ಅಲೆಲೇ ಪಬ್‌ಗೆ ಸೆಲ್ವಾರ್ ಹಾಕೋ ಶೋಕಿ ಶುರುವಾಯ್ತಾ?; ಭವ್ಯಾ ಗೌಡ ಕಾಲೆಳೆದ ನೆಟ್ಟಿಗರು
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಭವ್ಯಾ ಗೌಡ ಹೊಸ ಲುಕ್.ಬೆಲೆ ಕೇಳಿ ಖುಷಿ ಆಯ್ತು......
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಭವ್ಯಾ ಗೌಡ ಹೊಸ ಲುಕ್.ಬೆಲೆ ಕೇಳಿ ಖುಷಿ ಆಯ್ತು......
ಕಿರುತೆರೆ ಸುಂದರಿ, ಬಿಗ್ ಬಾಸ್ ಸ್ಪರ್ಧಿ ಭವ್ಯಾ ಗೌಡ ಹಳದಿ ಬಣ್ಣದ ಡಿಸೈನರ್ ಸೆಲ್ವಾರ್‌ನಲ್ಲಿ ಮಿಂಚಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದೆ.
ಹಳದಿ ಬಣ್ಣದ ಸೆಲ್ವಾರ್ ಮೇಲೆ ಬಿಳಿ ಬಣ್ಣದ ಡಿಸೈನ್ ಇದೆ. ಇದನ್ನು ಅನ್‌ಲೀಶ್ ಡೀವಾ ಎಂಬ ಅಕೌಂಟ್‌ನಲ್ಲಿ ಡಿಸೈನ್ ಮಾಡಿ ಮಾರಾಟ ಮಾಡುತ್ತಿದ್ದಾರೆ.
ಈ ಸೆಲ್ವಾರ್‌ನ ಅಂದಾಚು ಬೆಲೆ ಸುಮಾರು 4 ಸಾವಿರದಿಂದ 6 ಸಾವಿರದವರೆಗೂ ಇದೆ ಎನ್ನಲಾಗಿದೆ. ಇಲ್ಲಿ ಜನರ ಗಮನ ಸೆಳೆದಿರುವುದು ಭವ್ಯಾ ಯಾವ ಜಾಗಕ್ಕೆ ಧರಿಸಿದ್ದಾರೆ ಎಂದು.
ಹೋಟೆಲ್ ಅಥವಾ ಸೆಫ್‌ಗೆ ಈ ಸೆಲ್ವಾರ್ ಲುಕ್‌ನಲ್ಲಿ ಭವ್ಯಾ ಗೌಡ ಹೋಗಿದ್ದಾರೆ. ಆದರೆ ನೆಟ್ಟಿಗರು ಇದನ್ನು ಪಬ್ ಎಂದು ಅಪಾರ್ಥ ಮಾಡಿಕೊಂಡು ನೆಗೆಟಿವ್ ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ.
ಭವ್ಯಾ ಗೌಡ ಸಾಮಾನ್ಯವಾಗಿ ಎಲ್ಲಾ ರೀತಿ ಔಟ್‌ಫಿಟ್‌ಗಳನ್ನು ಧರಿಸುತ್ತಾರೆ. ಒಮ್ಮೆ ಜೀನ್ಸ್ ಪ್ಯಾಂಟ್ ಅಂದ್ರೆ ಮತ್ತೊಮ್ಮೆ ಸೆಲ್ವಾರ್ ಮತ್ತೊಮ್ಮೆ ಮ್ಯಾಕ್ಸಿ ಹಾಗೂ ಮಿನಿ ಹೀಗೆ....
ಬಿಗ್ ಬಾಸ್ ಮನೆಯಲ್ಲಿದ್ದಾಗ ಹಲವಾರು ಬ್ರ್ಯಾಂಡ್‌ಗಳ ಭವ್ಯಾ ಗೌಡರನ್ನು ಸಂಪರ್ಕಿಸಿದ್ದರು. ಅಂದಿನಿಂದ ಭವ್ಯಾ ಧರಿಸುವ ಬಹುತೇಕ ಉಡುಪುಗಳು ಡಿಸೈನರ್ ವೇರ್ ಹಾಗೂ ಕೊಲಾಬೋರೇಷನ್ ಎನ್ನಬಹುದು.