ಕನ್ನಡ ಕಿರುತೆರೆಯ ಸುಂದರಿ ಮೋಕ್ಷಿತಾ ಪೈ (Mokshitha Pai), ಸೀರೆ ಪ್ರಿಯೆ ಅಂದ್ರೆ ತಪ್ಪಲ್ಲ. ಯಾಕಂದ್ರೆ ಹೆಚ್ಚಾಗಿ ಇವರು ಕಾಣಿಸಿಕೊಳ್ಳೋದೇ ಸೀರೆಯಲ್ಲಿ. ಇದೀಗ ಮತ್ತೆ ಸೀರೆಯುಟ್ಟು ಮುದ್ದಾಗಿ ಕಾಣಿಸಿದ್ದಾರೆ ಬೆಡಗಿ.
28
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಸುಂದರಿ ಮೋಕ್ಷಿತಾ ಪೈ, ದಿನಕ್ಕೊಂದರಂತೆ ಫೋಟೊ ಶೂಟ್ ಮಾಡಿ ಪೋಸ್ಟ್ ಮಾಡುತ್ತಿರುತ್ತಾರೆ. ಎಲ್ಲದರಲ್ಲೂ ಕಾಮನ್ ಆಗಿರೋದು ಸೀರೆ.
38
ಈ ಬಾರಿ ಮೋಕ್ಷಿತಾ ಕಡು ನೀಲಿ ಮತ್ತು ಪಿಂಕ್ ಬಣ್ಣದ ಮೈಸೂರ್ ಕ್ರೇಪ್ ಸಿಲ್ಕ್ ಸೀರೆ (Mysore crepe silk saree) ಧರಿಸಿ ಪೋಸ್ ಕೊಟ್ಟಿದ್ದು, ದೇವತೆಯಂತೆ ಕಾಣಿಸ್ತಿದ್ದಾರೆ ಈ ಬಿಗ್ ಬಾಸ್ ಬೆಡಗಿ.
ನೀಲಿ ಸಿಲ್ಕ್ ಸೀರೆ ಜೊತೆ ಪಿಂಕ್ ಬಣ್ಣದ ಬ್ಲೌಸ್ ಧರಿಸಿರುವ ಮೋಕ್ಷಿತಾ, ಸಿಂಪಲ್ ಆಗೋಂದು ಚೈನ್, ಒಂದು ಬಳೆ ಹಾಕಿ ಜ್ಯುವೆಲ್ಲರಿ ಒಂದರಲ್ಲಿ ನಿಂತು ಪೋಸ್ ಕೊಟ್ಟಿದ್ದಾರೆ.
58
ಮೋಕ್ಷಿತಾ ಜೊತೆ ಆಕೆಯ ಮುದ್ದಿನ ಅಮ್ಮ ಕೂಡ ಸಾತ್ ಕೊಟ್ಟಿದ್ದಾರೆ. ಅಮ್ಮ ಮಗಳ ಜೋಡಿ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಭೂತ ಕನ್ನಡಿ ಇಟ್ರೂ ಲೋಪ ಕಾಣದ ರೂಪಸಿ ಈಕೆ ಎಂದು ಮೋಕ್ಷಿತಾರನ್ನು ಹಾಡಿ ಹೊಗಳಿದ್ದಾರೆ ಜನ.
68
ಇನ್ನು ಮತ್ತಷ್ಟು ಜನ ಕಾಮೆಂಟ್ ಮಾಡಿ, ನ್ಯಾಚುರಲ್ ಬ್ಯೂಟಿ ಕ್ವೀನ್ (natural beauty queen)ಮೋಕ್ಷಿ, ನೀವು ನೋಡೋದಕ್ಕೆ ದೇವತೆ ತರ ಕಾಣಿಸ್ತೀದ್ದೀರಿ, ಕೋಟಿ ಕೋಟಿ ಹುಡುಗಿಯರಿದ್ದರು ನಿಮ್ಮಂತೆ ಯಾರೂ ಇಲ್ಲ. ಮನಸ್ಸು ಮುಟ್ಟೋ ಚೆಲುವೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
78
ಇನ್ನು ಮೋಕ್ಷಿತಾ ಬಗ್ಗೆ ಹೇಳೋದಾದ್ರೆ ಪಾರು ಸೀರಿಯಲ್ (Paaru serial) ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಈ ನ್ಯಾಚುರಲ್ ಬ್ಯೂಟಿ ಪಾರು ಆಗಿ 5 ವರ್ಷ ಮಿಂಚಿದ್ದರು. ನಂತರ ಬಿಗ್ ಬಾಸ್ ಸೀಸನ್ 10 ರಲ್ಲಿ ಸಖತ್ ಸದ್ದು ಮಾಡಿದ್ರು.
88
ಇದೀಗ ಮೋಕ್ಷಿತಾ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡೋದಕ್ಕೆ ರೆಡಿಯಾಗಿದ್ದಾರೆ. ವಿನು ಗೌಡ ಜೊತೆ ಮೋಕ್ಷಿತಾ ಪೈ 'ಮನೆ ಮನೆ ರಾಮಾಯಣ' (Mane Mane Ramayana) ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾ ಶೂಟಿಂಗ್ ನಡೆಯುತ್ತಿದ್ಯಾ? ಸಿನಿಮಾ ಬಿಡುಗಡೆ ಯಾವಾಗ ಎನ್ನುವ ಮಾಹಿತಿ ಇಲ್ಲ.