First Wedding Anniversary: ಮೊದಲನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ನಯನಾ ನಾಗರಾಜ್… ಪತಿಗಾಗಿ ಬರೆದ್ರು ಪ್ರೇಮದ ಓಲೆ

Published : Jun 16, 2025, 10:51 AM ISTUpdated : Jun 16, 2025, 10:56 AM IST

ಗಿಣಿರಾಮ ಧಾರಾವಾಹಿಯಲ್ಲಿ ನಾಯಕಿ ಮಹತಿಯಾಗಿ ಮಿಂಚಿದ ನಟಿ ನಯನಾ ನಾಗರಾಜ್ ತಮ್ಮ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ.

PREV
17

ಪಾಪ ಪಾಂಡು ಹಾಗೂ ಗಿಣಿರಾಮ (Gini Rama Serial) ಧಾರಾವಾಹಿಯಲ್ಲಿ ನಟಿಸಿರುವ ನಟಿ ಹಾಗೂ ಗಾಯಕಿ ನಯನಾ ನಾಗರಾಜ್ ತಮ್ಮ ಮೊದಲನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ತಮ್ಮ ಇನ್’ಸ್ಟಾಗ್ರಾಂನಲ್ಲಿ ಪತಿ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿ ವಿಶ್ ಮಾಡಿದ್ದಾರೆ.

27

ಹತ್ತು ವರ್ಷಗಳಿಂದ ಸ್ನೇಹಿತನಾಗಿ, ಈಗ ಪತಿಯಾಗಿರುವ ಸುಹಾಸ್ ಅವರಿಗೆ ನಯನಾ ಆನಿವರ್ಸರಿ (Wedding anniversary) ಸ್ಪೆಷಲ್ ವಿಶ್ ಆಗಿ, ರೊಮ್ಯಾಂಟಿಕ್ ಪತ್ರ ಕೂಡ ಬರೆದು ಶೇರ್ ಮಾಡಿದ್ದಾರೆ. ನಯನಾ ತಮ್ಮ ಮುದ್ದಾದ ಫೋಟೊಗಳ ಜೊತೆ ಏನು ಬರೆದಿದ್ದಾರೆ ನೋಡೋಣ.

37

ನಮ್ಮ ಹೆತ್ತವರ ಭೇಟಿಯಾದ ದಿನದಿಂದ ನಾವು ಮದುವೆಯಾದ ದಿನದವರೆಗಿನ ಫೋಟೊಗಳು ಎಂದು ಬರೆದು, ಈ ಸುಂದರ ಪ್ರಯಾಣದ ಬಗ್ಗೆ ನಾನು ಏನು ಹೇಳಬಲ್ಲೆ? ಎಲ್ಲಿಂದ ಪ್ರಾರಂಭಿಸಬೇಕು? ಎಂದು ಆರಂಭಿಸಿ, ತಮ್ಮ 12 ವರ್ಷದ ಪ್ರೀತಿಯ ಬಗ್ಗೆ ಮೆಲುಕು ಹಾಕಿದ್ದಾರೆ.

47

2013 ರಿಂದ ನೀವು ನನ್ನ ಜೀವನದಲ್ಲಿ ಅತ್ಯುತ್ತಮ ವ್ಯಕ್ತಿಯಾಗಿದ್ದೀರಿ, ಒಂದು ದಶಕದ ಪ್ರೀತಿಯು ಹಲವಾರು ಭಾವನೆಗಳಿಂದ ತುಂಬಿತ್ತು, ರೋಲರ್ ಕೋಸ್ಟರ್ ಅನುಭವ (roller coaster experiencer)ಮತ್ತು ಈಗ ನಿಮ್ಮ ಹೆಂಡತಿಯಾಗಿ ಒಂದು ವರ್ಷ ಸಂಪೂರ್ಣವಾಗಿ ಬೆಸ್ಟ್ ಆಗಿತ್ತು! ನಾನು ನಿಮಗೆ ಕಷ್ಟ ಕೊಡ್ತೀನಿ ಅನ್ನೋದು ನನಗೆ ತಿಳಿದಿದೆ ,ಆದರೆ ಯಾರೂ, ಈ ವಿಶ್ವದಲ್ಲಿ ಯಾರೂ ಕೂಡ ನೀನು ಸಹಿಸಿದಷ್ಟು, ಅರ್ಥ ಮಾಡಿಕೊಂಡಷ್ಟು, ಪ್ರೀತಿಸಿದಷ್ಟು ನನ್ನನ್ನು ಬೇರೆ ಯಾರಿಗೂ ಅರ್ಥಮಾಡಿಕೊಳ್ಳಲು ಮತ್ತು ಸಹಿಸಲು ಸಾಧ್ಯವಿಲ್ಲ.

57

ನೀನೇ ನನ್ನ ಪ್ರಪಂಚ ಮುದ್ದು. ನೀನು ನನ್ನ ಇಡೀ ಜಗತ್ತನ್ನು ಸಂತೋಷಪಡಿಸುತ್ತೀಯ! ನಾನು ಯಾವಾಗಲೂ ನಿನ್ನ ಬಗ್ಗೆ ಹೆಮ್ಮೆಪಡುತ್ತೇನೆ ನಾನು ತುಂಬಾ ಹೆಮ್ಮೆಯಿಂದ ಹೇಳಬಲ್ಲೆ ಇವರು ನನ್ನ ಗಂಡ' ಎಂದು. ನೀವು ನನಗೆ ತಿಳಿದಿರುವ ಅತ್ಯಂತ ಅದ್ಭುತ ಮನುಷ್ಯ! ಯಾವಾಗಲೂ ನನಗೆ ಬೆಂಬಲ ನೀಡುತ್ತಿರುವುದಕ್ಕೆ ತುಂಬಾ ಧನ್ಯವಾದಗಳು ಮತ್ತು ನಾನು ನಿಮ್ಮನ್ನ ತುಂಬಾ ಪ್ರೀತಿಸುತ್ತೇನೆ, ಪದಗಳಲ್ಲಿ ಹೇಳಲು ಸಾಧ್ಯವಿಲ್ಲ, ಅಷ್ಟೊಂದು ಪ್ರೀತಿಸುತ್ತೇನೆ ಎಂದು ಮನದ ಮಾತುಗಳನ್ನು ನಯನಾ ನಾಗರಾಜ್ (Nayana Nagaraj)ಬರೆದಿದ್ದಾರೆ.

67

ಜೊತೆಗೆ ಮೊದಲನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಗಂಡ ಎಂದು ಕೂಡ ಬರೆದುಕೊಂಡಿದ್ದಾರೆ. ಈ ಜೋಡಿಯ ಆನಿವರ್ಸರಿ ಸಂಭ್ರಮಕ್ಕೆ ಅಭಿಮಾನಿಗಳು ಸಹ ಶುಭಾಶಯ ಕೋರಿದ್ದಾರೆ. ಜೊತೆಗೆ ಸಂತೋಷದ ದಾಂಪತ್ಯ ಜೀವನ ನಿಮ್ಮದಾಗಲಿ ಎಂದು ಹಾರೈಸಿದ್ದಾರೆ.

77

ನಟಿ ನಯನಾ ನಾಗರಾಜ್ ಕಳೆದಾ ವರ್ಷ ಅಂದ್ರೆ 2024ರ ಜೂನ್ 16ರರಂದು ತಮ್ಮ ಬಹುಕಾಲದ ಗೆಳೆಯ ಸುಹಾಸ್ ಶಿವಣ್ಣ (Suhas Shivanna)ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸುಹಾಸ್ ಕೂಡ ಸಂಗೀತಗಾರರಾಗಿದ್ದಾರೆ.

Read more Photos on
click me!

Recommended Stories