ಸೀತಾ‌ಮಾತೆಗೆ ಮೀಸಲಾಗಿರುವ ಪ್ರಪಂಚದ ಏಕೈಕ ದೇಗುಲದಲ್ಲಿ ಒಂದಾದ್ರು ಸಿದ್ಧು - ಭಾವನಾ

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ಧು -ಭಾವನಾ ಹಾಗೂ ಜಾಹ್ನವಿ - ಜಯಂತ್ ಶ್ರೀಲಂಕಾಕ್ಕೆ ತೆರಳಿದ್ದು, ಅಲ್ಲಿ ಎಲ್ಲಾ ಕೋಪ ಮರೆತು ಸಿದ್ಧು ಮತ್ತು ಭಾವನಾ ಸೀತಾಮಾತೆಯ ಮಂದಿರದಲ್ಲಿ ಒಂದಾಗಿದ್ದಾರೆ. 
 

Bhavana and Siddu in Seetha Matha Mandir Srilanka pav

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ(Lakshmi Nivasa)  ಸದ್ಯ ಇಂಟ್ರೆಸ್ಟಿಂಗ್ ಆಗಿರುವ ಎಪಿಸೋಡ್ ಗಳು ಪ್ರಸಾರವಾಗುತ್ತಿವೆ. ಸಿದ್ದೇ ಗೌಡ್ರು ಮತ್ತು ಭಾವನಾರನ್ನು ಜವರೇ ಗೌಡರು ಪ್ಲ್ಯಾನ್ ಮಾಡಿ ಶ್ರೀಲಂಕಾಗೆ ಹನಿಮೂನ್ ಗಾಗಿ ಕಳುಹಿಸಿದ್ದಾರೆ. ಇನ್ನೊಂದೆಡೆ ಜಾಹ್ನವಿ ಮನಸ್ಸು ಸಮಾಧಾನವಾಗಲಿ ಎಂದು ಜಯಂತ್ ಆಕೆಯನ್ನೂ ಸಹ ಶ್ರೀಲಂಕಾಗೆ ಕರೆದೊಯ್ದಿದ್ದಾನೆ. 

ಸದ್ಯ ಸಿದ್ಧು ಮತ್ತು ಭಾವನಾ ನಡುವಿನ ಮುನಿಸು ದೂರವಾಗಿ, ಭಾವನಾ ಸಿದ್ಧುಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾಳೆ. ಹೊಟೇಲ್ ರೂಮ್ ನಿಂದ ಹೊರಗೆ ಹೋಗೋದಕ್ಕೆ ರೆಡಿಯಾಗಿರುವ ಭಾವನಾ ತನ್ನ ಕುತ್ತಿಗೆಯಲ್ಲಿ ತಾಳಿ ಇಲ್ಲದ್ದನ್ನು ನೋಡಿ ಶಾಕ್ ಆಗ್ತಾಳೆ. ಆಮೇಲೆ ಸಿದ್ಧು -ಭಾವನಾ ಇಬ್ಬರೂ ಸೇರಿ ತಾಳಿಗಾಗಿ ಹುಡುಕಾಡುತ್ತಾರೆ. 
 


ಕೊನೆಗೆ ಸಿದ್ಧುಗೆ ತಾಳಿ ಸಿಗುತ್ತೆ, ಅದನ್ನು ಭಾವನಾಗೆ ಕೊಡುತ್ತಾ, ಈ ತಾಳಿ ಮೇಲೆ ನಿಮ್ಮ ಹೆಸರೇ ಬರೆದಿದೆ ಅದಕ್ಕಾಗಿ ನಿಮಗೆ ಸಿಕ್ಕಿದೆ ಎನ್ನುತ್ತಾನೆ. ಅದಕ್ಕೆ ಭಾವನಾ ಸಿದ್ಧು ಅವ್ರೇ ಈ ತಾಳಿನ ನೀವೇ ಹಾಕಿ ಎನ್ನುತ್ತಾಳೆ. ಇದರಿಂದ ಖುಷಿಯಾಗುವ ಸಿದ್ಧು, ತನ್ನ ಕೈಯಾರೆ ತಾಳಿಯನ್ನು ಭಾವನಾ ಕತ್ತಿಗೆ ಹಾಕುತ್ತಾನೆ. 
 

ಈ ಎಲ್ಲಾ ಘಟನೆಗಳು ನಡೆಯೋದು, ಶ್ರೀಲಂಕಾದಲ್ಲಿರುವ ಸೀತಾ ದೇವಸ್ಥಾನದಲ್ಲಿ. ಇದು ಪ್ರಪಂಚದಲ್ಲೇ ಸೀತಾಮಾತೆಗಾಗಿ ನಿರ್ಮಾಣವಾಗಿರುವ ಏಕೈಕ ದೇಗುಲ. ಅಲ್ಲಿ ಹನುಮಂತನ ಪಾದದ ಗುರುತು ಕೂಡ ಇರುತ್ತೆ, ಅಷ್ಟೇ ಅಲ್ಲ ಸೀತೆಯನ್ನು ರಾವಣ ಅಪಹರಿಸಿ, ತಂದು ಕೂಡು ಹಾಕಿದ ಅಶೋಕವನವನ್ನು ಸಹ ಸಿದ್ಧೇ ಗೌಡ್ರು ಭಾವನಾಗೆ ತೋರಿಸುತ್ತಾರೆ. ಸೀತಾ ಸನ್ನಿಧಿಯಲ್ಲಿ ಭಾವನಾ- ಸಿದ್ದೇಗೌಡ್ರು ಒಂದಾಗ್ತಿದ್ದಾರೆ. ಅಶೋಕ ವನದಲ್ಲಿ ಪ್ರೀತಿಯ ಹೂವು ಅರಳುತ್ತಾ ಇದೆ. 
 

ಶ್ರೀಲಂಕಾದಲ್ಲಿ ಸೀತಾ ಅಮ್ಮನ್ ದೇವಾಲಯವಿದೆ (Seetha Amman Temple) . ಇದು ಸೀತಾ ಅಮ್ಮನ್ ಕೋವಿಲ್ ಎಂಬ ಹೆಸರಿನಿಂದ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಪುರಾಣದ ಪ್ರಕಾರ, ಸೀತಾ ಎಲಿಯಾ ಎಂಬುದು ರಾವಣನು ಸೀತೆಯನ್ನು ಸೆರೆಯಲ್ಲಿಟ್ಟ ಸ್ಥಳವಾಗಿದೆ. ಈ ಸ್ಥಳದ ವಿಶೇಷವೆಂದರೆ ಇಲ್ಲಿ ಲಕ್ಷಾಂತರ ಅಶೋಕ ವಾಟಿಕ ಮರಗಳಿವೆ.  
 

ಸೀತಾ ದೇವಾಲಯವನ್ನು ಸೀತಾ ಎಲಿಯಾ ಎಂದೂ ಕರೆಯುತ್ತಾರೆ. ಈ ದೇವಾಲಯದಲ್ಲಿರುವ ರಾಮ, ಲಕ್ಷ್ಮಣ ಮತ್ತು ಸೀತೆಯ ವಿಗ್ರಹಗಳು ಸುಮಾರು 5000 ವರ್ಷಗಳಷ್ಟು ಹಳೆಯವು ಎನ್ನುವ ನಂಬಿಕೆ ಇದೆ. ಸೀತಾ ಮಾತೆಯನ್ನು ಬಂಧಿಯಾಗಿರಿಸಿದ್ದ 5 ಸ್ಥಳಗಳಲ್ಲಿ ಇದೂ ಒಂದು. ಈ ದೇವಾಲಯದ ಮುಂದೆ ಒಂದು ಪರ್ವತವಿದೆ, ಅಲ್ಲಿ ರಾವಣನ ಅರಮನೆ (Palace of Ravan) ಇದೆ. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಹನುಮಂತನೆಂದು ನಂಬಲಾದ ಬೃಹತ್ ಹೆಜ್ಜೆಗುರುತುಗಳು.

ಹಿಂದೂ ಪುರಾಣಗಳಲ್ಲಿ ಅಶೋಕ ವಾಟಿಕ ಎಂದು ಕರೆಯಲ್ಪಡುವ ಸ್ಥಳವೇ ಸೀತಾ ಎಲಿಯಾ. ಸೀತಾ ಮಾತೆಯನ್ನು ಹುಡುಕುವಾಗ, ಹನುಮಂತನು ಮೊದಲು ಶ್ರೀಲಂಕಾದ ಮಣ್ಣಿನಲ್ಲಿ ಕಾಲಿಟ್ಟದ್ದು ಇದೇ ಸ್ಥಳದಲ್ಲಿ. ಇದಾದ ನಂತರ, ಹನುಮಂತ ಉಂಗುರವನ್ನು ತಾಯಿ ಸೀತೆಗೆ ತೋರಿಸಿದರು. ಇದೆಲ್ಲಾ ನಡೆದ ಸ್ಥಳ ಇದೀಗ ಲಕ್ಷ್ಮೀ ನಿವಾಸದಲ್ಲಿ ಸಿದ್ಧು ಭಾವನಾ ನಿಂತಿರುವ ಸ್ಥಳವಾಗಿದೆ. 
 

Latest Videos

vuukle one pixel image
click me!