ನಾಲ್ಕು ರೂಮಿನ ಮನೆ ಬೇಕು 30 ಸಾವಿರ ಅಷ್ಟೇ ಕೊಡೋದು; ಬೀದಿಗಿಳಿದ ಬಿಗ್ ಬಾಸ್ ಧನುಶ್ರೀ

Published : Jun 04, 2024, 03:26 PM IST

ಮನೆ ಬೇಕು ಎಂದು ಬೀದಿ ಬೀದಿಗಳಲ್ಲಿ ಅಲೆದಾಡಿದ ಧನುಶ್ರೀ. ವಿಡಿಯೋ ಮೂಲಕ ಮನವಿ ಮಾಡಿಕೊಂಡ ಸುಂದರಿ.... 

PREV
17
 ನಾಲ್ಕು ರೂಮಿನ ಮನೆ ಬೇಕು 30 ಸಾವಿರ ಅಷ್ಟೇ ಕೊಡೋದು; ಬೀದಿಗಿಳಿದ ಬಿಗ್ ಬಾಸ್ ಧನುಶ್ರೀ

ಸೋಷಿಯಲ್ ಮೀಡಿಯಾ ಸ್ಟಾರ್, ಯೂಟ್ಯೂಬ್ ಕ್ವೀನ್ ಹಾಗೂ ಬಿಗ್ ಬಾಸ್ ಸ್ಪರ್ಧಿ ಧನುಶ್ರೀ ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. 

27

 ಬಿಗ್ ಬಾಸ್‌ನಲ್ಲಿ ನೇಮ್ ಆಂಡ್ ಫೇಮ್ ಬಂದ ತಕ್ಷಣ ಧನುಶ್ರೀ ಜನಪ್ರಿಯತೆ ಹೆಚ್ಚಾಗಿತ್ತು. ಸದ್ಯ ಮಂತ್ರಿ ಮಾಲ್‌ನಲ್ಲಿ ನೇಲ್‌ಪೇಂಟ್‌ ಅಂಗಡಿ ಹೊಂದಿರುವ ಧನು ಮನೆ ಹುಡುಕುತ್ತಿದ್ದಾರೆ. 

37

ಅಮ್ಮ, ಅಣ್ಣ ಮತ್ತು ಅತ್ತಿಗೆ ಜೊತೆ ಮೂರ್ನಾಲ್ಕು ಮನೆಗಳನ್ನು ನೋಡಿದ್ದಾರೆ. ಚಿಕ್ಕ ಮನೆ ಬೇಡ, ಮಲ್ಲೇಶ್ವರ ಸುತ್ತಲು ಇರಬೇಕು, ನಾಲ್ಕು ರೂಮ್ ಇರಬೇಕು...ಅಬ್ಬಬ್ಬಾ ಒಂದೆರಡಲ್ಲ ಡಿಮ್ಯಾಂಡ್.

47

ನಾಲ್ಕು ದೊಡ್ಡ ರೂಮ್‌ಗಳು ಇರುವ ಮನೆ ನೋಡಿದ ಧನುಶ್ರೀಗೆ 70 ಸಾವಿರ ರೂಪಾಯಿಗಳ ಬಾಡಿಗೆ ಹೇಳಿದ್ದಾರೆ. ಹೀಗಾಗಿ ನನಗೆ ಕೊಡಲು 30 ಸಾವಿರ ಅಷ್ಟೇ ಆಗೋದು ಎಂದು ಧನು ಹೇಳಿದ್ದಾರೆ. 

57

ಧನುಶ್ರೀ ಮನೆಯಲ್ಲಿ ಜರ್ಮನ್ ಶಪರ್ಡ್‌ ಸಾಕಿರುವ ಕಾರಣ...ನಾಯಿಗಳನ್ನು ಸಾಕಲು ಅನುಪತಿ ನೀಡುವ ಮನೆಗಳನ್ನು ಹುಡುಕುತ್ತಿದ್ದಾರೆ. ಈ ಶರತಿನಿಂದ ಇಷ್ಟವಾದ ಮನೆ ರಿಜೆಕ್ಟ್ ಮಾಡಿದ್ದಾರೆ. 

67

ದಯವಿಟ್ಟು ಮನೆ ಗೊತ್ತಿದ್ದರೆ ನನಗೆ ಮೆಸೇಜ್ ಮಾಡಿ ನಮಗೆ ಮನೆ ತುಂಬಾ ಅಗತ್ಯವಿದೆ ಎಂದು ಧನುಶ್ರೀ ತಮ್ಮ ಯೂಟ್ಯೂಬ್ ವಿಡಿಯೋದ ಕೊನೆಯಲ್ಲಿ ಮನೆ ಮಾಡಿಕೊಂಡಿದ್ದಾರೆ. 

77

ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ನೀನು ಮಾಡುವ ಶೋಕಿಗೆ ಐಷಾರಾಮಿ ಅಪಾರ್ಟ್‌ಮೆಂಟ್ ತೋರಿಸಿದರೂ ಕಡಿಮೆನೇ ಅಂತ ಡೈಲಾಗ್ ಹೊಡೆಯುತ್ತಾಳೆ ಏನ್ ಕಡಿಮೆ ಇಲ್ಲ ಎಂದು ನೆಟ್ಟಿಗರು ಟೀಕೆ ಮಾಡಿದ್ದಾರೆ. 

Read more Photos on
click me!

Recommended Stories