ಸೀರೆ ಸೀರೆ ಎಲ್ಲೆಲ್ಲೋ ಹಾರೈತೆ ಎಂದು ಫೋಟೋ ಶೇರ್ ಮಾಡಿದ Anupama Gowda: ನೀಲಿ ಸುಂದ್ರಿ ಎಂದ ಫ್ಯಾನ್ಸ್!

Published : Oct 21, 2023, 05:19 PM IST

ಅಕ್ಕ ಧಾರಾವಾಹಿಯಲ್ಲಿ ಡಬಲ್ ರೋಲ್ ಮಾಡಿ ಎಲ್ಲರ ಮನಸ್ಸು ಗೆದ್ದಿದ್ದ ಅನುಪಮಾ ಗೌಡ ಮತ್ತೆ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಇದೀಗ ನೀಲಿ ಸೀರೆಯುಟ್ಟು ಸಖತ್ ಆಗಿ ಕಾಣ್ತಾ ಇದ್ದಾರೆ. 

PREV
17
ಸೀರೆ ಸೀರೆ ಎಲ್ಲೆಲ್ಲೋ ಹಾರೈತೆ ಎಂದು ಫೋಟೋ ಶೇರ್ ಮಾಡಿದ Anupama Gowda: ನೀಲಿ ಸುಂದ್ರಿ ಎಂದ ಫ್ಯಾನ್ಸ್!

ಅನುಪಮಾ ಗೌಡ ಸೀರೆಯುಟ್ಟು ಕ್ಯಾಮರಾಗೆ ಭರ್ಜರಿ ಪೋಸ್ ನೀಡಿದ್ದು, ಶಿವರಾಜ್‌ಕುಮಾರ್ ಅಭಿನಯದ ಜನುಮದ ಜೋಡಿ ಚಿತ್ರದ 'ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ' ಎಂಬ ಹಾಡಿನ ಸಾಲುಗಳನ್ನು ಬರೆದುಕೊಂಡಿದ್ದಾರೆ.

27

ನಟಿ ಅನುಪಮಾ ಗೌಡ ಸೀರೆಯಲ್ಲಿ ಮಿಂಚಿದ್ದು, ನೀ ಚಂದನೇ.. ನಿನ್ನ ಸೀರೆ ಚಂದನೇ ಎಂದು ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆ ಗೈದಿದ್ದಾರೆ. ಬ್ಲ್ಯೂ ಡ್ರೆಸ್ ನಟಿಗೆ ಸಖತ್ತಾಗಿ ಮ್ಯಾಚ್ ಆಗಿದೆ.

37

ಅನುಪಮಾ ಗೌಡ ಶೇರ್ ಮಾಡಿದ ಫೋಟೋಗಳಿಗೆ 32 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ನೀಲಿ ಚೆಲುವೆ, ಸೂಪರ್, ನವಿಲು ಮರಿ ನೀನು, ಮುದ್ದು, ನೀವು ಯಾವಾಗಲೂ ಚಂದ ಎಂದು ಫ್ಯಾನ್ಸ್ ಹೊಗಳಿದ್ದಾರೆ.

47

ಅನುಪಮಾ ಗೌಡ ಅವರು ಬಿಗ್ ಬಾಸ್ ಮೂಲಕ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ. ಅದರಿಂದ ಬಂದ ಮೇಲೆ ನಿರೂಪಕಿಯಾಗಿ ಮಿಂಚಿದ್ರು. ನಟಿಯಾಗಿಯೂ ಸಿನಿಮಾ ಮಾಡಿದ್ರು.

57

ನಟಿ ಅನುಪಮಾ ಗೌಡ ಅವರಿಗೆ ಪ್ರವಾಸಕ್ಕೆ ಹೋಗೋದು ಅಂದ್ರೆ ತುಂಬಾ ಇಷ್ಟ ಅಂತೆ. ಆಗಾಗ ಟ್ರಿಪ್ ಹೋಗ್ತಾ ಇರ್ತಾರೆ. ಅಲ್ಲದೇ ಅವರಿಗೆ ಸೋಲೋ ಟ್ರಿಪ್ ಹೋಗಲು ಇನ್ನೂ ಇಷ್ಟವಂತೆ.

67

ಅನುಪಮಾ ಗೌಡ ಅವರು ಒಳ್ಳೆ ಸಿನಿಮಾ ಮಾಡಲು ಕಾಯ್ತಾ ಇದ್ದಾರಂತೆ. ಅಲ್ಲದೇ ಫೋಟೋಗ್ರಫಿ ಅಂದ್ರೂ ಅನುಪಮಾ ಅವರಿಗೆ ಇಷ್ಟವಂತೆ. ಕ್ಯಾಮೆರಾ ಹಿಡಿದು ಆಗಾಗ ಪ್ರವಾಸಕ್ಕೆ ಹೋಗ್ತಾ ಇರ್ತಾರೆ.

77

ಅನುಪಮಾರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ. ಅನುಪಮಾ ಸೀರಿಯಲ್ ಮಾಡ್ತಾರಾ ಅಥವಾ ಸಿನಿಮಾ ಮಾಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Read more Photos on
click me!

Recommended Stories