ಮಹಾನಟಿ ಪ್ರಿಯಾಂಕಾಗೆ ಮುಂಗಾರುಮಳೆ ಸ್ಟೈಲಲ್ಲಿ ಪ್ರಪೋಸ್ ಮಾಡಿದ ವಿಶ್ವ, ಜಾನು ಬೇಡ್ವ ಕೇಳ್ತಿದ್ದಾರೆ ಫ್ಯಾನ್ಸ್!

First Published | Jun 3, 2024, 4:32 PM IST

ಲಕ್ಷ್ಮೀ ನಿವಾಸ ಸೀರಿಯಲ್ ನ ವಿಶ್ವ ಖ್ಯಾತಿಯ ಭವಿಷ್ ಗೌಡ ಮಹಾನಟಿಯಲ್ಲಿ ಮಿಂಚಿದ್ದು, ಅವರ ಸಖತ್ ಡೈಲಾಗ್, ನಟನೆಗೆ ಫ್ಯಾನ್ಸ್ ವಾರೆ ವಾ ಅಂದಿದ್ದಾರೆ. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಲಕ್ಷ್ಮೀ ನಿವಾಸದಲ್ಲಿ ವಿಶ್ವ ಪಾತ್ರದಲ್ಲಿ ನಟಿಸುತ್ತಿರುವ ಭವಿಷ್ ಗೌಡ (Bhavish Gowda), ಮಹಾನಟಿಯಲ್ಲೂ ನಟಿಯರ ಜೊತೆ ನಟಿಸಿದ್ದು, ಅಲ್ಲಿ ಅದ್ಭುತ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. 
 

ಮಹಾನಟಿ (Mahanati) ರಿಯಾಲಿಟಿ ಶೋನಲ್ಲಿ ಪ್ರತಿಯೊಂದು ಎಪಿಸೋಡ್‌ನಲ್ಲೂ ಮಹಾನಟಿಯರ ಜೊತೆ ಪಾತ್ರ ನಿರ್ವಹಿಸೋಕೆ ಝೀ ಕನ್ನಡದ ಸೀರಿಯಲ್ ನಟರನ್ನು ಕರೆಸುತ್ತಾರೆ, ಈ ಬಾರಿ ಪಾತ್ರವೊಂದಕ್ಕೆ ವಿಶ್ವ ಖ್ಯಾತಿಯ ಭವಿಷ್ ಗೌಡ ಭಾಗವಹಿಸಿದ್ದರು. 
 

Tap to resize

ಈ ಕಾರ್ಯಕ್ರಮದಲ್ಲಿ ನಿರೂಪಕಿ ಅನುಶ್ರೀ (Anushree) ವಿಶ್ವ ಅವರಲ್ಲಿ ನಮ್ಮ ಮಹಾನಟಿಯರಲ್ಲಿ ನಿಮಗ್ಯಾರು ಇಷ್ಟವೆಂದು ಕೇಳಿದ್ದರು. ವಿಶ್ವ ಪ್ರಿಯಾಂಕ ಇಷ್ಟ, ಅವರು ತುಂಬಾ ಚೆನ್ನಾಗಿದ್ದಾರೆ ಅಂದಿದ್ದಾರೆ. ಹಾಗಾಗಿ ಪ್ರಿಯಾಂಕ ಅವರನ್ನು ವೇದಿಕೆ ಮೇಲೆ ಕರೆದು ಇಬ್ಬರು ಜೊತೆಯಾಗಿ ನಟಿಸುವಂತೆ ಮಾಡಲಾಗಿತ್ತು. 
 

ವಿಶ್ವ ಅವರು ಮುಂಗಾರು ಮಳೆಯ (Mungaru Male) ಮಳೆ ಡೈಲಾಗ್ ಹೇಳಿ ಪ್ರಿಯಾಂಕ ಅವರಿಗೆ ಬಲು ಸೊಗಸಾಗಿ ಪ್ರಪೋಸ್ ಮಾಡಿದ್ದು, ವಿಶ್ವ ಅವರ ಡೈಲಾಗ್ ಡೆಲಿವರಿ, ನಟನೆ ನೋಡಿ ಫ್ಯಾನ್ಸ್ ವಾರೆ ವಾ ಅಂದಿದ್ದಾರೆ. ಇವರೊಬ್ಬ ಅದ್ಭುತ ನಟ ಎಂದು ಹಾಡಿ ಹೊಗಳಿದ್ದಾರೆ. 
 

ಮಹಾನಟಿ ವಿಡೀಯೋ ನೋಡಿ ಕಾಮೆಂಟ್ ಮಾಡಿರೋ ವೀಕ್ಷಕರು ವಿಶ್ವ ಅವರಿಗೆ ಒಳ್ಳೆಯ ಭವಿಷ್ಯ ಇದೆ ಮುಂದೆ ಒಂದು ದಿನ ದೊಡ್ಡ ಹೀರೋ (ನಟ) ಆಗುವ ಸಾಧ್ಯತೆ ಇದೆ. ವಿಶ್ವ ಸೇಮ್ ಗಣೇಶ್ ಸರ್ ಥರಾನೆ ಡೈಲಾಗ್ ಹೇಳಿದ್ರು, ವಿಶ್ವನ ಅಭಿನಯ ನಮಗೆ ಇಷ್ಟ. ಸೂಪರ್ ವಿಶ್ವ ಎಂದು ಕಾಮೆಂಟ್ ಮಾಡಿದ್ದಾರೆ. 
 

ಇನ್ನೂ ಕೆಲವರು ಇಷ್ಟೊಂದು ಟ್ಯಾಲೆಂಟೆಡ್ ನಟನಾಗಿರುವ (Talented actor) ಭವಿಷ್ ಅವರನ್ನು ಸೈಡ್ ಆಕ್ಟರ್ ಮಾಡಿದ್ದೀರಲ್ಲಾ? ಇವರೊಬ್ಬ ಅದ್ಭುತ ಕಲಾವಿದ ಎಂದಿದ್ದಾರೆ. ವಿಶ್ವನ ಕಣ್ಣುಗಳೇ ಎಲ್ಲವನ್ನೂ ಹೇಳಿಬಿಟ್ಟಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 
 

ಇನ್ನು  ಲಕ್ಷ್ಮೀ ನಿವಾಸದಲ್ಲಿ (Lakshmi Nivasa) ಜಾಹ್ನವಿಯಿಂದ ದೂರವಾಗಿರುವ ವಿಶ್ವ ಆಕೆಯ ನೆನಪಲ್ಲಿ, ಕುಡಿದು ಜೀವನ ಹಾಳು ಮಾಡಿ ಕೊಳ್ತಿದ್ದಾನೆ. ಆದರೆ ಇಲ್ಲಿ ಇನ್ನೊಬ್ಬ ಹುಡುಗಿಗೆ ಪ್ರಮೋಸ್ ಮಾಡೋದು ನೋಡಿ, ಏನು ವಿಶ್ವ ಜಾನು ಬೇಡ್ವಾ ಎಂದಿದ್ದಾರೆ. ಮತ್ತೊಬ್ಬರು ವಿಶ್ವ ಆಲ್ಲಿ ಜಾನೂ ನ ಬಿಟ್ಕೊಟ್ಬಿಟ್ಟೆ. ಪಾಪ ನಮ್ ಜಾನೂ ಆ ಸೈಕೋ ಹತ್ರ ಸಿಕ್ಕಾಕೊಂಡು ನರಳುತ್ತಾ ಇದಾಳೆ...ಬೇಗ ಹೋಗಿ ಕಾಪಾಡು ಎಂದು ಸಲಹೆ ಕೂಡ ಕೊಟ್ಟಿದ್ದಾರೆ. 
 

Latest Videos

click me!