ಇಲ್ಲಿ ಎಷ್ಟು ನೀಚರಿದ್ದಾರೆ ಎಂದ್ರೆ- ಕನ್ನಡ ಸೀರಿಯಲ್​ ಇಂಡಸ್ಟ್ರಿಯ ಕರಾಳ ಮುಖ ಬಿಚ್ಚಿಟ್ಟ Bigg Boss ಧ್ರುವಂತ್​

Published : May 29, 2026, 07:36 PM IST

ಬಿಗ್ ಬಾಸ್ ಖ್ಯಾತಿಯ ಧ್ರುವಂತ್, ಕನ್ನಡ ಸೀರಿಯಲ್ ಇಂಡಸ್ಟ್ರಿಯ ಕರಾಳ ಮುಖವನ್ನು ಬಯಲು ಮಾಡಿದ್ದಾರೆ. ಪರಭಾಷಾ ಸೀರಿಯಲ್‌ಗಳಲ್ಲಿ ಯಶಸ್ಸು ಕಾಣುತ್ತಿರುವ ಕನ್ನಡ ಕಲಾವಿದರ ಬೆಳವಣಿಗೆಯನ್ನು ಸಹಿಸದೆ, ಕನ್ನಡ ಇಂಡಸ್ಟ್ರಿಯ ಕೆಲವರು ಅವರ ಅವಕಾಶಗಳನ್ನು ಹಾಳುಮಾಡಲು ಯತ್ನಿಸುತ್ತಿದ್ದಾರೆ ಎಂದು  ಆರೋಪ ಮಾಡಿದ್ದಾರೆ

PREV
15
ಬಿಗ್​ಬಾಸ್​ ಮೂಲಕ ಫೇಮಸ್​

ಬಿಗ್​ಬಾಸ್​ ಮೂಲಕ ಫೇಮಸ್​ ಆದವರು ಧ್ರುವಂತ್​ (Bigg Boss Dhruvanth). ರಕ್ಷಿತಾ ಶೆಟ್ಟಿ ಜೊತೆಗಿನ ಜಗಳದಿಂದಲೇ ಇವರಿಬ್ಬರ ಜೋಡಿ ವೀಕ್ಷಕರಿಗೆ ಸಕತ್​ ಮಜಾಕೊಟ್ಟಿದ್ದಂತೂ ನಿಜ. ಇದೀಗ ಧ್ರುವಂತ್​ ಅವರು ಕನ್ನಡ ಸೀರಿಯಲ್​ ಇಂಡಸ್ಟ್ರಿಯ ಕರಾಳ ಮುಖವನ್ನು ತೆರೆದಿಟ್ಟಿದ್ದಾರೆ.

25
10ರಲ್ಲಿ 8 ನಮ್ಮವರೇ ಅಲ್ಲಿ

ಕನ್ನಡದ ಹೆಚ್ಚಿನ ಸೀರಿಯಲ್​ ನಟ-ನಟಿಯರು ತೆಲುಗು, ತಮಿಳು ಇಂಡಸ್ಟ್ರಿಗೆ ಹೋಗುತ್ತಿರುವ ಬಗ್ಗೆ ಬಾಸ್​ ಟಿವಿ ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಧ್ರುವಂತ್​ ಅವರು, ನೀವು ಇಂದು ತಮಿಳು ಮತ್ತು ತೆಲುಗು ಸೀರಿಯಲ್​ನ 10 ಧಾರಾವಾಹಿ ತೆಗೆದುಕೊಂಡರೆ ಅದರಲ್ಲಿ ಎಂಟರಲ್ಲಿ ಕನ್ನಡವರೇ ಇರುತ್ತಾರೆ ಎಂದಿದ್ದಾರೆ.

35
ಎಲ್ಲರೂ ಸೆಟ್ಲ್​​ ಆಗಿದ್ದಾರೆ

ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಎಷ್ಟು ಜನ ಸೆಟ್ಲ್​ ಆಗಿದ್ದಾರೆ ಹೇಳಿ, ಆದ್ರೆ ತಮಿಳು, ತೆಲುಗುಗೆ ಹೋದವರು, ಒಳ್ಳೆಯ ಮನೆ, ಕಾರು, ಮದುವೆ ಎಲ್ಲಾ ಆಗಿ ಸೆಟ್ಲ್​ ಆಗಿದ್ದಾರೆ ಎಂದಿದ್ದಾರೆ.

45
ನಮ್ಮಲ್ಲಿರುವ ನೀಚರು

ನಮ್ಮ ಸೀರಿಯಲ್​ ಇಂಡಸ್ಟ್ರಿಯವರು ಎಷ್ಟು ನೀಚರು ಎಂದರೆ, ಇಲ್ಲೊಂದು ಗುಂಪಿದೆ. ಅವರು ತಮಿಳು ಮತ್ತು ತೆಲಗು ಪ್ರೊಡ್ಯೂಸರ್​ ಮತ್ತು ಡೈರೆಕ್ಟರ್ ಅಸೋಸಿಯೇಷನ್​ಗೆ ಹೋಗಿ ಇಲ್ಲಿನ ನಟರಿಗೆ ನೀವು ಅಷ್ಟೆಲ್ಲಾ ಸೌಲಭ್ಯ ಕೊಡಬೇಡಿ, ನಮಗೆ ಇಲ್ಲಿ ಕಷ್ಟ ಆಗುತ್ತಿದೆ ಎನ್ನುತ್ತಿದ್ದಾರಂತೆ. ಅಷ್ಟು ನೀಚರು ಇಲ್ಲಿದ್ದಾರೆ ಎಂದು ಕಿಡಿ ಕಾರಿದ್ದಾರೆ ಧ್ರುವಂತ್​.

55
ಜನರಿಗೆ ಗೊತ್ತಾಗಲ್ಲ

ಅಲ್ಲಿ ಮನೆ ಹಾಳು ಮಾಡಲು ಮಾಡುವ ಕೆಲ್ಸ ಮಾಡುತ್ತಿದ್ದಾರೆ ಇಲ್ಲಿಯವರು. ಆದರೆ ಜನರಿಗೆ ಇವೆಲ್ಲಾ ಗೊತ್ತಾಗಲ್ಲ. ಅಲ್ಲಿ ಒಳ್ಳೆಯ ಭವಿಷ್ಯ ಸಿಕ್ಕಿರುತ್ತೆ ಎಂದು ಕಲಾವಿದರು ಹೋಗ್ತಾರೆ. ಆದರೆ ಜನರು ಬೆಳೆಯೋಕೆ ಕನ್ನಡ ಬೇಕಿತ್ತು, ಈಗ ಪರಭಾಷೆಗೆ ಹೋಗಿದ್ದಾರೆ ಅಂತಾರೆ. ಆದರೆ ಇಲ್ಲಿ ಮಾಡ್ತಿರೋ ನೀಚತನ ಅವರಿಗೆ ಗೊತ್ತಾಗತ್ತಾ ಎಂದು ಪ್ರಶ್ನಿಸಿದ್ದಾರೆ ಧ್ರುವಂತ್​

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories