ಸುದೀಪ್ ಮನೆಯಲ್ಲಿ ಕಾರ್ತಿಕ್ ಮಹೇಶ್; ಅದೃಷ್ಟ ಅಂದ್ರೆ ಇದೆ ಎಂದ ಅಭಿಮಾನಿಗಳು

First Published | May 25, 2024, 4:57 PM IST

ಒಂದು ಕಾಲದಲ್ಲಿ‌ ಕಿಚ್ಚರನ್ನು ನೋಡೊಕೆ ಮನೆ ಹೊರಗಡೆ ರೌಂಡ್ಸ್ ಹೊಡಿತಿದ್ವಿ, ಈಗ ಅವರ ಮನೆಯೊಳಗೆ ಸ್ಥಾನ .. ಖುಷಿ ಹಂಚಿಕೊಂಡ ಕಾರ್ತಿಕ್‌ ಮಹೇಶ್

ಬಿಗ್ ಬಾಸ್ ಸೀಸನ್ 10ರ ವಿಜೇತ ಕಾರ್ತಿಕ್ ಮಹೇಶ್  (Karthik Mahesh) ಸದ್ಯ ಜಿಮ್, ಶೂಟಿಂಗ್ ಎಂದು ಸಖತ್ ಬ್ಯುಸಿಯಾಗಿದ್ದಾರೆ, ಈ ಮಧ್ಯೆ ಅವರು ತಮ್ಮ ಹಾಗೂ ಕಿಚ್ಚ ಸುದೀಪ್ ನಡುವಿನ ಬಾಂಧವ್ಯದ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

ಕಿಚ್ಚ ಸುದೀಪ್ (Kiccha sudeep) ಅವರ ಅಪ್ಪಟ ಅಭಿಮಾನಿಯಾಗಿರುವ ಕಾರ್ತಿಕ್ ಮಹೇಶ್, ಹೆಚ್ಚಾಗಿ ಸುದೀಪ್ ಜೊತೆಗಿನ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಮತ್ತೆ ಕಿಚ್ಚ ಜೊತೆ ಕಳೆದ ಕ್ಷಣಗಳನ್ನು ಶೇರ್ ಮಾಡಿರುವ ಕಾರ್ತಿಕ್, ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. 
 

Tap to resize

ಒಂದೊಮ್ಮೆ ಕಿಚ್ಚ ಸರ್ ಮನೆ ಕಿಚ್ಚ ಸರ್ ಮನೆ ಅಂತ ಅವರ ಜೆಪಿ ನಗರದ ಮನೆ ಮುಂದೆ ಬೀಟ್ಸ್ ಹಾಕ್ತಿದ್ದೆ. ಇಂದು ಅವರ ಮನೆಯೊಳಗೆ ಅವರೊಂದಿಗೆ ಸಮಯ ಕಳೆಯುವ ಅವಕಾಶ ಕಲ್ಪಿಸಿದ್ದಾರೆ. ಧನ್ಯವಾದಗಳು ಸರ್ ಎಂದು ಬರೆದುಕೊಂಡಿದ್ದಾರೆ ಕಾರ್ತಿಕ್ ಮಹೇಶ್. 
 

ಕಾರ್ತಿಕ್ ಫೋಟೋ ನೋಡಿ ಅಭಿಮಾನಿಗಳು ಸಹ ಖುಷಿಯಾಗಿದ್ದು, ಅದೃಷ್ಟ ಅಂದ್ರೆ ಇದೆ ಅಲ್ವಾ .ಎಷ್ಟು ಖುಷಿ ಅಗುತ್ತೆ ಈ ತರ ನೋಡೊಕೆ ನಮ್ ಕಾರ್ತಿ ನಾ ಎಂದಿದ್ದಾರೆ, ಇನ್ನೊಬ್ಬರು ನಮ್ಮ ಮೈಸೂರ್ ಹುಲಿ ಹೆಬ್ಬುಲಿ ಮನೆಯಲ್ಲಿ ಎಂದಿದ್ದಾರೆ. ಇಬ್ಬರು ಕಿಂಗ್ ಗಳು ಒಂದೇ ಫ್ರೇಮ್ ನಲ್ಲಿ ಎಂದು ಇನ್ನೊಬ್ಬರು ಹೇಳಿದ್ದಾರೆ. 
 

ಇನ್ನೊಬ್ರು ಕಾಮೆಂಟ್ ಮಾಡಿ ಅಂದು ನೀವು ಪಟ್ಟ ಶ್ರಮಕ್ಕೆ ಇಂದು ನಿಮಗೆ ಭಗವಂತ ವರ ಕೊಟ್ಟಿದ್ದಾನೆ. ನಿಮ್ಮ ಮುಖದ ನಗುವೇ ಎಲ್ಲವನ್ನೂ ಹೇಳುತ್ತೆ ಎಂದು ಇನ್ನೊಬ್ಬರು, ಸಾಧನೆ ಅಂದ್ರೆ ಹೀಗಿರಬೇಕು ಎಂದು ಇನ್ನೊಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ.  
 

ಇದಕ್ಕೂ ಮುನ್ನ ಸಹ ಕಾರ್ತಿಕ್ ಸುದೀಪ್ ಜೊತೆಗಿನ ಫೋಟೋ ಪೋಸ್ಟ್ ಮಾಡಿ ಆಕಾಶದ ಎತ್ತರಕ್ಕೆ ಏರಿದರು ಭೂಮಿಯಲ್ಲೇ ನಿಂತಿರುವ ಅಭಿನಯ ಚಕ್ರವರ್ತಿ, ಪ್ರೀತಿಯ ಅಭಿಮಾನಿಗಳ ಅಭಿಮಾನಿ ತಪ್ಪಿದ್ದರೂ ಸರಿ ಇದ್ದರೂ ಸೂಕ್ಷ್ಮವಾಗಿ ಮಾತಿನಲ್ಲೇ ತಿಳಿ ಹೇಳುವ ನನ್ನ ಪ್ರೀತಿಯ ಕಿಚ್ಚ, ಕಣ್ಣಲ್ಲೇ ಕಿಚ್ಚು ಹಚ್ಚುವ ಕಿಚ್ಚ, ಸ್ಟೈಲಲ್ಲಿ ಹುಚ್ಚು ಹಿಡಿಸುವ ಕಿಚ್ಚ, ನಿಮ್ಮ ಕಿವಿ ಮಾತು ಇಲ್ಲದೆ ನನ್ನ ಬಿಗ್ ಬಾಸ್ ಜೀವನ ಅಸಾಧ್ಯವೇ ಸರಿ ಎಂದು ಸಹ ಬರೆದುಕೊಂಡಿದ್ದರು. 
 

ಇನ್ನು ಕಾರ್ತಿಕ್ ಮಹೇಶ್ ಇತ್ತೀಚೆಗೆ ನಟಿ ಮತ್ತು ಬಿಗ್ ಬಾಸ್ ಸಹ ಸ್ಪರ್ಧಿ ನಮ್ರತಾ ಗೌಡ  (Namratha Gowda) ಜೊತೆಗೆ ಜಾಹೀರಾತು ಒಂದರ ಶೂಟಿಂಗ್ ಮಾಡಿದ್ದರು. ಅದರ ಫೋಟೋಗಳು ಭಾರಿ ವೈರಲ್ ಆಗಿ, ಇಬ್ಬರು ಮದುವೆಯಾಗೋದಾಗಿ ಸಹ ಸುದ್ದಿಯಾಗಿತ್ತು, ಅನುಪಮಾ ಗೌಡ ಜೊತೆ ಕೂಡ ಕಾರ್ತಿಕ್ ಹೆಸರು ಕೇಳಿ ಬಂದಿತ್ತು. 
 

Latest Videos

click me!