Bigg Boss ಮತ್ತು ಫೇಕ್​ PR: ತಮ್ಮ ಜೀವನದ ಬಹುದೊಡ್ಡ ಸೀಕ್ರೆಟ್​ ರಿವೀಲ್​ ಮಾಡಿದ ಧ್ರುವಂತ್​

Published : May 20, 2026, 11:42 AM IST

 ಪ್ರಚಾರಕ್ಕಾಗಿ ಪಿಆರ್​ ಏಜೆನ್ಸಿಗಳನ್ನು ಅವಲಂಬಿಸುವುದು ಸಾಮಾನ್ಯ. ಆದರೆ, ಬಿಗ್​ಬಾಸ್​ ಸ್ಪರ್ಧಿ ಧ್ರುವಂತ್​ ತಮ್ಮದೇ ಆದ ನೈತಿಕತೆಯ ಕಾರಣ ನೀಡಿ, ಪಿಆರ್​ ಏಜೆನ್ಸಿಯನ್ನು ನೇಮಿಸಿಕೊಳ್ಳದೆ ಆಟವಾಡಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಜನರ ನಿಜವಾದ ಪ್ರೀತಿ ಗಳಿಸುವುದೇ ಮುಖ್ಯ ಎಂದಿದ್ದಾರೆ.

PREV
15
ಪಿಆರ್​ ಏಜೆನ್ಸಿಗೆ ಲಕ್ಷಗಟ್ಟಲೆ

ಬಿಗ್​ಬಾಸ್​ ಆಗಲೀ, ಯಾವುದೇ ಒಂದು ಪ್ರಮೋಷನ್​ಗೆ ಆಗಲಿ ಪಿಆರ್​ ಏಜೆನ್ಸಿಗಳಿಗೆ ದುಡ್ಡು ಕೊಟ್ಟು ಪ್ರಮೋಷನ್​ ಮಾಡುವುದು ಮಾಮೂಲು. ಕೆಲವೊಮ್ಮೆ ಲಕ್ಷಾನುಗಟ್ಟಲೆ ಹಣವನ್ನು ಇದಕ್ಕೆ ಬಿಗ್​ಬಾಸ್​​ ಸ್ಪರ್ಧಿಗಳು ಸುರಿಯುವುದು ಇದೆ. ಕೆಲವೊಮ್ಮೆ ಈ ಪಿಆರ್​ ಏಜೆನ್ಸಿಗಳು ತಮ್ಮ ಸ್ಪರ್ಧಿಯ ಪ್ರಮೋಷನ್​ ಮಾಡುವುದು ಬಿಟ್ಟು, ಬೇರೆ ಸ್ಪರ್ಧಿಗಳ ತೆಜೋವಧೆ ಮಾಡುವಲ್ಲಿ ನಿರತ ಆಗಿರುವ ಬಗ್ಗೆ ಇದಾಗಲೇ ಹಲವು ಬಿಗ್​ಬಾಸ್​ ಸ್ಪರ್ಧಿಗಳು ಮಾತನಾಡಿದ್ದಾರೆ. ಪಿಆರ್​ ಏಜೆನ್ಸಿ ಮಾಡುವ ಪ್ರಮೋಷನ್​ ನೋಡಿ ನೋಡಿ ವೀಕ್ಷಕರ ಮನಸ್ಸಿನಲ್ಲಿ ಒಂದು ರೀತಿಯ ಬಿಂಬ ಉದ್ಭವಿಸಿ, ಅವರಿಗೇ ವೋಟ್​ ಮಾಡುವುದು ಮಾಮೂಲು. ಇದಕ್ಕಾಗಿಯೇ ಬಿಗ್​ಬಾಸ್​​ ಸೇರಿದಂತೆ ಹಲವಾರು ಷೋಗಳಲ್ಲಿ ಪಿಆರ್​ ಏಜೆನ್ಸಿ ಬಹುದೊಡ್ಡ ಪಾತ್ರ ವಹಿಸುತ್ತವೆ.

25
ಜನರ ಸೈಕಾಲಾಜಿ

ಒಬ್ಬರ ಹೆಸರನ್ನು ಸೋಷಿಯಲ್​ ಮೀಡಿಯಾದಲ್ಲಿ ಪದೇ ಪದೇ ನೋಡುತ್ತಿದ್ದರೆ, ಅವರ ಬಗ್ಗೆ ಅರಿವಿಲ್ಲದವರಿಗೂ ಇವರೇನೋ ತುಂಬಾ ಒಳ್ಳೆಯವರು ಎಂದೋ ಅಥವಾ ಇವರು ತುಂಬಾ ಕೆಟ್ಟವರು ಎಂದೇ ಮನಸ್ಸಿನಲ್ಲಿ ಮೂಡುವುದು ಮನುಷ್ಯನ ಸೈಕಾಲಾಜಿ. ಈ ನಿಟ್ಟಿನಲ್ಲಿ ಬಹುದೊಡ್ಡ ಪಾತ್ರ ಪಿಆರ್​ ಏಜೆನ್ಸಿದು. ಇದೇ ಕಾರಣಕ್ಕೆ ಬಿಗ್​ಬಾಸ್​ ಸ್ಪರ್ಧಿಗಳು ಅವರಿಗೆ ಸಿಕ್ಕಾಪಟ್ಟೆ ಹಣ ಸುರಿದು ಇಟ್ಟುಕೊಳ್ಳುವುದು ಇದೆ.

35
ವಿರುದ್ಧ ದಿಕ್ಕಿನಲ್ಲಿ ಧ್ರುವಂತ್​

ಆದರೆ, ಸೋಷಿಯಲ್​​ ಮೀಡಿಯಾನ್ನೂ ಕೂಡ ಆ್ಯಕ್ಟೀವ್​ ಮಾಡದೇ, ಪಿಆರ್​ ಏಜೆನ್ಸಿಯನ್ನೂ ಇಟ್ಟುಕೊಳ್ಳದೇ ಬಿಗ್​ಬಾಸ್​ ಧ್ರುವಂತ್​ ಬಿಗ್​ಬಾಸ್​ನಲ್ಲಿ ಆಡಿದ್ದರು. ಅದರ ಬಗ್ಗೆ ಇದೀಗ ಸತ್ಯವನ್ನು ಬಾಸ್​ ಟಿವಿಗೆ ನೀಡಿರುವ ಸಂದರ್ಶನದಲ್ಲಿ ರಿವೀಲ್​ ಮಾಡಿದ್ದಾರೆ. ಕೆಲವರಿಗೆ ಜೀವನದಲ್ಲಿ ಒಂದೊಂದು ಆದರ್ಶವಿರುತ್ತದೆ, ಎಥಿಕ್ಸ್​ ಇರುತ್ತವೆ. ಇಂಥ ಆದರ್ಶಗಳೇ ಕೆಲವೊಮ್ಮೆ ಮುಳ್ಳಾಗುವುದು ಇದೆ ಎನ್ನುತ್ತಲೇ ತಮ್ಮ ಎಥಿಕ್ಸ್​ ಬಗ್ಗೆ ಮಾತನಾಡಿದ್ದಾರೆ ಧ್ರುವಂತ್​.

45
ಫೇಕ್​ ಪಿಆರ್​

ನನಗೆ ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಫ್ಯಾನ್ಸ್ ಇದ್ದಾರೆ. ಅವರಿಗೆ ಇಷ್ಟವಾದರೆ ವೋಟ್​ ಹಾಕ್ತಾರೆ. ಪಿಆರ್​ ಏಜೆನ್ಸಿ ಇಟ್ಟುಕೊಂಡು ಫೇಕ್​ ಆಗಿ ಮತ ಗಳಿಸುವುದು ನನಗೆ ಬೇಕಿರಲಿಲ್ಲ. ಹಾಗೆ ನೋಡೋದಾದ್ರೆ ನನ್ನ ಇನ್​ಸ್ಟಾಗ್ರಾಮ್​ ಪ್ರೈವೇಟ್​ ಆಗಿತ್ತು, ಅದನ್ನು ಪಬ್ಲಿಕ್​ ಕೂಡ ಮಾಡಿರಲಿಲ್ಲ. ಕೊನೆಗೆ ಸಹೋದರ ಹೇಳಿದ್ದಕ್ಕೆ ಪಬ್ಲಿಕ್​ ಮಾಡಿದ್ದನೇ ವಿನಾ ನನ್ನನ್ನು ಪ್ರಮೋಟ್​ ಮಾಡೋಕೆ ಯಾರನ್ನೂ ನೇಮಿಸಿಕೊಂಡಿರಲಿಲ್ಲ ಎಂದಿದ್ದಾರೆ.

55
ನನಗೆ ಎಥಿಕ್ಸ್ ಇದೆ

ನನಗೆ ನನ್ನದೇ ಆದ ಎಥಿಕ್ಸ್​ ಇದೆ. ಜನರು ಇಷ್ಟಪಟ್ಟರೆ ವೋಟ್​ ಹಾಕ್ತಾರೆ. ಬೇರೆಯವರನ್ನು ತುಳಿದು, ಅವರ ಬಗ್ಗೆ ಅಪಪ್ರಚಾರ ಮಾಡಿ, ನನ್ನನ್ನು ಪ್ರಮೋಟ್​ ಮಾಡುವ ಪಿಆರ್ ಏಜೆನ್ಸಿಗಳು ನನಗೆ ಇಷ್ಟವಿರಲಿಲ್ಲ. ನನಗೆ ಅರ್ಹತೆ ಇದ್ದರೆ, ನನ್ನನ್ನು ಇಷ್ಟಪಟ್ಟು ವೋಟ್​ ಹಾಕ್ತಾರೆ, ಇಲ್ಲದಿದ್ದರೆ ಇಲ್ಲ. ಸಿಗುವ ವೋಟ್​ಗಳು ಫೇಕ್​ ಅಲ್ಲ ಎನ್ನುವ ಸಮಾಧಾನ ಇರುತ್ತದೆ ಅಷ್ಟೇ ಎಂದಿದ್ದಾರೆ ಧ್ರುವಂತ್​.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories