತ ಗನ್ ಬಳಸಿದ್ದಾರೆ. ಬಿಎನ್ಎಸ್ಎಸ್ 163 ಸೆಕ್ಷನ್ ಅಡಿಯಲ್ಲಿ ಗ್ವಾಲಿಯರ್ ಜಿಲ್ಲಾಧಿಕಾರಿ ಸುತ್ತೋಲೆಯಲ್ಲಿ ಸಂಪೂರ್ಣವಾಗಿ ಪೊಟಾಶ್ ಗನ್ ನಿಷೇಧ ಮಾಡಲಾಗಿದೆ ಎಂದು ದೂರುದಾರ ಉಲ್ಲೇಖಿಸಿದ್ದಾರೆ.
56
ಅಪಾಯಕಾರಿ ಕಾರಣ ನಿಷೇಧ
ಅಪಾಯಕಾರಿ ಕಾರಣ ನಿಷೇಧ
ದೀಪಾವಳಿ ಸಂದರ್ಭದಲ್ಲಿ ಪೊಟಾಶ್ ಮದ್ದುಬಳಸಿ ಸಿಡಿಸುವ ಈ ಗನ್ ಅತ್ಯಂತ ಅಪಾಯಕಾರಿಯಾಗಿದೆ. ಕಾರಣ ಈ ಗನ್ ಸಿಡಿಸುವಾಗ ಕಣ್ಣು ಹಾಗೂ ಕಿವಿ ಹಾನಿಯಾಗು ಸಂದರ್ಭಗಳು ಹೆಚ್ಚು. ಇದೇ ರೀತಿ ಪೊಟಾಶ್ ಗನ್ ಸಿಡಿಸಿ ಹಲವರು ದೃಷ್ಠಿ ಹಾಗೂ ಶ್ರವಣದೋಷ ಅನುಭವಿಸಿದ್ದಾರೆ.
66
ಗ್ವಾಲಿಯರ್ ಎಎಸ್‌ಪಿಗೆ ದೂರು
ಗ್ವಾಲಿಯರ್ ಎಎಸ್‌ಪಿಗೆ ದೂರು
ಗ್ವಾಲಿಯರ್ ಎಎಸ್‌ಪಿ ಅನು ಬೆನಿವಾಲ್ ವಿರುದ್ಧ ಗ್ವಾಲಿಯರ್ ನಿವಾಸಿ ಶಿಶುಪಾಲ್ ಸಿಂಗ್ ದೂರು ನೀಡಿದ್ದಾರೆ. ವಿಡಿಯೋ ಆಧಾರಿತ ದೂರು ಆಗಿರುವ ಕಾರಣ ಅನು ಬೆನಿವಾಲ್, ಸೈಬರ್ ತಂಡಕ್ಕೆ ವರ್ಗಾಯಿಸಿದ್ದಾರೆ. ವೈರಲ್ ವಿಡಿಯೋ ಕುರಿತು ಸತ್ಯಸತ್ಯಾತೆ ತಿಳಿಸುವಂತೆ ಸೂಚಿಸಿದ್ದಾರೆ.