ವರ್ಕೌಟ್ ಡಿಟೇಲ್ಸ್‌ ಕೊಡಿ... ಜಿಮ್‌ನಲ್ಲಿ ಬೆವರಿಳಿಸಿ ಸ್ಲಿಮ್ ಆದ ಸೋನು ಗೌಡಗೆ ಸ್ಪೆಷಲ್‌ ರಿಕ್ವೆಸ್ಟ್‌..!

First Published | May 25, 2024, 7:22 PM IST

ನೂರಾರು ಬಗೆಯ ರೀಲ್ಸ್ ಮಾಡುವ ಮೂಲಕ ಮನೆಮಾತಾಗಿರುವ ಸೋನು ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇದೀಗ ಅವರ ಫೋಟೋಸ್ ಸಖತ್ ವೈರಲ್ ಆಗಿವೆ.

ಸೋನು ಗೌಡ ಬಿಗ್ ಬಾಸ್ ಒಟಿಟಿ ಮೂಲಕ ಮತ್ತಷ್ಟು ಜನರಿಗೆ ಹತ್ತಿರವಾಗಿದ್ದರು. ಇತ್ತೀಚೆಗೆ ಮಗುವೊಂದನ್ನು ದತ್ತು ಪಡೆದು ಕೇಸ್ ಹಾಕಿಸಿಕೊಂಡು ಪರಪ್ಪನ ಅಗ್ರಹಾರ ಜೈಲಿಗೂ ಹೋಗಿ ಬಂದಿದ್ದಾರೆ.

ವಿವಾದಗಳಿಂದ ಹೊರಬಂದ ಸೋನು ಶ್ರೀನಿವಾಸ್​ ಗೌಡ ಅವರು ಈಗ ಫಿಟ್ನೆಸ್​ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Tap to resize

ಸೋನು ಶ್ರೀನಿವಾಸ್ ಗೌಡ ಅವರ ಹೊಸ ಫೋಟೋಸ್ ವೈರಲ್ ಆಗಿದೆ. ಜಿಮ್​ನಲ್ಲಿ ಅವರು ಪೋಟೋ ಕ್ಲಿಕ್ಕಿಸಿಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ. ಜೊತೆಗೆ ನೆಗೆಟಿವ್ ಕಮೆಂಟ್ ಕೂಡ ಬಂದಿದೆ.

ಇನ್ನು ಸೋನು ಗೌಡ ಪುನೀತ್ ರಾಜ್‌ಕುಮಾರ್ ಅಭಿನಯದ ಬಿಂದಾಸ್ ಚಿತ್ರದ 'ತರ ತರ ಒಂತರ' ಹಾಡಿಗೆ ರೀಲ್ಸ್ ಮಾಡಿದ್ದಾರೆ. ಸದ್ಯ ಈ ರೀಲ್ಸ್ ಸಖತ್ ವೈರಲ್ ಆಗಿದ್ದು, ಸೋನು ಲುಕ್‌ಗೆ ಪಡ್ಡೆಹೈಕ್ಳು ಫಿದಾ ಆಗಿದ್ದಾರೆ.

ಈ ರೀಲ್ಸ್‌ನಲ್ಲಿ ಸೋನು ಸ್ಲೀವ್‌ಲೆಸ್‌ ಬ್ಲೂ ಡ್ರೆಸ್ ಹಾಗೂ ವೈಟ್ ಚಡ್ಡಿಯಲ್ಲಿ ಕಾಣಿಕೊಂಡಿದ್ದು, ಸೋನು ಅಭಿಮಾನಿಗಳ ಬಳಗದವರು 'ಸಿಕ್ಕಾಪಟ್ಟೆ ವರ್ಕೌಟ್ ಮಾಡಿ ಸಖತ್ ಸ್ಲಿಮ್ ಆಗಿದ್ದೀರಾ, ನಮಗೂ ನಿಮ್ಮ ವರ್ಕೌಟ್ ಬಗ್ಗೆ ತಿಳಿಸಿ' ಎಂದು ಮನವಿ ಮಾಡಿದ್ದಾರೆ.

ಹೆಣ್ಣು ಮಗುವನ್ನು ಕಾನೂನು ಬಾಹಿರವಾಗಿ ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ ಬಾಸ್ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಜೈಲು ವಾಸ ಅನುಭವಿಸಬೇಕಾಯ್ತು. 11 ದಿನಗಳ ಬಳಿಕ ಸೋನು ಗೌಡಗೆ ಸೆರೆಮನೆ ವಾಸ ಮುಕ್ತಾಯವಾಗಿದ್ದು, ರೀಲ್ಸ್ ರಾಣಿ ಜೈಲಿನಿಂದ ಹೊರಗೆ ಬಂದಿದ್ದಾರೆ.
 

8 ವರ್ಷದ ಹೆಣ್ಣು ಮಗುವನ್ನು ನಿಯಮಾನುಸಾರ ದತ್ತು ಪಡೆಯದೇ ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪದ ಮೇಲೆ ಸೋನು ಗೌಡ ಅವರನ್ನು ಮಾರ್ಚ್ 22 ರಂದು ಬೆಳಗಿನ ಜಾವ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದರು. ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸೋನು ಗೌಡರನ್ನು ವಶಕ್ಕೆ ಪಡೆದಿದ್ದರು.

Latest Videos

click me!