ಏಷ್ಯಾದಲ್ಲಿ ಕೋವಿಡ್ ಸ್ಫೋಟಗೊಂಡಿದೆ. ಸಿಂಗಾಪುರ, ಹಾಂಕಾಂಗ್, ಚೀನಾ, ಥಾಯ್ಲೆಂಡ್‌ಗಳಲ್ಲಿ ಕೋವಿಡ್ ಪ್ರಕರಗಳು ಹೆಚ್ಚಾಗುತ್ತಿದೆ. ಕೋವಿಡ್ ಇನ್ನೇನು ಸಂಪೂರ್ಣ ಅಂತ್ಯಗೊಂಡಿತು ಅನ್ನೋವಷ್ಟರಲ್ಲೇ ಇದೀಗ ಮತ್ತೆ ವಕ್ಕರಿಸಿದೆ. ಕೋವಿಡ್ 2 ಅಲೆಗಳ ಬಳಿಕ ಪ್ರತಿ ವರ್ಷ ಭಾರತ ಸೇರಿದಂತೆ ಕೆಲ ದೇಶಗಳಲ್ಲಿ ಕಾಣಿಸಿಕೊಂಡಿದೆ. ಆದರೆ ಅಷ್ಟೇ ಬೇಗದಲ್ಲಿ ಮಾಯವಾಗಿದೆ. ಕಳೆದೊಂದು ವರ್ಷದಿಂದ ಕೋವಿಡ್ ದೂರ ಸರಿದಿತ್ತು. ಹೀಗಾಗಿ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದರು. ಆದರೆ ಏಷ್ಯಾದಲ್ಲಿ ಮತ್ತೆ ಕೋವಿಡ್ ಕಾಣಿಸಿಕೊಳ್ಳುವ ಮೂಲಕ ಆತಂಕ ಹೆಚ್ಚಿಸಿತು. ಇಷ್ಟಾದರೂ ಭಾರತಕ್ಕೆ ಯಾವುದೇ ಆತಂಕವಿರಲಿಲ್ಲ. ಇದೀಗ ಭಾರತದಲ್ಲಿ ಕೋವಿಡ್ ಪ್ರಕರಣ ದಾಖಲಾಗುತ್ತಿದೆ. ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾಗುವ ಆತಂಕ ಎದುರಾಗಿದೆ. ಇದರ ನಡುವೆ ಬಿಗ್ ಬಾಸ್ ಸ್ಪರ್ಧಿ ಶಿಲ್ಪಾ ಶಿರೋಡ್ಕರ್ ಕೋವಿಡ್ ವೈರಸ್ ಅಂಟಿಕೊಂಡಿದೆ.