Amruthadhaare: ಭೂಮಿಕಾಳ ನಿರ್ಧಾರ, ಮಿಂಚು ಮನದಲ್ಲಿ ಬಿರುಗಾಳಿ- ವೀಕ್ಷಕರ ಭಾರಿ ಆಕ್ರೋಶ

Published : May 29, 2026, 02:48 PM IST

ಮಹಿಮಾಳ ಮಗುವಿನ ಆಸೆಗಾಗಿ, ಭೂಮಿಕಾ ಮತ್ತು ಗೌತಮ್ ಸಂದಿಗ್ಧತೆಗೆ ಸಿಲುಕಿದ್ದಾರೆ. ಅಂತಿಮವಾಗಿ, ಭೂಮಿಕಾ ಮಿಂಚುವನ್ನು ಮಹಿಮಾ ಬಳಿ ಕಳುಹಿಸಲು ನಿರ್ಧರಿಸಿದ್ದು, ಈ ನಿರ್ಧಾರದಿಂದ ಮಿಂಚು ಆಘಾತಕ್ಕೊಳಗಾಗಿದ್ದಾಳೆ ಮತ್ತು ವೀಕ್ಷಕರು ಭೂಮಿಕಾ ವಿರುದ್ಧ ಗರಂ ಆಗಿದ್ದಾರೆ.

PREV
16
ಮಹಿಮಾ ಸಂಕಷ್ಟ

ಅಮೃತಧಾರೆ ಸೀರಿಯಲ್​ (Amruthadhaare Serial)ನಲ್ಲಿ ಸದ್ಯ ಭೂಮಿಕಾ ಮತ್ತು ಗೌತಮ್​ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಮಹಿಮಾ ಮಗುವಿಗಾಗಿ ಹಾತೊರೆಯುತ್ತಿದ್ದರೆ, ಭೂಮಿಕಾ ಅಮ್ಮ-ಅಪ್ಪ ಮಿಂಚುವನ್ನು ಕಳುಹಿಸಿಕೊಡುವಂತೆ ಕೇಳಿದ್ದಾರೆ.

26
ನುಂಗಲಾಗದ ತುತ್ತು

ಮಿಂಚು ತಮ್ಮ ಸ್ವಂತ ಮಗಳು ಎನ್ನುವುದು ತಿಳಿಯದಿದ್ದರೂ, ಅವಳನ್ನು ಸ್ವಂತ ಮಗಳಂತೆಯೇ ನೋಡುತ್ತಿರುವ ಗೌತಮ್​ ಮತ್ತು ಭೂಮಿಕಾಗೆ ಇದು ನುಂಗಲಾಗದ ತುತ್ತಾಗಿದೆ. ಆದರೂ ಮಹಿಮಾಳ ಹಟದಿಂದ ಒಂದು ನಿರ್ಧಾರಕ್ಕೆ ಬರಬೇಕಿದೆ.

36
ಅವಳೇನು ಗೊಂಬೆನಾ

ಒಂದು ಹಂತದಲ್ಲಿ ಭೂಮಿಕಾ, ಮಿಂಚು ಬಳಿ ಮಾತನಾಡಿ ಅವಳನ್ನು ಸ್ವಲ್ಪ ದಿನದ ಮಟ್ಟಿಗೆ ಮಹಿಮಾ ಬಳಿ ಕಳಿಸೋಣ. ಅವಳು ಗರ್ಭಿಣಿಯಾದ ಬಳಿಕ ವಾಪಸ್​ ಕರೆದುಕೊಂಡು ಬರೋಣ ಎಂದಾಗ ಗೌತಮ್​, ಹಾಗೆ ಮಾಡಲು ಮಿಂಚು ಏನು ಗೊಂಬೆನಾ, ಬೇಕಾದಾಗ ಹೋಗು, ಬೇಡವಾದಾಗ ಬರಲು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾನೆ.

46
ಮಿಂಚುವನ್ನು ಕಳಿಸುವ ನಿರ್ಧಾರ

ಆದರೆ, ಮಹಿಮಾಳ ನೋವಿನ ಎದುರು ಭೂಮಿಕಾ ಏನೋ ಒಂದು ನಿರ್ಧಾರ ಮಾಡಲೇಬೇಕಿದೆ.ಕೊನೆಗೆ ಮಿಂಚುವನ್ನು ಕಳುಹಿಸುವ ನಿರ್ಧಾರ ಮಾಡಿದ್ದಾಳೆ.

56
ಮಿಂಚುಗೆ ಆಘಾತ

ಮಿಂಚುವನ್ನು ಕರೆದು ಮಹಿಮಾ ಆಂಟಿಯ ಸಮಸ್ಯೆ ನಿನಗೆ ಗೊತ್ತಲ್ವಾ, ಸ್ವಲ್ಪ ದಿನ ಅಲ್ಲಿ ಹೋಗಿ ಇರುವೆಯಾ ಎಂದು ಅಳುಕುತ್ತಲೇ ಮಿಂಚುವನ್ನು ಕೇಳಿದ್ದಾಳೆ. ಇದರಿಂದ ಮಿಂಚು ಆಘಾತಗೊಂಡಿದ್ದಾಳೆ.

66
ಭೂಮಿಕಾ ಮೇಲೆ ಗರಂ

ಸದ್ಯ ಭೂಮಿಕಾಗೆ ಬೇರೆ ದಾರಿ ತೋರದೇ ಹಾಗೆ ಮಾಡಿದ್ದು ನಿಜವಾದರೂ, ಮಿಂಚುವಿನ ಸ್ಥಾನದಲ್ಲಿ ಇರುವ ಮಕ್ಕಳ ಮನಸ್ಥಿತಿ, ಅದರಲ್ಲಿಯೂ ತಾನು ಸ್ವಂತ ಮಗಳು ಅಲ್ಲ ಎಂದು ಗೊತ್ತಿರುವಾಗ, ಹೀಗೆಲ್ಲಾ ಭೂಮಿಕಾ ಕೇಳಿದರೆ ಆಕೆಯ ಮನಸ್ಸಿನಲ್ಲಿ ಯಾವ ರೀತಿ ಆಗಬಹುದು ಎಂದು ಕೇಳುತ್ತಿರುವ ವೀಕ್ಷಕರು, ಭೂಮಿಕಾಳ ವಿರುದ್ಧ ಗರಂ ಆಗಿದ್ದಾರೆ. ಆಕೆ ಹೀಗೆ ಮಾಡುವುದು ಸರಿಯಲ್ಲ, ಮಿಂಚುವಿನ ಮುಖ ನೋಡಲು ಆಗ್ತಿಲ್ಲ. ಸ್ವಂತ ಮಗು ಎನ್ನೋದು ಗೊತ್ತಾಗಿದ್ದರೆ ಹೀಗೆ ಮಾಡುತ್ತಿದ್ದಳಾ ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories