ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಗೌತಮಿ ಜಾಧವ್ ದೊಡ್ಮನೆಯಲ್ಲಿ ಪಾಸಿಟಿವ್ ಮಂತ್ರ ಹೇಳಿಕೊಂಡು ಗೌತಮಿ ಎಲ್ಲರ ಗಮನ ಸೆಳೆದಿದ್ದರು. ಸದ್ಯ ಕಿರುತೆರೆಗೆ ಅವರು ಕಂಬ್ಯಾಕ್ ಮಾಡಿದ್ದಾರೆ.
26
ನಟನೆಯಲ್ಲೂ ಬ್ಯುಸಿಯಾಗಿರುವ ಗೌತಮಿ ಜಾಧವ್ ಬಿಡುವಿನ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಹೌದು! ಗೌತಮಿ ತಮ್ಮ ನೆಚ್ಚಿನ ಶ್ವಾನ (ನಾಯಿ) ಗಳ ಜೊತೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
36
ಗೌತಮಿ ಜಾಧವ್ ಮೂರು ಗೋಲ್ಡನ್ ರಿಟ್ರೈವರ್ ಶ್ವಾನಗಳನ್ನು ಸಾಕಿದ್ದಾರೆ. ಈ ಶ್ವಾನಕ್ಕೆ ಅವರು ಹ್ಯಾಪಿ, ಕಾಫಿ ಹಾಗೂ ಕ್ವೀನ್ ಎಂಬ ಹೆಸರನ್ನಿಟ್ಟಿದ್ದಾರೆ. ಸದ್ಯ ಶ್ವಾನಗಳ ಜೊತೆ ಗೌತಮಿ ಹಾಗೂ ಅವರ ಪತಿ ಅಭಿಷೇಕ್ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.
ಅಲ್ಲದೇ ಮೋಡ ಕವಿದ ಆಕಾಶ, ಬೆಚ್ಚಗಿನ ಹೃದಯಗಳು ಮತ್ತು ಮೂರು ಪಟ್ಟು ಬಾಲ ಅಲ್ಲಾಡುವಿಕೆ. ಭಾನುವಾರ ಕಾಫಿ, ಹ್ಯಾಪಿ ಮತ್ತು ಕ್ವೀನ್ ನನ್ನ ಪಕ್ಕದಲ್ಲಿದ್ದರೆ ಚೆನ್ನಾಗಿರುತ್ತದೆ ಎಂದು ಕ್ಯಾಪ್ಷನ್ ಸಹ ಕೊಟ್ಟಿದ್ದಾರೆ.
56
ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಪ್ರೀತಿಸಿ ಜಂಟಿಯಾದ ಗೌತಮಿ ಜಾಧವ್ ಅವರ ಪತಿ ಸಿನಿಮಾಟೋಗ್ರಾಫರ್ ಅಭಿಷೇಕ್ ಕಾಸರಗೂಡು. ಗೌತಮಿ ಹಾಗೂ ಅಭಿಷೇಕ್ ಇಬ್ಬರು ಕಿನಾರೆ ಸಿನಿಮಾದಲ್ಲಿ ಭೇಟಿಯಾಗಿದ್ದರು.
66
ಇನ್ನು ಗೌತಮಿ ಜಾಧವ್, ಜೀ ಕನ್ನಡದಲ್ಲಿ ಪುಸಾರವಾಗುತ್ತಿದ್ದ ಸತ್ಯ ಧಾರಾವಾಹಿಯಲ್ಲಿ ಸತ್ಯ ಪಾತ್ರಧಾರಿಯಾಗಿ ನಟಿಸುತ್ತಿದ್ದರು. ಈ ಧಾರಾವಾಹಿಯಲ್ಲಿ ಟಾಮ್ ಬಾಯ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಕೊನೆಯಲ್ಲಿ ಅವರು ಪೊಲೀಸ್ ಅಧಿಕಾರಿ ಪಾತ್ರದಲ್ಲೂ ಮಿಂಚಿದ್ದರು.