ಪುಟ್ಟಗೌರಿ ಧಾರಾವಾಹಿ ಮೂಲಕ ನಾಯಕಿಯಾಗಿ ಕನ್ನಡ ಕಿರುತೆರೆಯಲ್ಲಿ ಮಿಂಚಿರುವ ನಮ್ರತಾ ಗೌಡ ನಾಗಿಣಿ ಧಾರಾವಾಹಿ ಮೂಲಕ ಖ್ಯಾತೆ ಪಡೆದರು.
ನಾಗಿಣಿ ಧಾರಾವಾಹಿ ಮುಗಿಯುತ್ತಿದ್ದಂತೆ ನಮ್ರತಾ ಗೌಡ ಬಿಗ್ ಬಾಸ್ ಸೀಸನ್ 10ಕ್ಕೆ ಎಂಟ್ರಿ ಕೊಟ್ಟರು. ಫಿನಾಲೆ ವಾರಕ್ಕೆ ಕಾಲಿಟ್ಟು ಟಫ್ ಫೈಟ್ ಕೊಟ್ಟರು. ಬಿಗ್ ಬಾಸ್ ಮುಗಿದ ಮೇಲೆ ನಮತ್ರಾ ಗೌಡ ಯಾವುದೇ ಪ್ರಾಜೆಕ್ಟ್‌ಗಳಿಗೂ ಸಹಿ ಹಾಕಿಲ್ಲ.
ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್ ಚಾನೆಲ್ ಹೊಂದಿರುವ ನಮ್ರತಾ ಗೌಡ ಪ್ರಮೋಷನ್‌ಗಳಲ್ಲಿ ತುಂಬಾನೇ ಬ್ಯುಸಿಯಾಗಿಬಿಟ್ಟಿದ್ದಾರೆ. ಅಲ್ಲದೆ ಈಗ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ನಮ್ರತಾ ಗೌಡರಿಗೆ ಸೀರೆ ಮೇಲೆ ಒಲವು ಹೆಚ್ಚಾಗಿದೆ. ಹೀಗಾಗಿ ಸಾಕಷ್ಟು ವೆರೈಟಿ ಆಫ್ ಸೀರೆಗಳನ್ನು ಧರಿಸಿ ಫೋಟೋ ಅಪ್ಲೋಡ್ ಮಾಡುತ್ತಿದ್ದಾರೆ. ಅಲ್ಲದೆ ನಮ್ರತಾಗೆ ಸೀರೆ ಇಷ್ಟು ಎಂದು ಅನೇಕರು ಪ್ರಮೋಷನ್ ಮೊರೆ ಹೋಗುತ್ತಾರೆ.
ಇತ್ತೀಚಿಗೆ ನಮತ್ರಾ ಗೌಡ ಗೋಲ್ಡನ್ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ಈ ಸೀರೆಗೆ ಗೋಲ್ಡನ್ ಬಣ್ಣದ ಬ್ಲೌಸ್ ಧರಿಸಿದ್ದಾರೆ. ಲುಕ್ ಎದ್ದು ಕಾಣಲು ಹಸಿರು ಬಣ್ಣದ ಸರೆ ಧರಿಸಿದ್ದಾರೆ.
ಶಿವರಾಜ್‌ಕುಮಾರ್ ಮತ್ತು ಸುಧಾರಾಣಿ ನಟನೆಯ ಆಸೆಗೊಬ್ಬ ಮೀಸೆಗೊಬ್ಬ ಸಿನಿಮಾದ 'ಕೆಣಕುತಿದೆ ನಿನ್ನ ಕಣ್ಣೋಟ' ಹಾಡನ್ನು ಹಾಕಿದ್ದಾರೆ ನಮ್ರತಾ. ಇದಕ್ಕೆ ಅಭಿಮಾನಿಯೊಬ್ಬ 'ಇದೇ ರೀತಿ ಮೈ ತುಂಬಾ ಬಟ್ಟೆ ಹಾಕಿಕೊಳ್ಳಲಿ ಜನರಿಗೆ ಇಷ್ಟ ಆಗುತ್ತೀರಿ' ಎಂದು ಕಾಮೆಂಟ್ ಮಾಡಿದ್ದಾರೆ.