ಸೀರಿಯಲ್​ ಮೂಲಕ 'ನಿತ್ಯ' ಎಲ್ಲರ ಮನಸ್ಸು ಕದಿತಿರೋ Bigg Boss ನಾಯಕಿ ಯಾರೀಕೆ ತಿಳಿಯಿತಾ?

Published : Feb 07, 2026, 07:06 PM IST

ಜೀ ಕನ್ನಡದ ಜನಪ್ರಿಯ ಸೀರಿಯಲ್ ನಟಿ ಮತ್ತು ಬಿಗ್​ಬಾಸ್​ ಸ್ಪರ್ಧಿ  ತಮ್ಮ ಬಾಲ್ಯದ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. 'ಕರ್ಣ' ಸೀರಿಯಲ್ ಖ್ಯಾತಿಯ ನಟಿಯ ಮುದ್ದಾದ ಫೋಟೋಗಳಿಗೆ ಅಭಿಮಾನಿಗಳು ಮನಸೋತಿದ್ದು, ಕಮೆಂಟ್‌ಗಳ ಸುರಿಮಳೆಗೈದಿದ್ದಾರೆ.

PREV
16
ಬಾಲ್ಯದೆಡೆ ಸೆಳೆತ

ವಯಸ್ಸು 30ರ ಆಸುಪಾಸು ಬರುತ್ತಿದ್ದಂತೆಯೇ, ಮನಸ್ಸು ಬಾಲ್ಯದೆಡೆ ಸೆಳೆಯುತ್ತದೆ. ಆಲ್ಬಂನಲ್ಲಿ ಇರುವ ಹಳೆದ ಫೋಟೋಗಳನ್ನು ತಿರುವಿ ಅದನ್ನು ನೋಡುವುದೇ ಎಷ್ಟು ಸೊಗಸು, ಎಷ್ಟು ಖುಷಿ. ಅಬ್ಬಾ ನಾನು ಹೀಗಿದ್ನಾ? ಎಷ್ಟು ಚೆಂದ ಇದ್ದೆ ಎಂದೆಲ್ಲಾ ಮನಸ್ಸು ಆ ದಿನಗಳನ್ನು ನೆನೆಯುವುದು ಸರ್ವೇ ಸಾಮಾನ್ಯ.

26
ಸೀರಿಯಲ್​ ನಟಿ ಫೋಟೋ ಶೇರ್​

ಅದೇ ರೀತಿ, ಇಲ್ಲೊಬ್ಬ ಸೀರಿಯಲ್​ ನಟಿ, ಬಿಗ್​ಬಾಸ್​ ಸ್ಪರ್ಧಿ, ಜೀ ಕನ್ನಡದಲ್ಲಿ ನಿತ್ಯವೂ ನಿಮ್ಮ ಮನೆಗೆ ಬರುತ್ತಿರುವ ನಾಯಕಿಯೊಬ್ಬರು ತಮ್ಮ ಬಾಲ್ಯದ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಬಹುಶಃ ಇವಿಷ್ಟೇ ಫೋಟೋ ನೋಡಿದರೆ ಅವರು ಯಾರು ಎಂದು ತಿಳಿಯುವುದು ತುಸು ಕಷ್ಟವೆ!

36
ಈಗ ಗೊತ್ತಾಯ್ತಾ?

ಈಗ ಈ ಫೋಟೋ ನೋಡಿ ಹೇಳಿ. ಗೊತ್ತಾಗಿರಬೇಕು ಅಲ್ವಾ? ಏಕೆಂದರೆ ಈಗಲೂ ಹೀಗೆಯೇ ಇದ್ದಾರೆ ಈ ನಾಯಕಿ. ಅವರೇ ಕರ್ಣ ಸೀರಿಯಲ್​ ನಿತ್ಯಾ ಉರ್ಫ್​ ನಮ್ರತಾ ಗೌಡ.

46
ಫೋಟೋ ಶೇರ್​

ನಮ್ರತಾ ಗೌಡ ಅವರು, ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ತಮ್ಮ ಬಾಲ್ಯದ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

56
ಆ ದಿನಕ್ಕೆ ಕರೆದೊಯ್ಯು

ನನ್ನನ್ನು ಆ ದಿನಕ್ಕೆ ಪುನಃ ಕರೆದುಕೊಂಡು ಹೋಗು (Take me back to those days) ಎನ್ನುವ ಕ್ಯಾಪ್ಷನ್​ ನೀಡುವ ಮೂಲಕ ನಮ್ರತಾ ಗೌಡ ಅವರು ಇದನ್ನು ಶೇರ್​ ಮಾಡಿಕೊಂಡಿದ್ದಾರೆ.

66
ಕಮೆಂಟ್ಸ್​ ಸುರಿಮಳೆ

ಈ ಮುದ್ದುಮೊಗದ ಪುಟಾಣಿಗೆ ವೀಕ್ಷಕರು ಹಾರ್ಟ್​ ಇಮೋಜಿಗಳಿಂದ ತುಂಬಿಸಿದ್ದಾರೆ. ನೀವು ಈಗಲೂ ಇಷ್ಟೇ ಕ್ಯೂಟ್​ ಆಗಿದ್ದೀರಿ ಎಂದು ಹಲವರು ಕಮೆಂಟ್​ ಮೂಲಕ ತಿಳಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories